ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ಪಟ್ಟಣದ ಶಾಂತಿಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ನಡೆದ ಘಟನೆ
ಎಚ್.ಡಿ.ಕೋಟೆ(ನ.26): ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರೊಬ್ಬರು ಸ್ಟೀಲ್ ಸ್ಕೇಲ್‌ನಿಂದ ವಿದ್ಯಾರ್ಥಿಗೆ ಥಳಿಸಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ. ಎಚ್.ಡಿ.ಕೋಟೆ ಪಟ್ಟಣದ ಶಾಂತಿಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ಅಮಾನವೀಯ ಘಟನೆ ನಡೆಸಿದೆ. ಶಿಕ್ಷಕನಿಂದ ಹೊಡೆತ ತಿಂದ ವಿದ್ಯಾರ್ಥಿ ಕೈಗೆ ಗಂಭೀರವಾದ ಗಾಯವಾಗಿದೆ ಅಂತ ತಿಳಿದು ಬಂದಿದೆ.
8ನೇ ತರಗತಿಯ ಅಮೃತ್ ಗಾಯಗೊಂಡ ವಿದ್ಯಾರ್ಥಿಯಾಗಿದ್ದಾನೆ. ಬಿಡುವಿನ ವೇಳೆಯಲ್ಲಿ ಶಾಲಾ ಕೊಠಡಿಯಲ್ಲಿ ಸೀಮೆಸುಣ್ಣ ಮುರಿದು ಅಮೃತ್ ಆಟವಾಡುತ್ತಿದ್ದ. ಸೀಮೆಸುಣ್ಣ ಮುರಿದಿದಕ್ಕೆ ವಿದ್ಯಾರ್ಥಿಗೆ ಶಿಕ್ಷಕ ಸಿದ್ದರಾಜು ಮನಬಂದಂತೆ ಥಳಿಸಿದ್ದಾನೆ.
ತುಮಕೂರು: ಕುಡಿದ ಮತ್ತಿನಲ್ಲಿ ಮಕ್ಕಳ ಮೇಲೆ ಶಾಲಾ ಮಾಲೀಕನ ಮಗನಿಂದ ಥಳಿತ, ಮೂವರ ಮೂಳೆ ಮುರಿತ
ಪೋಷಕರಿಗೆ ಅಮೃತ್ ಕಟರ್‌ನಿಂದ ಕೈ ಕಟ್ ಮಾಡಿಕೊಂಡಿರುವುದಾಗಿ ಶಿಕ್ಷಕ ಸಿದ್ದರಾಜು ಸುಳ್ಳು ಮಾಹಿತಿ ನೀಡಿದ್ದರು. ಗಾಯಾಳು ಅಮೃತ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಶಾಲೆಗೆ ತಾಲ್ಲೂಕು ಶಿಕ್ಷಣಾದಿಕಾರಿ ಉದಯಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.