'ಟೆರ್ರಾ ಫಾರ್ಮ್‌ ಕಸ ಸಂಸ್ಕರಣಾ ಘಟಕ ಸರ್ಕಾರ ಸ್ವಾಮ್ಯಕ್ಕೆ ಬೇಡ'..!

By Kannadaprabha NewsFirst Published Feb 19, 2020, 10:17 AM IST
Highlights

ಕಳೆದ ನಾಲ್ಕು ವರ್ಷದಿಂದ ಸ್ಥಗಿತಗೊಂಡಿರುವ ದೊಡ್ಡಬಳ್ಳಾಪುರದ ದೊಡ್ಡ ಬೆಳಹೊಂಗಲದ ಬಳಿಯ ‘ಟೆರ್ರಾ ಫಾರ್ಮ್‌’ ಕಸ ಸಂಸ್ಕರಣಾ ಘಟಕವನ್ನು ಸರ್ಕಾರ ಖರೀದಿಸಬಾರದು ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಆಗ್ರಹಿಸಿದ್ದಾರೆ.

ಬೆಂಗಳೂರು(ಫೆ.19): ಕಳೆದ ನಾಲ್ಕು ವರ್ಷದಿಂದ ಸ್ಥಗಿತಗೊಂಡಿರುವ ದೊಡ್ಡಬಳ್ಳಾಪುರದ ದೊಡ್ಡ ಬೆಳಹೊಂಗಲದ ಬಳಿಯ ‘ಟೆರ್ರಾ ಫಾರ್ಮ್‌’ ಕಸ ಸಂಸ್ಕರಣಾ ಘಟಕವನ್ನು ಸರ್ಕಾರ ಖರೀದಿಸಬಾರದು ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸೋಮವಾರ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಟೆರ್ರಾ ಫಾರ್ಮ್‌ ಘಟಕ ಖರೀದಿ ಮಾಡಿ ಅಲ್ಲಿ ‘ವೇಸ್ಟ್‌ ಟು ಎನರ್ಜಿ’ ಘಟಕ ಸ್ಥಾಪಿಸುವುದಾಗಿ ಹೇಳಿದೆ.

ಅಕ್ರಮ ಕಟ್ಟಡಕ್ಕೆ ದುಪ್ಪಟ್ಟು ತೆರಿಗೆ: ಸಿಎಂ BSY ವಿಧೇಯಕ ಮಂಡನೆ

2016ರ ಮಾರ್ಚ್‌ನಲ್ಲಿ ಟೆರ್ರಾ ಫಾರ್ಮ್‌ ಘಟಕ ವೈಜಾನಿಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಂದ್‌ ಮಾಡಿಸಿತ್ತು. ಟೆರ್ರಾ ಫಾರ್ಮ್‌ ಘಟಕ ಸ್ಥಾಪನೆಯಿಂದ ಸ್ಥಳೀಯರಿಗೆ ತೀವ್ರ ತೊಂದರೆ ಉಂಟಾಗಿತ್ತು. ಹೀಗಾಗಿ, ಘಟಕ ಸ್ಥಗಿತಗೊಳಿಸುವಂತೆ 2015-16ರಲ್ಲಿ ಪ್ರತಿಭಟನೆ ನಡೆಸಿದ್ದರು. ಘಟಕ ಸ್ಥಗಿತಗೊಳಿಸಿದ ಮೇಲೆ ಅಲ್ಲಿನ ಜನ ನೆಮ್ಮದಿಯಾಗಿದ್ದಾರೆ. ಇದೀಗ ಮತ್ತೆ ಘಟಕ ಆರಂಭಿಸಿ ಅಲ್ಲಿನ ಜನ ನೆಮ್ಮದಿ ಹಾಳು ಮಾಡುವುದಕ್ಕೆ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

click me!