
ಟಿ. ನರಸೀಪುರ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರು, ಹಿರಿಯ ಮುಖಂಡರ ಮಾರ್ಗದರ್ಶನದೊಂದಿಗೆ ಕ್ಷೇತ್ರದಲ್ಲಿ ಪಕ್ಷದ ಶಕ್ತಿ ಅನಾವರಣಗೊಳ್ಳಲಿದ್ದು, ಉತ್ತಮ ಫಲಿತಾಂಶ ಬರಲಿದೆ ಎಂದು ಮಾಜಿ ಶಾಸಕ ಎಂ. ಅಶ್ವಿನ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಬಾರಿಯ ಚುನಾವಣೆಯಲ್ಲಿ ಕೆಲವೊಂದು ಕಾರಣಗಳಿಂದ ನಮಗೆ ಹಿನ್ನಡೆ ಉಂಟಾಗಿರಬಹುದು, ಆದರೆ ಈ ಬೆಳವಣಿಗೆಯಿಂದ ಯಾರು ವಿಚಲಿತರಾಗಿಲ್ಲ, ಧೈರ್ಯ ಕಳೆದುಕೊಂಡಿಲ್ಲ. ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಹುಮ್ಮಸ್ಸಿನಿಂದಲೇ ಕ್ಷೇತ್ರದಲ್ಲಿ ಎಂದಿನಂತೆ ಪಕ್ಷದ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಚುನಾವಣೆಯಲ್ಲಿ ಬಂದ ಫಲಿತಾಂಶ ಸ್ವೀಕರಿಸಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಬರಲು ಕಾರ್ಯಕ್ರಮ ಹಮ್ಮಿಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.
ತುಂಬಲ ಗ್ರಾಮದಲ್ಲಿ ಆಯೋಜಿಸಿದ್ದ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಮೈಸೂರು ನಗರಪಾಲಿಕೆ ಮಾಜಿ ಸದಸ್ಯ ಅವ್ವ ಮಾದೇಶ್ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಆಗಮಿಸಿ ಮಾಜಿ ಶಾಸಕರಿಗೆ ಶುಭ ಕೋರಿದರು.
ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ. ಹುಂಡಿ ಚಿನ್ನಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್, ವೀರೇಶ್, ಜಿಪಂ ಮಾಜಿ ಸದಸ್ಯರಾದ ಎಸ್.ಎನ್. ಸಿದ್ದಾರ್ಥ್, ಜೈಪಾಲ್ ಭರಣಿ, ಕೆ.ಎನ್. ಪ್ರಭುಸ್ವಾಮಿ. ವೈ.ಎಸ್. ರಾಮಸ್ವಾಮಿ,ಶಿವಮೂರ್ತಿ, ಶಿವು, ರಾಜೇಶ್ ಇದ್ದರು.
ಬಿಜೆಪಿ ಅಧಿಕಾರಕ್ಕೆ ತರುತ್ತೇವೆ
ಮೈಸೂರು(ನ.18): ಬಿಜೆಪಿಯವರು, ಕುಮಾರಸ್ವಾಮಿ ಏನೇ ಹೊಟ್ಟೆ ಹಿಸುಕಿಕೊಂಡರೂ ನಾವು ಐದು ವರ್ಷ ಅಧಿಕಾರದಲ್ಲಿ ಇದ್ದೇ ಇರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಂಜನಗೂಡು ತಾಲೂಕು ಕಳಲೆ ಗ್ರಾಮದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅಂತಾ ಒಬ್ಬ ಇದ್ದಾನೆ. ಅವನಿಗೆ ಬರೀ ಹೊಟ್ಟೆ ಉರಿ. ನಾವು ಅಧಿಕಾರಕ್ಕೆ ಬಂದಿದ್ದೇವೆ ಅಂತಾ ಹೊಟ್ಟೆ ಕಿವುಚಿ ಕೊಳ್ಳುತ್ತಾನೆ. ಇಂಥವರ ಬಗ್ಗೆ ಬಿ ಕೇರ್ ಫ್ಹುಲ್ [ಎಚ್ಚರಿಕೆಯಿಂದಿರಿ]. ನಾವು ಇನ್ನೂ ಐದು ವರ್ಷ ಇದ್ದೇ ಇರುತ್ತೇವೆ. ಬಿಜೆಪಿ, ಕುಮಾರಸ್ವಾಮಿ ಏನೇ ಹೊಟ್ಟೆ ಹಿಸುಕಿಕೊಂಡರು ನಾವು ಐದು ವರ್ಷ ಇರುವುದಾಗಿ ಹೇಳಿದರು.
ಮೋದಿ ಕೈ ಬೀಸಿದ ಕೂಡಲೇ ಮತ ಬರಲ್ಲ. ಮೋದಿ ನಂಜನಗೂಡಿಗೆ ಬಂದು ಕೈ ಬೀಸಿ ಹೋದ ಮೇಲೆ ಕಾಂಗ್ರೆಸ್ ನಾ ಎಲ್ಲರೂ ಗೆದ್ದರು. ನಾನು ಗೆದ್ದೆ, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾದು ಗೆದ್ದ. ಎಲ್ಲರೂ ದೊಡ್ಡ ಲೀಡ್ ನಲ್ಲೆ ಗೆದ್ವಿ. ಉಚಿತ ಯೋಜನೆಗಳನ್ನು ಮೋದಿ ಅಣಕಿಸಿದ್ದರು. ಈಗ ಎಲ್ಲಾ ಕಡೆ ಉಚಿತ ಯೋಜನೆ ಘೋಷಣೆ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ಗ್ಯಾರಂಟಿ ಜಾರಿ ಆದರೆ ರಾಜ್ಯ ಆರ್ಥಿಕ ದಿವಾಳಿ ಆಗುತ್ತೆ ಅಂತಾ ಮೋದಿ ಹೇಳಿದ್ದರು. ಗ್ಯಾರಂಟಿ ಜಾರಿ ಮಾಡಿದ ಮೇಲೂ ರಾಜ್ಯ ಅರ್ಥಿಕವಾಗಿ ಸದೃಢ ವಾಗಿದೆ ಎಂದರು.
ಅನೈತಿಕ ರಾಜಕಾರಣದ ಅಧ್ಯಾಯಕ್ಕೆ ಮುನ್ನುಡಿ ಬರೆದವರು ಕುಮಾರಸ್ವಾಮಿ: ವೆಂಕಟೇಶ್ ಕಿಡಿ
ದೇವನೊಬ್ಬ ನಾಮ ಹಲವು
ದೇವರು ಒಬ್ಬನೇ ಇರೋದು. ಹೆಸರು ಬೇರೆ ಬೇರೆ ಇವೆ. ಕೋಟಿಗಟ್ಟಲೇ ದೇವರುಗಳು ಇವೆ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು. ಗ್ರಾಮದಲ್ಲಿ ಕಡೇಮಾಳಮ್ಮ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ಕಡೇಮಾಳಮ್ಮ ದೇವಾಲಯ ಜೀರ್ಣೋದ್ಧಾರವಾಗಿದೆ. ಬಹಳ ಸಂತೋಷದಿಂದ ದೇವಾಲಯ ಉದ್ಘಾಟಿಸಿದ್ದೇನೆ.