Haveri: ಇಂದು ರಟ್ಟಿಹಳ್ಳಿ ತಾಲೂಕು ಸಾಹಿತ್ಯ ಸಮ್ಮೇಳನ: ಬಿ.ಸಿ.ಪಾಟೀಲ್ ಉದ್ಘಾಟನೆ

By Kannadaprabha News  |  First Published Jan 28, 2023, 9:34 AM IST

ಐತಿಹಾಸಿಕ ವರಕವಿ ಸರ್ವಜ್ಞನ ಜನ್ಮಸ್ಥಳ ಮಾಸೂರು ಗ್ರಾಮದಲ್ಲಿ ಜ. 28ರಂದು ರಟ್ಟೀಹಳ್ಳಿ ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನ ಜರುಗುತ್ತಿದ್ದು, ಈ ಭಾಗದ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಹಾಗೂ ಕನ್ನಡ ಮನಸ್ಸುಗಳು ಕನ್ನಡ ತೇರನ್ನೆಳೆಯಲು ಉತ್ಸುಕರಾಗಿದ್ದಾರೆ. ಮಾಸೂರು ಗ್ರಾಮ ತಳಿರು ತೋರಣಗಳಿಂದ ಮದುವಣಗಿತ್ತಿಯಂತೆ ಶೃಂಗಾರ ಗೊಂಡಿದೆ.


ರಟ್ಟಿಹಳ್ಳಿ (ಜ.28) : ಐತಿಹಾಸಿಕ ವರಕವಿ ಸರ್ವಜ್ಞನ ಜನ್ಮಸ್ಥಳ ಮಾಸೂರು ಗ್ರಾಮದಲ್ಲಿ ಜ. 28ರಂದು ರಟ್ಟೀಹಳ್ಳಿ ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನ ಜರುಗುತ್ತಿದ್ದು, ಈ ಭಾಗದ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಹಾಗೂ ಕನ್ನಡ ಮನಸ್ಸುಗಳು ಕನ್ನಡ ತೇರನ್ನೆಳೆಯಲು ಉತ್ಸುಕರಾಗಿದ್ದಾರೆ. ಮಾಸೂರು ಗ್ರಾಮ ತಳಿರು ತೋರಣಗಳಿಂದ ಮದುವಣಗಿತ್ತಿಯಂತೆ ಶೃಂಗಾರ ಗೊಂಡಿದೆ.

ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವರಕವಿ ಸರ್ವಜ್ಞರ ಅದ್ಧೂರಿ ವೇದಿಕೆ ಸಜ್ಜುಗೊಂಡಿದೆ. ವರಕವಿ ಸರ್ವಜ್ಞ ತ್ರಿಪದಿಗಳ ಮೂಲಕ ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ. ಸರ್ವಜ್ಞ ಕೆರೆಗೆ ಹಾರ ಪ್ರಸಿದ್ಧಿಯ ಮದಗದ ಕೆಂಚಮ್ಮ ತನ್ನ ಸೇವೆ-ತ್ಯಾಗ ಬಲಿದಾನಕ್ಕೆ ಮಾದರಿಯಾಗಿದ್ದಾಳೆ. ಇಂತಹ ಹತ್ತು ಹಲವು ವಿಶೇಷ ಸಂಗತಿಗಳು ಮಾಸೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಈ ಸಾಹಿತ್ಯ ಜಾತ್ರೆಯಲ್ಲಿ ವಿವಿಧ ಸಾಹಿತಿಗಳು, ಕಲಾವಿದರು, ಜನಪ್ರತಿನಿಧಿಗಳು ಬರಹಗಾರರು, ಮಹಿಳೆಯರು ಕನ್ನಡ ಪರ ಮನಸ್ಸುಗಳ ಪಾಲ್ಗೊಂಡು ಈ ಸಮ್ಮೇಳನವನ್ನು ಐತಿಹಾಸಿಕವಾಗಿಸಲು ಉತ್ಸುಕರಾಗಿದ್ದಾರೆ.

Tap to resize

Latest Videos

undefined

Shaurya Puraskar : ದಾವಣಗೆರೆಗೆ ಕೀರ್ತಿ: ಬಾಲಕನ ಸಮಯ ಪ್ರಜ್ಞೆ, ಸಾಹಸಕ್ಕೆ ಶೌರ್ಯ ಪ್ರಶಸ್ತಿ!

