ಪ್ರಾಣ ಲೆಕ್ಕಿಸದೆ ಮತ್ತೊಬ್ಬರ ಪ್ರಾಣ ರಕ್ಷಣೆಗೆ ಹೋರಾಡಿದ ಮಹನೀಯರಿಗೆ ಶೌರ್ಯ ಪ್ರಶಸ್ತಿ| ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಮಾಧ್ಯಮ ಸಂಸ್ಥೆ ನೀಡುವ ಶೌರ್ಯ ಪ್ರಶಸ್ತಿ| ಸೌರ್ಯ ಮೆರೆದ 10 ಸಾಹಸಿಗರನ್ನಾರಿಸಿದ ಮೂವರು ತೀರ್ಪುಗಾರರು| ಖ್ಯಾತ ನಿರ್ದೇಶಕ, ಕತೆಗಾರ ನಾಗತಿಹಳ್ಳಿ ಚಂದ್ರಶೇಖರ್, ಬೆಂಗಳೂರಿನ ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್, ಕಿರುತೆರೆಯ ಖ್ಯಾತ ನಿರ್ದೇಶಕ ರವಿಕಿರಣ್
ಬೆಂಗಳೂರು[ಡಿ.21]: ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ - ಸುದ್ದಿ ನೀಡುವುದರಲ್ಲಿ ಮಾತ್ರ ಮುಂದೆ ಇಲ್ಲ. ಸಾಮಾಜಿಕ ಜವಾಬ್ದಾರಿ ನಿರ್ವಹಿಸುವುದರಲ್ಲೂ ಮುಂದೆ ಇದ್ದೇವೆ. ಮತ್ತೊಬ್ಬರ ಜೀವ ರಕ್ಷಣೆಗಾಗಿ ತಮ್ಮ ಜೀವ ಒತ್ತೆ ಇಟ್ಟ ಸಾಹಸ ಮೆರೆದವರನ್ನ ಗುರುತಿಸಿ ಪ್ರತಿ ವರ್ಷ ಶೌರ್ಯ ಪ್ರಶಸ್ತಿ ನೀಡುತ್ತಿದ್ದೇವೆ. ಶೌರ್ಯ ಮೆರೆದವರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡುತ್ತಿರುವ ಏಕೈಕ ಮಾಧ್ಯಮ ಸಮೂಹ ಅಂದ್ರೆ ಅದು ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ.
ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಶೌರ್ಯ ಪ್ರಶಸ್ತಿಯ ಮೂರನೇ ಆವೃತ್ತಿ ಇದು. ಕರ್ನಾಟಕದ ಮೂಲೆ ಮೂಲೆಗಳಲ್ಲಿ ಶೌರ್ಯ ಮೆರೆದ 870 ಜನರ ಮಾಹಿತಿಯನ್ನು ನಮ್ಮ ವರದಿಗಾರರು, ಓದುಗರು, ವೀಕ್ಷಕರು ನಮಗೆ ಕಳುಹಿಸಿದ್ದರು. ಕನ್ನಡಪ್ರಭ ಸುವರ್ಣ ನ್ಯೂಸ್ ನ ಸಂಪಾದಕೀಯ ತಂಡವು 870 ಜನರ ಪಟ್ಟಿಯನ್ನು 20 ಜನರಿಗೆ ಇಳಿಸಿತು. 20 ಸಾಹಸಿಗಳ ಪಟ್ಟಿಯನ್ನು ಅಂತಿಮ ತೀರ್ಪುಗಾರರ ಮುಂದೆ ಇರಿಸಲಾಯ್ತು.
undefined
ಕನ್ನಡಪ್ರಭ-ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ ಕಾರ್ಯಕ್ರಮದಲ್ಲಿ ಗಣ್ಯರ ಸಮಾಗಮ!
