ದೇವರಹಿಪ್ಪರಗಿ: ಬಾವಿ ಕೊರೆಯುತ್ತಿದ್ದ ಗ್ರಾಮಸ್ಥರಿಗೆ ತಹಸೀಲ್ದಾರ್ ಅಡ್ಡಿ; ಮುಂದೇನಾಯ್ತು ನೋಡಿ!

By Kannadaprabha News  |  First Published Mar 9, 2024, 12:13 AM IST

ತಾಲೂಕಿನ ಕೋರವಾರ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಸ್ವಂತ ಹಣದಿಂದ ಪುರದಾಳ ಕೆರೆ ಬಳಿ ಬಾವಿ ಕೊರೆಯುತ್ತಿದ್ದಾಗ ಏಕಾಏಕಿ ಸಿಂದಗಿ ತಹಸೀಲ್ದಾರ್ ದಾಳಿ ನಡೆಸಿ ವಾಹನದ ಬೀಗ ತೆಗೆದುಕೊಂಡಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಹೆಸ್ಕಾಂ ಕಚೇರಿಯಿಂದ ಪುರದಾಳ ಗ್ರಾಮಕ್ಕೆ ಹೋಗುವ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಪ್ರತಿಭಟನೆ ನಡೆಸಿದರು.


ದೇವರಹಿಪ್ಪರಗಿ (ಮಾ.9): ತಾಲೂಕಿನ ಕೋರವಾರ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಸ್ವಂತ ಹಣದಿಂದ ಪುರದಾಳ ಕೆರೆ ಬಳಿ ಬಾವಿ ಕೊರೆಯುತ್ತಿದ್ದಾಗ ಏಕಾಏಕಿ ಸಿಂದಗಿ ತಹಸೀಲ್ದಾರ್ ದಾಳಿ ನಡೆಸಿ ವಾಹನದ ಬೀಗ ತೆಗೆದುಕೊಂಡಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಹೆಸ್ಕಾಂ ಕಚೇರಿಯಿಂದ ಪುರದಾಳ ಗ್ರಾಮಕ್ಕೆ ಹೋಗುವ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಪ್ರತಿಭಟನೆ ನಡೆಸಿದರು.

ಗುಬ್ಬೇವಾಡ ಗ್ರಾಪಂ ಅಧ್ಯಕ್ಷೆ ನಮ್ಮನ್ನು ಸಂಪರ್ಕಿಸದೆ ಕೋರವಾರ ಗ್ರಾಮಸ್ಥರು ಕೆರೆ ಬಳಿ ಬಾವಿ ಕೊರೆಯುತ್ತಿದ್ದು, ಅದನ್ನು ತಡೆಯುವಂತೆ ತಹಸೀಲ್ದಾರ್‌ಗೆ ದೂರು ನೀಡಿದ್ದಾರೆ. ಇದರಿಂದಾಗಿ ತಹಶೀಲ್ದಾರ್‌ ಬೆಳಗ್ಗೆ ಸ್ಥಳಕ್ಕೆ ಆಗಮಿಸಿ ಬೋರ್‌ವೆಲ್‌ ಕೊರೆಯುತ್ತಿದ್ದ ಜೆಸಿಬಿ ವಾಹನದ ಬೀಗ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪುರದಾಳ ಗ್ರಾಮಕ್ಕೆ ಹೋಗುವ ವಿದ್ಯುತ್ ಸಂಪರ್ಕ ಕಡಿತಗೊಳಿ ಪ್ರತಿಭಟನೆಯನ್ನು ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ವಿಷಯ ತಿಳಿದು ಎಚ್ಚೆತ್ತ ತಹಸೀಲ್ದಾರ್ ಗ್ರಾಮಸ್ಥರಿಗೆ ಜೆಸಿಯ ಕೀ ಯನ್ನು ವಾಪಸ್ ಕಳಿಸಿದ್ದಾರೆ.