ಲಾಂಛನ ವಿಶೇಷತೆ

ಚಿತ್ರಕಲಾ ಶಿಕ್ಷಕರಾದ ಬಸವರಾಜ ಗುಡಿಹಿಂದ್ಲರ್‌ ಮತ್ತು ಪರಮೇಶಪ್ಪ ಹುಲ್ಮನಿಯವರು ರಚಿಸಿರುವ ಸಮ್ಮೇಳನದ ಲಾಂಛನದಲ್ಲಿ ತಾಲೂಕಿನ ಐತಿಹಾಸಿಕ ಸ್ಥಳಗಳ ಮಾಹಿತಿ, ವಾಣಿಜ್ಯ ಬೆಳೆಗಳಾದ ಹತ್ತಿ, ಗೋವಿನ ಜೋಳ, ಕಬ್ಬು ಮುಂತಾದ ಬೆಳೆಗಳನ್ನೊಳಗೊಂಡ ಮಾಹಿತಿ ಹೊಂದಿದೆ ಹಾಗೂ ಸರ್ವಜ್ಞ ಸಮಾಧಿ, ಸೋಮನಾಥ ದೇವಾಲಯ, ರಟ್ಟೀಹಳ್ಳಿ ಕಬ್ಬಿಣಕಂತಿ ಮಠ, ತಿಪ್ಪಾಯಿಕೊಪ್ಪ ಮಠ ಮುಂತಾದ ತಾಲೂಕಿನ ಸಮಗ್ರ ಇತಿಹಾಸದ ಮಾಹಿತಿ ಒಳಗೊಂಡ ಲಾಂಛನವನ್ನು ಸಿದ್ಧಪಡಿಸಲಾಗಿದೆ.

ಶನಿವಾರ ಬೆಳಗ್ಗೆ 7.30ಕ್ಕೆ ಮಾಜಿ ಜಿಲ್ಲಾ ಮಂಚಾಯತ್‌ ಸದಸ್ಯ ನಾರಾಯಣಪ್ಪ ಗೌರಕ್ಕನವರ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ತಾಲೂಕಾ ದಂಡಾಧಿಕಾರಿ ಅರುಣಕುಮಾರ ಕಾರಗಿ ನಾಡ ಧ್ವಜಾರೋಹಣ, ತಾಲೂಕು ಕ.ಸಾ.ಪ ಅಧ್ಯಕ್ಷ ರಾಘವೇಂದ್ರ ಎ.ಜಿ. ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು.

ಕಾರ್ಯಕ್ರಮದ ಮೆರವಣಿಗೆಯನ್ನು ಗಾ.ಪಂ. ಅಧ್ಯಕ್ಷೆ ಕಾವ್ಯ ಹನುಮಂತಪ್ಪ ಹಿತ್ತಲಮನಿ ಉದ್ಘಾಟಿಸುವರು.

ಬೆಳಗ್ಗೆ 10.30ಕ್ಕೆ ಸಮ್ಮೇಳನದ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ. ಪಾಟೀಲ ಉದ್ಘಾಟಿಸುವರು. ಶ್ರೀ ವಿರೂಪಾಕ್ಷ ಸ್ವಾಮೀಜಿ ಸಾನಿಧ್ಯ ವಹಿಸುವರು. ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸುವರು. ಸಂಸದ ಶಿವಕುಮಾರ ಉದಾಸಿ ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ, ಸಮ್ಮೇಳನದ ಸರ್ವಾಧ್ಯಕ್ಷ ದಾನೇಶ ಅಂಗಡಿ ಮುಂತಾದವರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರುವುದು.

ಬಹಿರಂಗ ಅಧಿವೇಶನ

ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ಜರುಗಲಿದು,್ದ ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಜಿ ಸಾನಿಧ್ಯ ವಹಿಸುವರು, ಮಾಜಿ ಶಾಸಕ ಯುಬಿ ಬಣಕಾರ ಅಧ್ಯಕ್ಷತೆ ವಹಿಸುವರು, ಸಾಹಿತಿ ಜಯಪ್ಪ ಹೊನ್ನಾಳಿ ಸಮಾರೋಪ ಭಾಷಣ ಮಾಡುವರು.

Kannada sahitya sammelana: ಏಲಕ್ಕಿ ನಾಡಲ್ಲಿ ಕನ್ನಡದ ರಂಗೇರಿಸಿದ ಮೆರವಣಿಗೆ

ಸರ್ವಜ್ಞನ ಹುಟ್ಟೂರಿನಲ್ಲಿ ನಡೆಯುತ್ತಿರುವ ತಾಲೂಕಿನ ದ್ವಿತೀಯ ಸಾಹಿತ್ಯ ಸಮ್ಮೇಳನ ಅತ್ಯಂತ ವಿಶೇಷತೆಯಿಂದ ಕೂಡಿದ್ದು, ಹಲವಾರು ಯುವ ಸಾಹಿತಿಗಳಿಗೆ ಹೆಚ್ಚಿನ ಒತ್ತು ಹಾಗೂ ಮಹಿಳಾ ಗೋಷ್ಠಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಾರಣ ಎಲ್ಲ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ.

ಮಲ್ಲಿಕಾರ್ಜುನ ಹೇರಕಾರ್‌ ಕಸಾಪ ಹಾವೇರಿ ಜಿಲ್ಲಾ ಪ್ರಾಧಿಕಾರ

click me!