ಕಾಲಜ್ಞಾನಿಯ ಪಲ್ಲಕ್ಕಿ ಹೊತ್ತು ಸೇವೆ ಸಲ್ಲಿಸಿದ ಶಾಸಕ ರಾಜೂಗೌಡ

By Suvarna News  |  First Published Apr 17, 2022, 9:55 PM IST

* ಕಾಲಜ್ಞಾನಿಯ ಪಲ್ಲಕ್ಕಿ ಹೊತ್ತು ಸೇವೆ ಸಲ್ಲಿಸಿದ ಶಾಸಕ ರಾಜೂಗೌಡ
* ಹಿಂದೂ-ಮುಸ್ಲಿಂ ರ ಆರಾಧ್ಯದೈವ ಕೊಡೇಕಲ್ ಬಸವಣ್ಣನ ಜಾತ್ರೆಯಲ್ಲಿ ರಾಜೂಗೌಡ ಭಾಗಿ
* ಶಾಸಕ ರಾಜೂಗೌಡ ಗೆ ಸಹೋದರ ಬಬ್ಲೂಗೌಡ, ಪುತ್ರ ಮಣಿಕಂಠ ನಾಯಕ್ ಸಾಥ್


ವರದಿ: ಪರಶುರಾಮ್ ಐಕೂರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಯಾದಗಿರಿ, (ಏ.17):
ತವರೂರು ಕೊಡೇಕಲ್ ನಲ್ಲಿ ಇಂದು(ಭಾನುವಾರ) ನಡೆದ ಬಸವೇಶ್ವರ ಜಾತ್ರೆಯಲ್ಲಿ ಸುರಪುರ ಶಾಸಕ ರಾಜೂಗೌಡ ಪಾಲ್ಗೊಂಡು ಪಲ್ಲಕ್ಕಿ ಹೊತ್ತು ಸೇವೆ ಸಲ್ಲಿಸಿದರು. ಕೊಡೇಕಲ್ ನ ಬಸವೇಶ್ವರ ಜಾತ್ರೆಯೂ ಕಲ್ಯಾಣ ಕರ್ನಾಟಕದಲ್ಲಿಯೇ ಅತ್ಯಂತ ಜನಪ್ರೀಯ ಜಾತ್ರೆಯಾಗಿದೆ. ಈ ಜಾತ್ರೆಯೂ ಪ್ರತಿ ವರ್ಷವೂ ನಡೆಯುತ್ತದೆ, ರಾಜ್ಯದ ಬೇರೆ ಬೇರೆ ಭಾಗಗಳಿಂದ ಅಪಾರ ಪ್ರಮಾಣ ಭಕ್ತರನ್ನು ಹೊಂದಿದೆ. 

ಕೊಡೇಕಲ್ ಬಸವಣ್ಣನ ಆರಾಧಿಸುವ ಶಾಸಕ ರಾಜೂಗೌಡರ ಕುಟುಂಬ
ಶಾಸಕ ರಾಜೂಗೌಡ ತವರೂರು ಅಂದ್ರೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ನಲ್ಲಿ ಬಸವಣ್ಣನ ಜಾತ್ರೆಯೂ ಅದ್ದೂರಿಯಾಗಿ ನಡೆಯುತ್ತದೆ. ರಾಜೂಗೌಡರು ಕೊಡೇಕಲ್ ಬಸವಣ್ಣನ ಪರಮ ಭಕ್ತರಾಗಿದ್ದು, ಹಲವಾರು ವರ್ಷಗಳಿಂದ ಆರಾಧಕರಾಗಿದ್ದಾರೆ. ಶಾಸಕ ರಾಜೂಗೌಡ ರು ಎಲ್ಲಿಯೇ ಇದ್ದರು, ಈ ಜಾತ್ರೆಯಲ್ಲಿ ಮಾತ್ರ ಭಾಗವಹಿಸದೇ ಬೀಡಲ್ಲ. 

Tap to resize

Latest Videos

undefined

ಪಲ್ಲಕ್ಕಿ ಹೊತ್ತ ಶಾಸಕ ರಾಜೂಗೌಡರ ಕುಟುಂಬ
ಕೊಡೇಕಲ್ ಬಸವೇಶ್ವರ ಜಾತ್ರೆಯಲ್ಲಿ ಭಾಗವಹಿಸಿದ ಶಾಸಕ ರಾಜೂಗೌಡ ಕುಟುಂಬ, ಪ್ರತಿವರ್ಷದಂತೆ ಈ ವರ್ಷವೂ ಕೂಡ ಜಾತ್ರೆಯಲ್ಲಿ ಭಾಗವಹಿಸಿ ಭಕ್ತಿ ಸೇವೆಗಾಗಿ ಕುಟುಂಬಸ್ಥರು ಪಲ್ಲಕ್ಕಿ ಹೊತ್ತರು. ಶಾಸಕ ರಾಜೂಗೌಡರಿಗೆ ಸಹೋದರ ಬಬ್ಲೂಗೌಡ, ಪುತ್ರ ಮಣಿಕಂಠ ನಾಯಕ ಹಾಗೂ ಕೊಡೇಕಲ್ ಗ್ರಾಮದ ಹಲವಾರು ಭಕ್ತರ ದಂಡು ಸಾಥ್ ನೀಡಿತು. ಶಾಸಕ ರಾಜೂಗೌಡರು ಕೊಡೇಕಲ್ ಬಸವಣ್ಣನ ಅನುಯಾಯಿ. 

