ತಮಿಳುನಾಡು ಮೂಲದ ವಿಮಾ ಕಂಪನಿಯಿಂದ ಗ್ರಾಹಕರಿಗೆ ದೋಖಾ..!

By Kannadaprabha NewsFirst Published Sep 1, 2019, 8:38 AM IST
Highlights

ವಿಮಾ ಕಂಪನಿಗಳು ಜನರಿಂದ ಹಣ ಸಂಗ್ರಹಿಸಿ ಮೋಸ ಮಾಡುವುದು ಇದೇ ಮೊದಲೇನಲ್ಲ. ಆದರೆ ಜನ ಮೋಸ ಹೋಗುತ್ತಲೇ ಇದ್ದಾರೆ. ಮಂಡ್ಯದಲ್ಲಿ ತಮಿಳುನಾಡು ಮೂಲದ ಕಂಪನಿಯೊಂದು ಗ್ರಾಹಕರನ್ನು ವಂಚಿಸಿದೆ. ಉಚಿತ ಚಿಕಿತ್ಸೆ ಭರವಸೆ ನೀಡಿ, ಅಗತ್ಯ ಬಂದಾಗ ವಿಮೆ ಸೌಲಭ್ಯ ನೀಡದೆ ತಪ್ಪಿಸಿಕೊಂಡ ಕಂಪನಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಮಂಡ್ಯ(ಸೆ.01): ಕುಟುಂಬ ಎಲ್ಲಾ ಸದಸ್ಯರಿಗೂ ಉಚಿತ ಚಿಕಿತ್ಸೆ ಕೊಡಿಸುತ್ತೇವೆ ಎಂದು ಜನರನ್ನು ನಂಬಿಸಿ ತೊಂದರೆಯಾದ ಸಮಯದಲ್ಲಿ ಚಿಕಿತ್ಸೆ ಕೊಡಿಸದೆ ಖಾಸಗಿ ವಿಮಾ ಕಂಪನಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಕಂಪನಿಯ ಪರವಾನಗಿಯನ್ನು ರದ್ದು ಪಡಿಸಿ, ಕ್ರಿಮಿನಿಲ್‌ ಮೊಕದ್ದಮೆ ದಾಖಲು ಮಾಡಬೇಕು ಎಂದು ವಿಮಾ ಕಂಪನಿಯಿಂದ ಅನ್ಯಾಯಕ್ಕೆ ಒಳಗಾಗಿರುವ ಎಂ.ಡಿ.ಜ್ಯೋತಿ ಶನಿವಾರ ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜ್ಯೋತಿ, ತಮಿಳುನಾಡಿನ ಚೆನ್ನೈ ಮೂಲದ ಸ್ಟಾರ್‌ ಆರೋಗ್ಯ ವಿಮಾ ಕಂಪನಿಯಿಂದ ನಮಗೆ ವಂಚನೆಯಾಗಿದೆ ಎಂದು ದಾಖಲಾತಿಗಳನ್ನು ಬಿಡುಗಡೆ ಮಾಡಿ ತಮಗಾದ ನೋವು ತೋಡಿಕೊಂಡರು.

11 ತಿಂಗಳ ಹಿಂದೆ ಸ್ಟಾರ್‌ ಆರೋಗ್ಯ ವಿಮಾ ಕಂಪನಿಯ ಏಜೆಂಟ್‌ ವಿಠಲ್‌ ನಮ್ಮ ಬಳಿ ಬಂದು ತಮ್ಮ ಕಂಪನಿಯಲ್ಲಿ ಆರೋಗ್ಯ ವಿಮೆ ಮಾಡಿಸಿದರೆ ಕುಟುಂಬ ಎಲ್ಲಾ ಸದಸ್ಯರಿಗೂ ಆರೋಗ್ಯಕ್ಕೆ ತೊಂದರೆಯಾದರೆ ಹಣ ರಹಿತವಾಗಿ ಮೂರು ಲಕ್ಷ ರು.ವರೆಗೂ ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹಣ ಪಡೆದು ಆರೋಗ್ಯ ವಿಮೆ ಮಾಡಿಸಿಕೊಂಡಿದರು.

