ರೈತರಿಗೆ ಕನಿಷ್ಠ 7 ಗಂಟೆ ವಿದ್ಯುತ್ ಪೂರೈಸಲು ಸೂಚನೆ

By Kannadaprabha News  |  First Published Nov 24, 2023, 7:31 AM IST

ಈ ಬಾರಿ ತೀವ್ರ ಬರಗಾಲ ಹಿನ್ನೆಲೆ ಮಳೆ ಆಶ್ರಿತ ಯಾವುದೇ ಬೆಳೆಗಳೂ ಬೆಳೆಯಲಾಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತರಿಗೆ ಕನಿಷ್ಠ ದಿನನಿತ್ಯ 7 ಗಂಟೆ ವಿದ್ಯುತ್ ಪೂರೈಸಿ, ಈ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಬೇಡ ಎಂದು ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅಧಿಕಾರಿಗಳಿಗೆ ಸೂಚಿಸಿದರು.


  ಶಿರಾ :  ಈ ಬಾರಿ ತೀವ್ರ ಬರಗಾಲ ಹಿನ್ನೆಲೆ ಮಳೆ ಆಶ್ರಿತ ಯಾವುದೇ ಬೆಳೆಗಳೂ ಬೆಳೆಯಲಾಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತರಿಗೆ ಕನಿಷ್ಠ ದಿನನಿತ್ಯ 7 ಗಂಟೆ ವಿದ್ಯುತ್ ಪೂರೈಸಿ, ಈ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಬೇಡ ಎಂದು ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಪರಿವೀಕ್ಷಣಾ ಮಂದಿರದಲ್ಲಿ ತಾ.ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ರೈತರಿಗೆ ಪ್ರತಿದಿನ 7ಗಂಟೆ ವಿದ್ಯುತ್ ಪೂರೈಕೆಗೆ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದರಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು. ತಾಲೂಕಿನ ಹಲವೆಡೆ ಪ್ರಗತಿಯಲ್ಲಿರುವ ವಿವಿಧ ವಿದ್ಯುತ್ ಉಪಸ್ಥಾವರಗಳ ಕಾಮಗಾರಿಗಳಿಗೆ ವೇಗ ನೀಡಿ ಆದಷ್ಟು ಶೀಘ್ರ ಆರಂಭಿಸುವಂತೆ ಸೂಚಿಸಿದರು.

Latest Videos

undefined

ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಸೈಯದ್, ಬೆಸ್ಕಾಂ ನಗರ ವಿಭಾಗದ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಶಾಂತರಾಜು, ಗ್ರಾಮಾಂತರ ಇಂಜಿನಿಯರ್ ಗೋವಿಂದರಾಯ ಹಾಜರಿದ್ದರು.

ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಇಲ್ಲ

ಹೈದರಾಬಾದ್‌: ಕರ್ನಾಟಕದಲ್ಲಿ ವಿದ್ಯುತ್‌ ಕೊರತೆ ಉಂಟಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಇಂಧನ ಸಚಿವ ಕೆ.ಜೆ. ಜಾರ್ಜ್‌ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್‌ ಸಮಸ್ಯೆ ಇಲ್ಲ ಎಂದು ಗುರುವಾರ ಹೇಳಿದ್ದಾರೆ.

ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ವಹಣೆಗಾಗಿ ರಾಜ್ಯದಲ್ಲಿನ ಕೆಲವು ವಿದ್ಯುತ್‌ ಘಟಕಗಳನ್ನು ಮುಂಗಾರು ಸಮಯದಲ್ಲಿ ಮುಚ್ಚಲಾಗಿತ್ತು. ಹೀಗಾಗಿ ಅಲ್ಪಕಾಲದ ಪವರ್‌ ಕಟ್‌ ಉಂಟಾಗಿತ್ತು. ಆದರೆ ಈ ಕೊರತೆಯನ್ನು ನಾವು ನೀಗಿಸಿದ್ದೇವೆ. ರೈತರು ಬೇಡಿಕೆ ಇಟ್ಟಾಗೆಲ್ಲಾ ನಾವು ಅವರಿಗೆ ವಿದ್ಯುತ್‌ ಪೂರೈಕೆ ಮಾಡಿದ್ದೇವೆ. ಈಗ ಯಾವುದೇ ದೂರುಗಳಿಲ್ಲ. 5ರಿಂದ 10 ದಿನಗಳ ಕಾಲ ಮಾತ್ರ ವಿದ್ಯುತ್‌ ಕೊರತೆ ಉಂಟಾಗಿತ್ತು. ಆದರೆ ಅನಾವಶ್ಯಕವಾಗಿ ಈ ಬಗ್ಗೆ ರಾಜಕೀಯ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಫುಲ್ ಆಕ್ಟಿವ್; ಸರ್ಕಾರದ ವಿರುದ್ಧ ಪೋಸ್ಟರ್ ಅಭಿಯಾನ!

ಇದೇ ವೇಳೆ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ವಿದ್ಯುತ್‌ ಕೊರತೆ ನೀಗಿಸಲು ಹೆಚ್ಚಿನ ಘಟಕಗಳ ಸ್ಥಾಪನೆ ಮಾಡಲಿಲ್ಲ. ಆದರೆ ಕಾಂಗ್ರೆಸ್‌ ಸರ್ಕಾರ ಎಲ್ಲವನ್ನೂ ಮಾಡಿದೆ ಎಂದು ಹೇಳಿದರು.

ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಆರ್‌ಎಸ್‌, ಕರ್ನಾಟಕದಲ್ಲೇ ಪದೇ ಪದೇ ವಿದ್ಯುತ್‌ ಕೊರತೆ ಉಂಟಾಗುತ್ತಿದೆ. ಆದರೆ ಇಲ್ಲಿ ಬಂದು ಕರ್ನಾಟಕದಲ್ಲಿ ನೀಡಿದ ಭರವಸೆಗಳನ್ನು ಇಲ್ಲಿಯೂ ಜಾರಿ ಮಾಡುವ ಭರವಸೆ ನೀಡುತ್ತಿದೆ ಎಂದು ಹೇಳಿತ್ತು.

click me!