ಜ್ಞಾನದ ಜಾತ್ರೆ ಈ ಬಸವೇಶ್ವರ ಜಾತ್ರೆ
ಕೊಡೇಕಲ್ ನ ಬಸವೇಶ್ವರ ಜಾತ್ರೆಯೂ ಎಲ್ಲಾ ಜಾತ್ರೆಗಳಿಗಿಂತ ಬಹಳ ವಿಭಿನ್ನವಾದ ಜಾತ್ರೆ. ಕೇವಲ ಪಲ್ಲಕ್ಕಿ ಹೊತ್ತು ಮೆರೆಯುವುದಲ್ಲ ಈ ಜಾತ್ರೆ. ಬಸವೇಶ್ವರನ ಪಲ್ಲಕ್ಕಿಯಲ್ಲಿ ವಚನಗಳನ್ನೆ ಇಟ್ಟು ಭಕ್ತರು ಹೊರುವ ಜ್ಞಾನದ ಜಾತ್ರೆ ಇದಾಗಿದೆ. ಈ ಜಗತ್ತಿನಲ್ಲಿ ಜ್ಞಾನಕ್ಕೆ ಮಾತ್ರ ಬೆಲೆಯಿದೆ, ಜ್ಞಾನದಿಂದ ಜಗತ್ತು ಗೆಲ್ಲಬಹುದು ಎಂಬುದು ಇದರ ಸಂದೇಶವಾಗಿದೆ. 1,96,000 ವಚನಗಳ ಮೂಲಕ ಲೋಕದ ಹಕವು ಸಮಸ್ಯೆಗಳಿಗೆ ದಾರಿ ತೋರಿದವರು ಮಹಾಮಹಿಮ ಬಸವೇಶ್ವರರರು.

ಹಿಂದೂ-ಮುಸ್ಲಿಂ ರ ಆರಾಧ್ಯದೈವ ಕೊಡೇಕಲ್ ಬಸವಣ್ಣ
ರಾಜ್ಯದಲ್ಲಿ ಹಿಂದೂ-ಮುಸ್ಲಿಂ ನಡುವೆ ಧರ್ಮ ದಂಹಲ್ ಜೋರಾಗಿದೆ. ಆದ್ರೆಕೊಡೇಕಲ್ ಬಸವೇಶ್ವರ ಜಾತ್ರೆಯಲ್ಲಿ ಹಿಂದೂ-ಮುಸ್ಲಿಂ ರು ಸಹೋದರರಂತೆ ಜಾತ್ರೆ ಆಚರಿಸುತ್ತಾರೆ. ಜೊತೆಗೆ ಬಸವಣ್ಣ ಹಿಂದೂ-ಮುಸ್ಲಿಂ ರ ಆರಾಧ್ಯದೈವನಾಗಿದ್ದು, ಇಲ್ಲಿ ಹಿಂದೂಗಳು-ಮುಸ್ಲಿಂರೆಲ್ಲರೂ ಸೇರಿ ದೇವರಿಗೆ ಹಿಡುಗಾಯಿ ಹೊಡೆಯುತ್ತಾರೆ. ಜಾತಿ, ಮತ, ಧರ್ಮಗಳನ್ನು ಮೀರಿದ ಜಾತ್ರೆ ಇದಾಗಿದೆ. ಈ ಊರಿನಲ್ಲಿ ಧರ್ಮ ಎಂಬ ಭೇಧ-ಭಾವವಿಲ್ಲದೆ ಎಲ್ಲಾ ಭಕ್ತರು ಬಸವಣ್ಣನನ್ನು ಪ್ರತಿವರ್ಷ ಪೂಜಿಸುತ್ತಾರೆ. 

ಧರ್ಮದ ಕಟ್ಟಳೆ ಮೀರಿದ ಮಾನವೀಯತೆಯ ಕಾಲಜ್ಞಾನಿ ಜಾತ್ರೆ
ಕೊಡೇಕಲ್ ಅನಾದಿಕಾಲದಿಂದಲೂ ಕಾಲಜ್ಞಾನಿಗಳ ತವರೂರಾಗಿದೆ. ಬಸವ ಪೀಠದ ಪೀಠಾಧಿಪತಿಗಳಾದ ಪ.ಪೂ.ವಿಷಭೇಂದ್ರ ವರರ ಸಾನಿಧ್ಯದಲ್ಲಿ ನಡೆಯುತ್ತದೆ. ಈ ಜಾತ್ರೆಯಲ್ಲಿ ರಾಜಮನೆತನದ ಜೀತೇಂದ್ರನಾಯಕ ಜಹಾಗೀರದಾರ, ವೆಂಕಟಪ್ಪನಾಯಕ ಜಹಾಗೀರದಾರ, ವತನ್ದಾರರು, ಹಿರೆತನದವರು, ನಿಶೆಂದಾರರು, ಗುರುವರ್ಗದವರ ಜೊತೆ ಅಪಾರ ಭಕ್ತರು ಪಾಲ್ಗೊಂಡಿದ್ದರು.

click me!