ದಸಸಂ ಸಂಘಟನೆಯು ಡಿ.27 ಭಾನುವಾರ ಮಿನಿ ವಿಧಾನಸೌಧದ ಮುಂದೆ ಮಾಡಿದ ಪ್ರತಿಭಟನೆಗೆ ಎಚ್ಚೆತ್ತ ತಾಲೂಕು ಆಡಳಿತ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಂಡಿದೆ.
ಕೋಲಾರ(ಜ.01): ಮುಳಬಾಗಿಲು ತಾಲೂಕಿನ ಬಾಚಮಾಕಲಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಒತ್ತುವರಿ ಬಗ್ಗೆ ದಸಸಂ ಸಂಘಟನೆಯು ಡಿ.27 ಭಾನುವಾರ ಮಿನಿ ವಿಧಾನಸೌಧದ ಮುಂದೆ ಮಾಡಿದ ಪ್ರತಿಭಟನೆಗೆ ಎಚ್ಚೆತ್ತ ತಾಲೂಕು ಆಡಳಿತ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಂಡಿದೆ.
ದಸಸಂ ಸಂಘಟನೆ ಮಾಡಿದ ಪ್ರತಿಭಟನೆಯಂದು ತಹಸೀಲ್ದಾರ್ ಕೆ.ಎನ್.ರಾಜಶೇಖರ್ ನೀಡಿದ ಭರವಸೆಯಂತೆ ಸೋಮವಾರ ಭೇಟಿ ನೀಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸರ್ವೆ ನಂ.ನಲ್ಲಿದ್ದ ಒತ್ತುವರಿದಾರರೊಂದಿಗೆ ಚರ್ಚಿಸಿ ಅದಕ್ಕೆ ತಗುಲವು ವೆಚ್ಚ ಅಥಾವ ಬೇರೆ ಸ್ಥಳದಲ್ಲಿ ಜಾಗವನ್ನು ನೀಡಲು ಕಂದಾಯ ಮತ್ತು ಸ್ಥಳೀಯ ಗ್ರಾಪಂಗಳಾದ ಆಲಂಗೂರು ಮತ್ತು ಎಂ.ಗಡ್ಡೂರು ಪಿಡಿಒಗಳು ಜಂಟಿಯಾಗಿ ಚರ್ಚಿಸಿ ಬಹು ದಿನಗಳ ಸಮಸ್ಯೆಗೆ ಪರಿಹಾರವನ್ನು ನೀಡುವಂತೆ ಸೂಚಿಸಿದ್ದಾರೆ.
ನಾವು ಪ್ರೀತಿ ಮಾಡಿ ಮದುವೆಯಾಗಿದ್ದೇವೆ ರಕ್ಷಣೆ ಕೊಡಿ.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಕೆ.ಟಿ.ವೆಂಕಟೇಶಯ್ಯ, ಪಿಡಿಒ ವಿಜಯಮ್ಮ, ಗ್ರಾಮಸ್ಥರಾದ ಅಂಬರೀಷ್, ವಿಜಯಕುಮಾರ್, ಸೋಮು, ಸುಬ್ರಮಣ್ಯಂ ಮತ್ತಿತರರು ಹಾಜರಿದ್ದರು.
ಬಿಜೆಪಿ ಅಥವ ಕಾಂಗ್ರೆಸ್ ಸೇರುತ್ತೇನೆ ಎಂದ ಜೆಡಿಎಸ್ ಮುಖಂಡ