ಸುವರ್ಣ ನ್ಯೂಸ್ - ಕನ್ನಡಪ್ರಭ ಶೌರ್ಯ ಪ್ರಶಸ್ತಿಯ ತೀರ್ಪುಗಾರರಾಗಿ ಖ್ಯಾತ ನಿರ್ದೇಶಕ, ಕತೆಗಾರ ನಾಗತಿಹಳ್ಳಿ ಚಂದ್ರಶೇಖರ್, ಬೆಂಗಳೂರಿನ ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್, ಕಿರುತೆರೆಯ ಖ್ಯಾತ ನಿರ್ದೇಶಕ ರವಿಕಿರಣ್ ಆಗಮಿಸಿದ್ರು. ಈ ತಂಡವು ಶೌರ್ಯಪ್ರಶಸ್ತಿಗೆ 10 ಸಾಹಸಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿದ್ದಾರೆ. ಈ ತೀರ್ಪುಗಾರರ ಕುರಿತಾದ ಕಿರು ಮಾಹಿತಿ
ನಾಗತಿಹಳ್ಳಿ ಚಂದ್ರಶೇಖರ್
ಲೇಖಕ, ನಿರ್ದೇಶಕ, ನಟ ಹೀಗೆ ಸೃಜನ ಶೀಲತೆಯ ಹತ್ತು ಹಲವು ಮಜುಲುಗಳಲ್ಲಿ ಹೆಜ್ಜೆ ಗುರುತು ಮೂಡಿಸಿದವ್ರು. ಇವರನ್ನ ಮೇಷ್ಟ್ರು ಅಂತಲೇ ಚಿತ್ರರಂಗ ಕರೆಯುವುದುಂಟು. ಅಮೆರಿಕಾ ಅಮೆರಿಕಾ ಚಿತ್ರದ ಮೂಲಕವೇ ಜನ ಇವರನ್ನು ಹೆಚ್ಚು ಗುರುತಿಸುತ್ತಾರೆ. ಕನ್ನಡ ಚಿತ್ರಗಳಲ್ಲಿ ಇವರಷ್ಟು ವಿದೇಶಗಳನ್ನು ತೋರಿಸಿದವರು ಮತ್ಯಾರು ಇಲ್ಲ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನಾಗತಿಹಳ್ಳಿಯಲ್ಲಿ ಹುಟ್ಟಿದ ಚಂದ್ರಶೇಖರ್ 1986ರಲ್ಲಿ ಕಾಡಿನ ಬೆಂಕಿ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟವರು. ಬಾ ನಲ್ಲೆ ಮಧು ಚಂದ್ರಕೆ, ಹೂ ಮಳೆ, ನನ್ನ ಪ್ರೀತಿಯ ಹುಡುಗಿ, ಕೊಟ್ರೇಶಿ ಕನಸು, ಮಾತಾಡ್ ಮಾತಾಡ್ ಮಲ್ಲಿಗೆ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ. ಸುವರ್ಣ ನ್ಯೂಸ್ - ಕನ್ನಡಪ್ರಭ ಶೌರ್ಯಪ್ರಶಸ್ತಿ ಪುರಸ್ಕೃತರ ಆಯ್ಕೆಯ ತೀರ್ಪುಗಾರರು.
ಐಪಿಎಸ್ ಅಧಿಕಾರಿ ಇಶಾಪಂಥ್
2016ರಲ್ಲಿ ತುಮಕೂರಿನ ಎಸ್ಪಿಯಾಗಿ ಮರಳು ಮಾಫಿಯಾಗೆ ಬಿಸಿ ಮುಟ್ಟಿಸಿದ ಗಟ್ಟಿಗಿತ್ತಿ. ಹುಟ್ಟಿದ್ದು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ, ಬೆಳೆದಿದ್ದು ಮಧ್ಯಪ್ರದೇಶದ ಜಬಲ್ಪುರ್. ನಾಲ್ವರು ಅಕ್ಕ ತಂಗಿಯರೊಳಗೊಂಡು ತುಂಬು ಕುಟುಂಬದಲ್ಲಿ ಬೆಳೆದ ಇಶಾ ಎರಡನೇ ಪ್ರಯತ್ನದಲ್ಲೇ ಐಪಿಎಸ್ ಅಧಿಕಾರಿಯಾಗಿ ಯಶಸ್ಸು ಕಂಡವರು.