'ಕೇಂದ್ರ ಸರ್ಕಾರದ್ದು ಸೇಡಿನ ರಾಜಕಾರಣ, ಇಡಿ ದುರ್ಬಳಕೆ': ಕಾಂಗ್ರೆಸ್ ಕಿಡಿ

ನನ್ನ ಮಗ ರಾಹುಲ್‌ ತಿಂಗಳ ಹಿಂದೆ ಆಟವಾಡುವಾಗಿ ಬಿದ್ದು ಮೂಳೆ ಮುರಿತಕ್ಕೆ ಒಳಗಾಗಿದ್ದ. ಪರೀಕ್ಷೆ ನಡೆಸಿದ ವೈದ್ಯರು ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿಸಬೇಕು ಎಂದು ತಿಳಿಸಿದರು. ಅವರ ಸೂಚನೆಯಂತೆ ನಮಗೆ ಚಿಕಿತ್ಸೆ ಕೊಡಿಸಿ ಎಂದು ಸ್ಟಾರ್‌ ವಿಮಾ ಕಂಪನಿಯವರಿಗೆ ಎಲ್ಲಾ ದಾಖಲೆಗಳನ್ನು ನೀಡಿದ್ದೇವು. ಆದರೆ ಅವರು ನನ್ನ ಮಗನನ್ನು ಪರಿಶೀಲನೆ ನಡೆಸದೆಯೆ ನಿಮ್ಮ ಮಗು ಬಿದ್ದು ಮೂಳೆ ಮುರಿತವಾಗಿ ಏಳು ವರ್ಷವಾಗಿದೆ. ಈಗ ನಿಮಗೆ ಹಣ ಪಾವತಿ ಮಾಡಲು ಬರುವುದಿಲ್ಲ ಎಂದು ಹಿಂಬರಹ ನೀಡಿದ್ದಾರೆ. ಮಗನ ಶಸ್ತ್ರ ಚಿಕಿತ್ಸೆಗೆ 1.35 ಲಕ್ಷ ರು ಖರ್ಚು ಮಾಡಿದ್ದೇವೆ. ಈಗ ವಿಮಾ ಹಣ ಕೊಡುವುದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ವಂಚನೆ ಮಾಡಿರುವ ಸ್ಟಾರ್‌ ವಿಮಾ ಕಂಪನಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿ ಮುಂದೆ ಆವರು ಯಾರಿಗೂ ವಂಚನೆ ಮಾಡದಂತೆ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಜ್ಯೋತಿ ಆಕ್ರೋಶ ವ್ಯಕ್ತಪಡಿಸಿದರು.

3 ಡಿಸಿಎಂ: ' ಅಮೀತ್ ಶಾ ತಿಳುವಳಿಕೆ ಪ್ರಶ್ನಿಸುವಂತಿಲ್ಲ'

ಇದೇ ಕಂಪನಿಯಿಂದ ವಂಚಿತರಾಗಿರುವ ಕೀರ್ತಿ ಪ್ರಸಾದ್‌ ಎಂಬುವವರು ಮಾತನಾಡಿ, ನನ್ನ ಮಗನಿಗೆ ಜ್ವರ ಬಂದು 10 ಸಾವಿರ ರು. ಆಸ್ಪತ್ರೆಗೆ ಖರ್ಚು ಮಾಡಿ ಕಂಪನಿಗೆ ಬಿಲ್‌ ಕೊಟ್ಟರೆ ಬಿಲ್‌ ಸರಿ ಇಲ್ಲ ಎಂದು ವಿಮಾ ಹಣ ನೀಡಲಿಲ್ಲ ಎಂದು ದೂರಿದರು.

click me!