Latest Videos

undefined

ದೇವದುರ್ಗವನ್ನು ಮಾದರಿ ಪಟ್ಟಣವನ್ನಾಗಿಸುವ ಸಂಕಲ್ಪ: ಶಾಸಕಿ ಕರೆಮ್ಮ

ಸ್ಥಳಕ್ಕೆ ತಹಸೀಲ್ದಾರ್ ಆಗಮಿಸಿ ಸಮಸ್ಯೆ ಬಗೆಹರಿಸುವವರೆಗೂ ನಾವು ಕದಲುವುದಿಲ್ಲ ಎಂದು ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಯರು ಮತ್ತು ಸಂಘಟನೆ ಪದಾಧಿಕಾರಿಗಳು ಪಟ್ಟು ಹಿಡಿದಿದ್ದರು. ಬಳಿಕ ಬೀಗ ವಾಪಸ್ ನೀಡಿದ್ದಕ್ಕೆ ಸುಮ್ಮನಾಗಿದ್ದಾರೆ. ಇನ್ನು ಸಮಸ್ಯೆ ಕುರಿತು ಇಂಡಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ದೇವರಹಿಪ್ಪರಗಿ ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಕುರಿತು ಮನವಿ ಮಾಡಲಾಗಿದೆ. ಈಗ ನೀರಿನ ಸಮಸ್ಯೆ ಬಗೆಹರಿಸುವವರು ಯಾರು ಎಂದು ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದಾರೆ.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ, ಛಾಯಾಗೊಳ, ರಫೀಕ ಬ್ಯಾಕೋಡ, ಉಪಾಧ್ಯಕ್ಷ ಮಾದೇವ ರಾಮನಹಳ್ಳಿ, ಗ್ರಾಪಂ ಸದಸ್ಯರಾದ ಭೀಮನಗೌಡ ಶಿ, ಕುಳೇಕುಮಟಗಿ, ಬಸನಗೌಡ ಬಿರಾದಾರ, ಶರಣಗೌಡ ನಾಯ್ಕಲ್, ಶಿವನಗೌಡ ಪಾಟೀಲ, ಬಸವರಾಜ ಜಾದವ, ಮಹಾಂತೇಶ ಪಾಟೀಲ, ಯಾಶೀನ್ ವಡಗೇರಿ, ಹಣಮಂತ ದೊಡ್ಡಮನಿ, ದಯಾನಂದ ಗುತ್ತರಗಿಮಠ, ಅಯಿಬ್ ತುರಕನಗೇರಿ, ಅರವೀಂದ ರಾಠೋಡ, ಉಮೇಶ ಕಾಖಂಡಕಿ, ಹಾಗೂ ಪಿಡಿಒ ಕಾಶಿನಾಥ ಕಡಕಬಾವಿ, ಸುರೇಶಗೌಡ ಪೋಲಿಸ್ ಪಾಟೀಲ, ಮಾಂತಗೌಡ ಸುಂಬಡ, ಮಲ್ಲನಗೌಡ ಆರ್, ಬಿರಾದಾರ, ರಮೇಶ ಚಾಂದಕವಟೆ, ಬಸವರಾಜ ಏವೂರ, ಗುರುರಾಜ ಹುಣಸಗಿ, ಚನ್ನಪ್ಪಗೌಡ ಬಿರಾದಾರ, ಸಂತೋಷ ಮನಗೂಳಿ, ಸಿದ್ರಾಮಪ್ಪ ಅವಟಿ ಇದ್ದರು.

 

ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರಕ್ಕೆ ಬಿಜೆಪಿ ಮುಂದಾಗಿದೆ: ಸಚಿವ ಎಂ.ಬಿ.ಪಾಟೀಲ್

ಗುಬ್ಬೇವಾಡ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮನವಿ ಸಲ್ಲಿಸಿದ ಕಾರಣ ಕೋರವಾರ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಕೂಡಿಕೊಂಡು ಪುರದಾಳ ಕೆರೆಯ ಸಮೀಪ ಬಾವಿ ಕೊರೆಯುತ್ತಿರುವ ಕಾರಣ ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿಯ ಕೀ ತೆಗೆದುಕೊಂಡು ಕೆಲಸ ನಿಲ್ಲಿಸಲಾಗಿದೆ. ನಂತರ ಜೆಸಿಬಿಯ ಕೀ ಗ್ರಾಮಸ್ಥರಿಗೆ ಕಳಿಸಲಾಗಿದೆ.

- ಪ್ರದೀಪಕುಮಾರ ಹಿರೇಮಠ, ತಹಶೀಲ್ದಾರ್ ಸಿಂದಗಿ.

ಪುರದಾಳ ಕೆರೆ ಕೋರವಾರ ಗ್ರಾಮದ ಸುಮಾರು 240ಎಕರೆ ಕ್ಷೇತ್ರ ಮುಳಗಡೆಯಾಗುತ್ತದೆ. ಆದರೂ, ಕೋರವಾರ ಗ್ರಾಮದ ಸಾರ್ವಜನಿಕರಿಗೆ ಕುಡಿಯಲು ನೀರಿಲ್ಲದ ಕಾರಣ ಗ್ರಾಮಸ್ಥರು ಕೂಡಿಕೊಂಡು ಹಣ ಹಾಕಿ ಕುಡಿಯುವ ನೀರಿಗಾಗಿ ಬಾವಿ ಕೊರೆಯುತ್ತಿದ್ದೆವು. ಸಿಂದಗಿ ತಹಸೀಲ್ದಾರ್ ಏಕಾಏಕಿ ಬಂದ್ ಮಾಡಿದ್ದರಿಂದ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು. ನ್ಯಾಯ ನೀಡಬೇಕಾದ ತಹಸೀಲ್ದಾರ್ ಏಕಾಏಕಿ ಕುಡಿಯುವ ನೀರಿಗೆ ಸಹಕಾರ ನೀಡದ ಕಾರಣ ಬಂದು ಕ್ಷಮೆ ಕೇಳುವರೆಗೂ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡುವುದಿಲ್ಲ.

-ಕೋರವಾರ ಗ್ರಾಮದ ಮುಖಂಡರು.

click me!