ಬಂಟ್ವಾಳದಲ್ಲಿ ಬಾಲಕಿ ಮೇಲೆ ಗ್ಯಾಂಗ್ ರೇಪ್ : ನಾಲ್ವರು ಅರೆಸ್ಟ್

By Kannadaprabha News  |  First Published Oct 10, 2021, 4:12 PM IST
  • ಬಂಟ್ವಾಳದಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಅರೆಸ್ಟ್
  •  ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಷ್ ಸೋನಾವಣೆ  ಮಾಹಿತಿ

 ಮಂಗಳೂರು(ಅ.10): ಬಂಟ್ವಾಳದಲ್ಲಿ (Bantwal) ನಡೆದ ಗ್ಯಾಂಗ್ ರೇಪ್ (Gang Rape) ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಇಂದು ಅರೆಸ್ಟ್ (Arrest) ಮಾಡಲಾಗಿದೆ. 

 ದಕ್ಷಿಣ ಕನ್ನಡ (Dakshina kannada) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಷ್ ಸೋನಾವಣೆ (Rishikesh Sonavane) ಈ ಬಗ್ಗೆ ಮಾಹಿತಿ ನೀಡಿದ್ದು, ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಇನಾಯತ್ ಉಲ್ಲಾ, ಲಾಡ್ಜ್ ಸತೀಶ್ ಎಂಬ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. 

Tap to resize

Latest Videos

undefined

ಶರತ್ ಶೆಟ್ಟಿ ಎಂಬಾತನಿಗೆ 16 ವರ್ಷದ ಬಾಲಕಿ (Minor Girl) ಜೊತೆ ಸಾಮಾಜಿಕ ಜಾಲತಾಣದಲ್ಲಿ (Social media) ಪರಿಚಯವಾಗಿದ್ದು, ಮಾರುತಿ ಮಂಜುನಾಥ್ ಮತ್ತು ಶರತ್ ಶೆಟ್ಟಿ ಬಾಲಕಿ ಜೊತೆ ಅಶ್ಲೀಲ ಚಾಟಿಂಗ್ ನಡೆಸಿದ್ದರು.

ವಿದೇಶದಲ್ಲಿ ಗಂಡ, ಕಾಮದಾಹದಿಂದ ದಾರಿ ತಪ್ಪಿದ ಪತ್ನಿ: ಬಳಿಕ ನಡೆದಿದ್ದು ಘನಘೋರ

ಅ.8 ರ ಬೆಳಗ್ಗೆ ಮಂಗಳೂರಿನಲ್ಲಿ (Mangaluru) ಮೀಟ್ ಮಾಡಲು ಕರೆಸಿಕೊಂಡಿದ್ದ ಶರತ್ ಮತ್ತು ಮಂಜುನಾಥ್ ಮಾಲ್ ಸುತ್ತಾಡಿ ನಂತರ ಪುಸಲಾಯಿಸಿ ರೆಸ್ಟ್ ಮಾಡೊಣ ಎಂದು ಬಂಟ್ವಾಳದ ಲಾಡ್ಜ್ ಗೆ (Lodge) ಕರೆದುಕೊಂಡು ಹೋಗಿದ್ದಾರೆ. 

ಲಾಡ್ಜ್ ನಲ್ಲಿ ಶರತ್ ಶೆಟ್ಟಿ, ಇನಾಯತ್ ಉಲ್ಲಾ ಮತ್ತು ಮಂಜುನಾಥ್ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಬಳಿಕ ಲಾಡ್ಜ್ ನ ಮ್ಯಾನೇಜರ್ ಸತೀಶ್ ಕೂಡ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. 

ಇನಾಯತ್ ಉಲ್ಲಾನನ್ನು ಕರೆಸಿಕೊಂಡಿದ್ದು, ಆತನೂ ಕೂಡ ಬಾಲಕಿ ಮೇಲೆ ಅಮಾನುಷವಾಗಿ ಎರಗಿದ್ದಾನೆ.  

