ನಮ್ಮ ಪಕ್ಷದವರ ಕುತಂತ್ರದಿಂದ ಎಲೆಕ್ಷನ್‌ ಸೋತೆ : ರಾಜೀನಾಮೆ ಕೊಟ್ಟ ಬಿಜೆಪಿ ಮುಖಂಡ

By Kannadaprabha News  |  First Published Oct 11, 2021, 7:11 AM IST
  • ಇತ್ತೀಚೆಗಷ್ಟೇ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ನೀಡುವ ಮೂಲಕ ಸುದ್ದಿಯಾಗಿದ್ದ ಮಾಜಿ ಶಾಸಕ 
  • ನಮ್ಮ ಪಕ್ಷದವರ ಕುತಂತ್ರದಿಂದಲೇ ನನಗೆ ಕಳೆದ ಚುನಾವಣೆಯಲ್ಲಿ ನನಗೆ ಸೋಲಾಯಿತು ಎಂದು ಸ್ಫೋಟಕ ಹೇಳಿಕೆ

 ತುಮಕೂರು (ಅ.11):  ಇತ್ತೀಚೆಗಷ್ಟೇ ತುಮಕೂರು ಬಿಜೆಪಿ (BJP) ಜಿಲ್ಲಾಧ್ಯಕ್ಷ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ (Resignation) ನೀಡುವ ಮೂಲಕ ಸುದ್ದಿಯಾಗಿದ್ದ ಮಾಜಿ ಶಾಸಕ ಬಿ.ಸುರೇಶ ಗೌಡ  (Suresh Gowda)ಅವರು, ನಮ್ಮ ಪಕ್ಷದವರ ಕುತಂತ್ರದಿಂದಲೇ ನನಗೆ ಕಳೆದ ಚುನಾವಣೆಯಲ್ಲಿ (Election) ನನಗೆ ಸೋಲಾಯಿತು ಎಂದು ತಿಳಿಸಿದ್ದಾರೆ.

ಸಮೀಪದ ಗೂಳೂರಿನಲ್ಲಿ ನೂರಾರು ಅಭಿಮಾನಿಗಳು ಅದ್ಧೂರಿಯಾಗಿ ಸುರೇಶ್‌ ಗೌಡ ಅವರ ಹುಟ್ಟುಹಬ್ಬ ಆಚರಿಸಿದರು. ಈ ಸಂದರ್ಭದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರಕ್ಕೆ ನನ್ನಷ್ಟುಅನುದಾನ ತಂದವರಿಲ್ಲ. ಅಭಿವೃದ್ಧಿ ಕಡೆ ಹೆಚ್ಚು ಗಮನ ಹರಿಸಿದ್ದೆ. ಅಧಿಕಾರಿಗಳು ಮತ್ತು ಶಿಕ್ಷಕರೊಂದಿಗೆ ನೇರವಾಗಿ, ಕಟುವಾಗಿ ನಿಷ್ಠುರವಾಗಿ ಮಾತನಾಡಿದ್ದಕ್ಕೆ ಅವರ ಕುತಂತ್ರದಿಂದ ನಮ್ಮ ಪಕ್ಷದವರು ಹಾಗೂ ಜೆಡಿಎಸ್‌ (JDS), ಕಾಂಗ್ರೆಸ್‌ (Congress) ಒಳ ಒಪ್ಪಂದದಿಂದ ನನಗೆ ಸೋಲಾಯಿತು ಎಂದರು.

Tap to resize

Latest Videos

ರಾಜೀನಾಮೆ ಕೊಟ್ಟ ಸುರೇಶ್​ ಗೌಡ ಕಾಂಗ್ರೆಸ್ ಸೇರ್ತಾರಾ? ಈ ಬಗ್ಗೆ ಸ್ಪಷ್ಟನೆ ಕೊಟ್ಟ ಬಿಎಸ್‌ವೈ ಆಪ್ತ

ಚುನಾವಣೆಗಳಲ್ಲಿ (Election) ನನ್ನ ಹತ್ತಿರ ದುಡ್ಡು ಇಲ್ಲದೆ ಹೋದರೂ ಅವರವರೇ ಹಣವನ್ನು (Money) ಹೊಂದಿಸಿ ನನ್ನನ್ನು ಗೆಲ್ಲಿಸಿದ್ದರು. ಈ ಋುಣವನ್ನು ನಾನು ಏಳೇಳು ಜನ್ಮಕ್ಕೂ ತೀರಿಸಲಾರೆ. ನಾನು ಸತ್ತರೂ ನನ್ನ ಮಕ್ಕಳಿಗೆ ಹೇಳುತ್ತೇನೆ ನಮ್ಮ ಮನೆಗೆ ಕಷ್ಟಅಂತ ಬಂದ ಪ್ರತಿಯೊಬ್ಬ ಕಾರ್ಯಕರ್ತನ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಹೇಳಿ ಸಾಯುತ್ತೇನೆ ಎಂದು ಹೇಳುವ ಮೂಲಕ ಭಾವುಕರಾದರು.

ತುರುವೇಕೆರೆ ಶಾಸಕ ಮಸಾಲೆ ಜಯರಾಮ್ (Masale jayaram), ತುಮಕೂರು (Tumakuru) ಶಾಸಕ ಜ್ಯೋತಿ ಗಣೇಶ್‌ ಇದ್ದರು.

BSY ಭೇಟಿ

ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾತ್ರೋರಾತ್ರಿ ರಾಜೀನಾಮೆ ನೀಡಿದ್ದ,  ಮಾಜಿ ಶಾಸಕ ಬಿ. ಸುರೇಶ್‌ ಗೌಡ (B Suresh Gowda) ಮಾಜಿ ಸಿಎಂ ಬಿಎಸ್ ಯಡಿಯುರಪ್ಪ (BS Yediyurappa) ಅವರನ್ನ ಭೇಟಿ ಮಾಡಿದರು.

ಇಂದು (ಸೆ.29) ಬೆಂಗಳೂರಿನ (Bengaluru) ಕಾವೇರಿ ನಿವಾಸದಲ್ಲಿ ತಮ್ಮ ಗುರು ಬಿಎಸ್‌ವೈ ಭೇಟಿಯಾದ ಸುರೇಶ್ ಗೌಡ, ಪಕ್ಷದಲ್ಲಿನ ಕೆಲ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅಲ್ಲದೇ ಪಕ್ಷದಲ್ಲಿನ ಕೆಲ ವಿದ್ಯಾಮನಗಳ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಜೀನಾಮೆ ಕೊಟ್ಟ ಸುರೇಶ್​ ಗೌಡ ಕಾಂಗ್ರೆಸ್ ಸೇರ್ತಾರಾ? ಈ ಬಗ್ಗೆ ಸ್ಪಷ್ಟನೆ ಕೊಟ್ಟ ಬಿಎಸ್‌ವೈ ಆಪ್ತ

ಸ್ವಕ್ಷೇತ್ರ ತುಮಕೂರು ಗ್ರಾಮಾಂತರಕ್ಕೆ ಒತ್ತು ನೀಡುವ ದೃಷ್ಟಿಯಿಂದ ರಾಜೀನಾಮೆ ನೀಡಿರುವೆ ಎಂದಿದ್ದ ಸುರೇಶ್‌ ಗೌಡ, ಮಂಗಳವಾರ ನೇರವಾಗಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalin Kumar Kateel) ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಹಿರಂಗವಾಗಿಯೇ ಹೇಳಿದ್ದರು.

click me!