
ಮೌನೇಶ ವಿಶ್ವಕರ್ಮ
ಬಂಟ್ವಾಳ(ಜೂ.23): ಲಾಕ್‌ಡೌನ್ ವೇಳೆ ಆರ್ಥಿಕ ಸ್ವಾವಲಂಬನೆ ಸಾಧಿಸುವ ದೃಷ್ಟಿಯಿಂದ ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಆಹಾರೋದ್ಯಮ ನಡೆಸಲು ಮುಂದಾಗಿದ್ದಾರೆ. ಆ ಮೂಲಕ ಪೋಷಕರಿಗೂ-ಆಡಳಿತ ಮಂಡಳಿಗೂ ಹೊರೆಯಾಗದಂತೆ ಕೊರೋನಾ ಸಂಕಷ್ಟಕ್ಕೆ ದಿಟ್ಟಉತ್ತರ ನೀಡಲು ಸಜ್ಜಾಗಿದ್ದಾರೆ.
-ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಅಂಬಿಕಾ ವಿದ್ಯಾಲಯದ ಶಿಕ್ಷಕವೃಂದದ ವಿಶಿಷ್ಟಪ್ರಯತ್ನ.
ಕೊರೋನಾ ಸೋಂಕಿನ ಭೀತಿಯಿಂದಾಗಿ ಈ ಬಾರಿ ಮಕ್ಕಳ ದಾಖಲಾತಿ ನಡೆಯದಿರುವುದೂ ಖಾಸಗಿ ಶಾಲೆಗಳಿಗೆ ಆರ್ಥಿಕ ಸಂಕಷ್ಟತಂದೊಡ್ಡಿದೆ. ಕೆಲವು ಕಡೆ ಅನುದಾನರಹಿತ ಶಾಲಾ ಶಿಕ್ಷಕರ ಮಾಸಿಕ ವೇತನಕ್ಕೂ ಅಗತ್ಯ ಕತ್ತರಿ ಬಿದ್ದಿದ್ದರೆ, ಕೆಲವು ಖಾಸಗಿ ವಿದ್ಯಾಸಂಸ್ಥೆಗಳಂತೂ ಶೇ.10ರಷ್ಟುಶಿಕ್ಷಕರನ್ನೂ ಕೆಲಸದಿಂದ ಕಿತ್ತುಹಾಕಿದ್ದಾರೆ.
ಇಂತಹ ಸನ್ನಿವೇಶದಲ್ಲಿ ಸಂಸ್ಥೆಯ ಉಪನ್ಯಾಸಕ ಸತೀಶ್ ನೇತೃತ್ವದಲ್ಲಿ ಸಮಾನ ಮನಸ್ಕರ ಗುಂಪೊಂದು ‘ಶಿವಂ ಫುಡ್ ಫ್ರಾಡಕ್ಟ್’ ಆರಂಭಿಸಿದೆ. ಮೊದಲ ದಿನವಾದ ಸೋಮವಾರ ಹಲಸಿನ ಚಿ±್ಸ… ಹಾಗೂ ಹಲಸಿನ ಬೀಜದ ಲಡ್ಡು ತಯಾರಿಸಿದ್ದಾರೆ. ಆಹಾರ ಉತ್ಪನ್ನಗಳ ತಯಾರಿಗೆ ಶಾಲೆಯ ಕೊಠಡಿಯನ್ನೇ ಬಳಸಲಾಗಿದ್ದು, ಮಾÓ್ಕ…, ತಲೆಗವಸು ಹಾಗೂ ಕೈ ಕವಚಗಳನ್ನು ಧರಿಸಿ, ಶುಚಿಯ ಜೊತೆಗೆ ರುಚಿಕರ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಈ ಯೋಜನೆಗೆ ಆರಂಭಿಕ ಹಂತದಲ್ಲಿ ವಿದ್ಯಾಲಯದ ಮಕ್ಕಳ ಪೋಷಕರೇ ಗ್ರಾಹಕರಾಗಲಿದ್ದು ಬೇಡಿಕೆಯನ್ನು ಅನುಸರಿಸಿ, ವಿವಿಧ ತರಹದ ತಿಂಡಿಗಳ ಮೂಲಕ ಮತ್ತಷ್ಟುವಿಸ್ತಾರಗೊಳಿಸುವ ಯೋಚನೆ ಇದೆ.
ಸಂಸ್ಥೆಯ ಅಧ್ಯಕ್ಷರಾದ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಪ್ರಾಂಶುಪಾಲೆ ರಾಜಶ್ರೀ ನಟ್ಟೋಜ ಪೂರ್ಣ ಬೆಂಬಲ ನೀಡುತ್ತಿದ್ದಾರೆ. ಶಾಲೆ ಆರಂಭವಾಗುವವರೆಗೆ ನಿರಂತರವಾಗಿ ಶಿವಂ ಫುಡ್ ಪ್ರಾಡಕ್ಟ್ ಮುಂದುವರಿಯಲಿದ್ದು ಬೇಡಿಕೆ ಇದ್ದಲ್ಲಿ ನಂತರವೂ ಮುನ್ನಡೆಸುವ ಇರಾದೆ ಇದೆ ಎಂದು ಉಪನ್ಯಾಸಕ ಸತೀಶ್ ತಿಳಿಸಿದ್ದಾರೆ.