ಬಸವಕೇಂದ್ರ ಮುರುಘಾಮಠದ ಆಡಳಿತಾಧಿಕಾರಿಯಾಗಿ ರಾಜ್ಯ ಸರ್ಕಾರದಿಂದ ನೇಮಿಸಲ್ಪಟ್ಟಿದ್ದ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರ ಏಳು ತಿಂಗಳ ಆಡಳಿತದ ಅವಧಿಯಲ್ಲಿ ಬರೊಬ್ಬರಿ ಹತ್ತುವರೆ ಕೋಟಿ ರುಪಾಯಿಯಷ್ಟುಮಠದ ಸಾಲ ತೀರುವಳಿ ಮಾಡಲಾಗಿರುವ ಅಂಶ ಬೆಳಕಿಗೆ ಬಂದಿದೆ.
ಚಿತ್ರದುರ್ಗ (ಜು.6) : ಬಸವಕೇಂದ್ರ ಮುರುಘಾಮಠದ ಆಡಳಿತಾಧಿಕಾರಿಯಾಗಿ ರಾಜ್ಯ ಸರ್ಕಾರದಿಂದ ನೇಮಿಸಲ್ಪಟ್ಟಿದ್ದ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರ ಏಳು ತಿಂಗಳ ಆಡಳಿತದ ಅವಧಿಯಲ್ಲಿ ಬರೊಬ್ಬರಿ ಹತ್ತುವರೆ ಕೋಟಿ ರುಪಾಯಿಯಷ್ಟುಮಠದ ಸಾಲ ತೀರುವಳಿ ಮಾಡಲಾಗಿರುವ ಅಂಶ ಬೆಳಕಿಗೆ ಬಂದಿದೆ.
ಮುರುಘಾಮಠ(murugha math)ಕ್ಕೆ ಆಡಳಿತಾಧಿಕಾರಿಯಾಗಿ ಜಿಲ್ಲಾ ಪ್ರಧಾನ ಸತ್ರನ್ಯಾಯಾಧೀಶೆ ಪ್ರೇಮಾವತಿ ಮನಗೂಳಿ ಅವರನ್ನು ಹೈಕೋರ್ಟ್ (Karnataka highcourt) ತಾತ್ಕಾಲಿಕವಾಗಿ ನೇಮಕ ಮಾಡಿದ ನಂತರ ಮಠದಿಂದ ನಿರ್ಗಮಿಸಿರುವ ನಿಕಟಪೂರ್ವ ಆಡಳಿತಾಧಿಕಾರಿ ವಸ್ತ್ರದ ಅವರು ಎಸ್‌ಜೆಎಂ ವಿದ್ಯಾ ಸಂಸ್ಥೆ ಸಿಬ್ಬಂದಿಗೆ ಪತ್ರವೊಂದನ್ನು ಬರೆದು ಅಭಿನಂದನೆ ಸಲ್ಲಿಸಿದ್ದಾರೆ. ಈ ಪತ್ರದಲ್ಲಿ ಸಾಲ ತೀರುವಳಿ ಸಂಗತಿಯ ಪ್ರಧಾನವಾಗಿ ಪ್ರಸ್ತಾಪಿಸಲಾಗಿದೆ. ಈ ಪತ್ರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
undefined
Murugha math: ಮುರುಘಾಮಠಕ್ಕೆ ತಾತ್ಕಾಲಿಕ ಆಡಳಿತಾಧಿಕಾರಿ ನೇಮಿಸಿದ ಕೋರ್ಟ್
ರಾಜ್ಯ ಸರ್ಕಾರದ ಆದೇಶದ ಮೇರೆಗೆ 13-12-2022ರಂದು ಎಸ್‌ಜೆಎಂ ವಿದ್ಯಾಪೀಠಕ್ಕೆ ಅಡಳಿತಾಧಿಕಾರಿಗಳಾಗಿ ನೇಮಕಗೊಂಡು, 3.07.2023 ರವರೆಗೆ ಕರ್ತವ್ಯ ನಿರ್ವಹಿಸಿದ್ದೇನೆ. ವಿದ್ಯಾಪೀಠದ ನೌಕರರಿಗೆ ಯಾವುದೇ ತೊಂದರೆಯಾಗದಂತೆ ಅಭ್ಯುದಯಕ್ಕೆ ಶ್ರಮಿಸಿದ್ದೇನೆ. ಸರ್ಕಾರದ ಒಬ್ಬ ಪ್ರತಿನಿಧಿಯಾಗಿ ನನ್ನ ಕೆಲಸವನ್ನು ಕಾಯ ವಾಚಾ ಮನಸ್ಸಿನಿಂದ ನಿರ್ವಹಿಸಿದ್ದೇನೆ. ಈ ಸಂದರ್ಭದಲ್ಲಿ ಧೈರ್ಯ ತುಂಬಿ, ಕೆಲಸ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಲು ನನಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಕ್ಕಾಗಿ ಸಮಸ್ತ ನೌಕರರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
ಏಳು ತಿಂಗಳ ಅವಧಿಯಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಉಲ್ಲೇಖ ಮಾಡಿರುವ ಪಿ.ಎಸ್.ವಸ್ತ್ರದ, ಸಾಲ ತೀರಿಸಿದ ಪ್ರಮಾಣವ ದಾಖಲು ಮಾಡಿದ್ದಾರೆ. ತಾವು ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗ ಮುರುಘಾಮಠದ ಸಾಲ ಆಕ್ಸಿಸ್ ಬ್ಯಾಂಕ್‌ನಲ್ಲಿ 19.82 ಕೋಟಿ ರು. ಮತ್ತು ಎಸ್‌ಜೆಎಂ ಬ್ಯಾಂಕ್‌ನಲ್ಲಿ 12.44 ಕೋಟಿ ರು. ಸೇರಿ ಒಟ್ಟು 32.27 ಕೋಟಿಯಷ್ಟಿತ್ತು.
ಮುರುಘಾಮಠದ ಆಡಳಿತಾಧಿಕಾರಿ ನೇಮಕ ರದ್ದುಗೊಳಿಸಿ ಹೈಕೋರ್ಟ್: ಸರ್ಕಾರಕ್ಕೆ ಮುಖಭಂಗ
ತಮ್ಮ ಆಡಳಿತದ ಅವಧಿಯಲ್ಲಿ ಆಕ್ಸಿಸ್ ಬ್ಯಾಂಕ್‌ನ 5.51 ಕೋಟಿ ಹಾಗೂ ಎಸ್‌ಜೆಎಂ ಬ್ಯಾಂಕ್‌ಗೆ 4.78 ಕೋಟಿಯಷ್ಟುಸಾಲವ ಮರು ಪಾವತಿ ಮಾಡಿದ್ದೇನೆ. ಒಟ್ಟು ಮರುಪಾವತಿ ಮಾಡಿದÜ ಸಾಲದ ಮೊತ್ತ 10.30 ಕೋಟಿಗಳೆಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಬೇರೆ ಬೇರೆ ಬ್ಯಾಂಕ್‌ಗಳಲ್ಲಿ 5.50 ಕೋಟಿ ರು. ಸ್ಥಿರ ಠೇವಣಿ ಇಡಲಾಗಿದೆ. ಅಲ್ಲದೇ ಚಾಲ್ತಿ ಖಾತೆಯಲ್ಲಿ 6.16 ಕೋಟಿಯಷ್ಟುಹಣವಿದೆ. ಮೆಡಿಕಲ್ ಕಾಲೇಜಿಗೆ ಸಂಬಂಧ ಪಟ್ಟಂತೆ ಬಾಕಿ ಉಳಿಸಿಕೊಳ್ಳಲಾದ ನಗರಸಭೆಯ ಕಂದಾಯ 10.20 ಲಕ್ಷ ರು. ಪಾವತಿಸಲಾಗಿದೆ. ಅಲ್ಲದೇ ಚಿತ್ರದುರ್ಗ, ಹೊಳಲ್ಕೆರೆ, ಸೋಮವಾರಪೇಟೆ, ಗುಬ್ಬಿ, ಹೊಸಹಳ್ಳಿಯಲ್ಲಿರುವ ಕೃಷಿ ಭೂಮಿಯನ್ನು ಅಭಿವೃದ್ಧಿ ಪಡಿಸಿರುವುದಾಗಿ ಪಿ.ಎಸ್.ವಸ್ತ್ರದ ಪತ್ರದಲ್ಲಿ ತಿಳಿಸಿದ್ದಾರೆ.