ಶರತ್ ಶೆಟ್ಟಿ ಮತ್ತು ಮಾರುತಿ ಮಂಜುನಾಥ್  ಉಡುಪಿ ಜಿಲ್ಲೆಯ ಕಾಪು ನಿವಾಸಿಗಳಾಗಿದ್ದು, ಲಾಡ್ಜ್ ಸತೀಶ್ ಕುಂದಾಪರ ಮೂಲದವನಾಗಿದ್ದಾನೆ.  ಇನಾಯತ್ ಉಲ್ಲಾ ದಾವಣಗೆರೆ ಮೂಲದವನೆನ್ನುವುದು ತಿಳಿದು ಬಂದಿದೆ.

ಪಿಎಚ್‌ಡಿ ವಿದ್ಯಾರ್ಥಿನಿಗೆ ಕಿರುಕುಳ

 

ಪಿಎಚ್ ಡಿ (PHD) ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಡಿಯಲ್ಲಿ ಪ್ರಾಧ್ಯಾಪಕನ (Professor) ಬಂಧನವಾಗಿತ್ತು. ಆಂಧ್ರಪ್ರದೇಶದ (Andhrapradesh) ಆಚಾರ್ಯ ನಾಗಾರ್ಜುನ ವಿ.ವಿ.ಯ ಪ್ರಾಧ್ಯಾಪಕ ಡಾ.ಕೊಂಡೂರು ಸುಧೀರ್ ಕುಮಾರ್  ಆಂಧ್ರಪ್ರದೇಶದಲ್ಲಿಯೇ  ಮಂಗಳೂರು (Mangaluru) ಸೈಬರ್ ಕ್ರೈಮ್ ಪೊಲೀಸರು ಇಂದು ಅರೆಸ್ಟ್ (Arrest) ಮಾಡಿದ್ದಾದ್ದರು.

ಮಂಗಳೂರಿನ ವಿದ್ಯಾರ್ಥಿನಿ ಪ್ರಾಧ್ಯಾಪಕಿಯೊಬ್ಬರ  ಮಾರ್ಗದರ್ಶನದಲ್ಲಿ ಪಿಎಚ್ ಡಿ ಮಾಡುತ್ತಿದ್ದರು. ಈ ಮಧ್ಯೆ ಪರಿಚಯವಾದ ಸುಧೀರ್ ತನ್ನನ್ನು ಮಾರ್ಗದರ್ಶಕನಾಗಿ ನೇಮಿಸುವಂತೆ ಒತ್ತಾಯಿಸಿದ್ದ.  ಆದರೆ ವಿ.ವಿಯ ಅನುಮತಿ ಕೇಳಿದಾಗ ಆತನಿಗೆ ಅರ್ಹತೆಯಿಲ್ಲ ಎಂದು ನಿರಾಕರಿಸಲಾಗಿತ್ತು.  ಆದರೆ ಆ ಬಳಿಕವೂ ಸುಧೀರ್ ನಿಂದ ವಿದ್ಯಾರ್ಥಿನಿ (Student) ಮತ್ತು ಮನೆಯವರಿಗೆ ಕಿರುಕುಳ ನೀಡುತ್ತಿದ್ದ.

ಪೋನ್ ಮುಂದೆ ಬಚ್ಚೆ ಬಿಚ್ಚಿ ಬೆತ್ತಲೆ ಲೈವ್ ಬಾ, ವಿದೇಶಿ ಗಂಡನ ಹುಚ್ಚಾಟ!

ವಿದ್ಯಾರ್ಥಿನಿ ಇದನ್ನು ನಿರಾಕರಿಸಿದಾಗ ಆತ ಆಕೆಯ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಿದ್ದು, ಈ ಸಂಬಂಧ ವಿದ್ಯಾರ್ಥಿನಿ ಪೋಷಕರು  ಮಂಗಳೂರಿನಲ್ಲಿ ದೂರು ದಾಖಲಿಸಿದ್ದರು. 

ವಿದ್ಯಾರ್ಥಿನಿ ಪೋಷಕರ ದೂರಿನ ಹಿನ್ನೆಲೆ ಮಂಗಳೂರು ಪೊಲೀಸರು ಆರೋಪಿ ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿ.ವಿ.ಯ ಪ್ರಾಧ್ಯಾಪಕ ಡಾ.ಕೊಂಡೂರು ಸುಧೀರ್ ಕುಮಾರ್  ಅರೆಸ್ಟ್ ಮಾಡಿದ್ದರು.

click me!