ಸದ್ಯ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿಯಾಗಿ ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಸಾರಿದ್ದಾರೆ. ಖಡಕ್ ಪೊಲೀಸ್ ಗಿರಿ ಜೊತೆಗೆ ತಾಯಿ ಹೃದಯದ ಅಧಿಕಾರಿ ಇವರು. ಎಚ್ಎಸ್ಆರ್ ಲೇಔಟ್ ಪೊಲೀಸ್ ಸ್ಟೇಷನ್ನಲ್ಲಿ ಬೇಬಿ ಸಿಟ್ಟಿಂಗ್ ರೂಪಿಸಿ ಕೊಟ್ಟಿದ್ದಾರೆ. ಶಾಲೆಗಳು, ಸ್ಲಂಗಳಲ್ಲಿ ಮಹಿಳೆಯರಿಗೆ ಸೆಲ್ಫ್ ಡಿಫೆನ್ಸ್ ತರಬೇತಿ ಕೊಟ್ಟಿದ್ದಾರೆ. ಗಂಗಾಜಲ್ ಸಿನಿಮಾದಲ್ಲಿ ನಟಿಸಲು ಪ್ರಿಯಾಂಕ ಚೋಪ್ರಾ ಇವ್ರಿಂದ ಸ್ಪೂರ್ತಿ ಸಲಹೆ ಪಡೆದದ್ದು ಜನಜನಿತ.
ಪ್ರಾಣ ಒತ್ತೆಯಿಟ್ಟು ಇನ್ನೊಬ್ಬರ ಜೀವ ಕಾಪಾಡಿದವರಿಗೆ ಕನ್ನಡಪ್ರಭ-ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ
ರವಿ ಕಿರಣ್
ರವಿ ಕಿರಣ್ ಕನ್ನಡದ ಕಿರುತೆರೆಯ ನಟ-ನಿರ್ದೇಶಕ-ನಿರ್ಮಾಪಕ. ದೂರದರ್ಶನದ ಕಾಲದಿಂದಲೂ ಸೀರಿಯಲ್ ಮಾಡಿದವರು. ಖಾಸಗಿ ವಾಹಿನಿಯಲ್ಲೂ ಸಂಚಲನ ಮೂಡಿಸಿದ ಕಲಾಕಾರ್. ಇವರ ಬದುಕು ಸೀರಿಯಲ್ 8 ವರ್ಷಕ್ಕೂ ಹೆಚ್ಚು ಪ್ರಸಾರವಾಗಿ ಕಿರುತೆರೆಯಲ್ಲಿ ರೆಕಾರ್ಡ್ ಮಾಡಿದೆ. ಶಕ್ತಿ ಇವರ ಮತ್ತೊಂದು ಹೆಸರಾಂತ ಸೀರಿಯಲ್. ಕಿರುತೆರೆಯಲ್ಲಿ ನಟರಾಗಿ-ನಿರ್ದೇಶಕರಾಗಿ ನಿರ್ಮಾಪಕರಾಗಿ ಹಲವು ವಿಭಾಗದಲ್ಲಿ ಕೆಲಸ ಮಾಡಿದ ಖ್ಯಾತಿ ಇವರಿಗೆ ಸಲ್ಲುತ್ತದೆ.
ರವಿ ಕಿರಣ್ ಎಸ್ಟೇಟ್ ಹೆಸರಲ್ಲಿ ಕಿರುತೆರೆಗಾಗಿಯೇ ಒಂದ್ ಸ್ಟುಡಿಯೋ ನಿರ್ಮಾಣ ಮಾಡಿದ್ದಾರೆ. ಬಹುತೇಕ ಧಾರವಾಹಿಗಳು ಇಲ್ಲಿಯೇ ಚಿತ್ರೀಕರಣ ಆಗುತ್ತವೆ. ಖ್ಯಾತ ತೆಲುಗು ನಟ ಎಸ್.ವಿ.ರಂಗ ರಾವ್ ಅವರ ಮೊಮ್ಮಗ ಈ ರವಿ ಕಿರಣ್. ಕಿರುತೆರೆಯ ಹಲವು ವಿಭಾಗದಲ್ಲಿ ನುರಿತಿರೋ ರವಿ ಕಿರಣ್ ಅವ್ರು, ಬೆಳ್ಳಿ ತೆರೆ ಮೇಲೂ ಮಿಂಚಿದ್ದಾರೆ. ಮದುವೆ ದಿಬ್ಬಣ, ಸಾಕಿದ ಗಿಣಿ, ರಂಗಪ್ಪಾ ಹೋಗ್ಬಿಟ್ನಾ ಚಿತ್ರದಲ್ಲೂ ಅಭಿನಯಿಸಿದ್ದಾರೆ.