ಲಾಕ್‌ಡೌನ್‌: ಆಹಾರವಿಲ್ಲದೆ ಗಜರಾಜನ ಪರದಾಟ, ಕೊನೆಗೂ ಸಿಕ್ತು ಆಹಾರ, ಚಿಕಿತ್ಸೆ!

Kannadaprabha News   | Asianet News
Published : Apr 12, 2020, 11:22 AM IST
ಲಾಕ್‌ಡೌನ್‌: ಆಹಾರವಿಲ್ಲದೆ ಗಜರಾಜನ ಪರದಾಟ, ಕೊನೆಗೂ ಸಿಕ್ತು ಆಹಾರ, ಚಿಕಿತ್ಸೆ!

ಸಾರಾಂಶ

ಅನಾರೋಗ್ಯದಿಂದ ಹಾಗೂ ಆಹಾರವಿಲ್ಲದೆ ಪರಿದಾಡುತ್ತಿದ್ದ ಗಜರಾಜ| ಸಕಾಲದಲ್ಲಿ ಸ್ಪಂದಿಸಿದ ಮುಧೋಳ ತಹಸೀಲ್ದಾರ್‌| ಗಜರಾಜನಿಗೆ ಕಬ್ಬು ವ್ಯವಸ್ಥೆ ಮಾಡಿದ ತಹಸೀಲ್ದಾರ್‌ ಸಂಗಮೇಶ ಬಾಡಗಿ|

ಬಾಗಲಕೋಟೆ(ಏ.12): ಗಜರಾಜನಿಗೂ ಕೊರೋನಾ ಲಾಕ್‌ಡೌನ್‌ ಎಫೆಕ್ಟ್ ತಟ್ಟಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದ್ದು, ಅನಾರೋಗ್ಯದಿಂದ ಹಾಗೂ ಆಹಾರವಿಲ್ಲದೆ ಪರಿದಾಡುತ್ತಿದ್ದ ಗಜರಾಜನಿಗೆ ಕೊನೆಗೂ ಚಿಕಿತ್ಸೆ ಹಾಗೂ ಆಹಾರ ಸಕಾಲದಲ್ಲಿ ದೊರೆತಿದೆ.

ಮುಧೋಳ ನಗರದ ಗವಿಮಠದಲ್ಲಿರುವ ಗಜರಾಜನಿಗೆ ನಿತ್ಯ ನಗರದಲ್ಲಿ ಸಂಚರಿಸಿ ಆಹಾರ ಸಂಗ್ರಹಿಸುತ್ತಿದ್ದ ಮಾವುತನಿಗೆ ಗಜರಾಜನ ಅನಾರೋಗ್ಯ ಹಾಗೂ ಆಹಾರ ಸಿಗದೆ ಇರುವುದರಿಂದ ಆತಂಕಗೊಂಡಿದ್ದನಲ್ಲದೆ ಆಸಹಾಯಕತೆಯನ್ನು ಸಹ ಮಾಧ್ಯಮದವರ ಎದುರು ತೋಡಿಕೊಂಡಿದ್ದ. 

ಕೋವಿಡ್‌-19 ವಿರುದ್ಧ ಹೋರಾಟ: ವೈದ್ಯರ ರಕ್ಷಣಾ ಸಾಮಗ್ರಿಗಳಿಗೆ ಕೊರತೆ ಇಲ್ಲ: DCM

ಈ ಕುರಿತು ಮುಧೋಳ ತಹಸೀಲ್ದಾರ ಸಂಗಮೇಶ ಬಾಡಗಿ ಅವರ ಗಮನಕ್ಕೆ ತರಲಾಗಿತ್ತು. ಇದೀಗ ಮುಧೋಳ ತಹಸೀಲ್ದಾರ್‌ ಸಂಗಮೇಶ ಬಾಡಗಿ ಸ್ಪಂದಿಸಿ ಗಜರಾಜನಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಆಹಾರದ ಭಾಗವಾಗಿ ಕಬ್ಬನ್ನು ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
 

PREV
click me!

Recommended Stories

ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?
ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