ಯಾದಗಿರಿ: ಸೋಲಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ರಾಜುಗೌಡರ ಆಪ್ತ, ಆಸ್ಪತ್ರೆಗೆ ದಾಖಲು

By Girish GoudarFirst Published May 14, 2023, 1:35 PM IST
Highlights

ಸುದ್ದಿ ತಿಳಿದ ಕೂಡಲೇ ಮಾಜಿ ಸಚಿವ ರಾಜುಗೌಡ ಅವರು ಬಾಗಲಕೋಟೆ ನಗರದ ಆಸ್ಪತ್ರೆಗೆ ಭೇಟಿ ಗದ್ದೆಪ್ಪ ಪೂಜಾರಿ ಆರೋಗ್ಯವನ್ನ ವಿಚಾರಿಸಿದ್ದಾರೆ. 

ಯಾದಗಿರಿ(ಮೇ.14): ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜುಗೌಡ ಅವರ ಸೋಲಿನ ಸುದ್ದಿ ಕೇಳಿ ರಾಜುಗೌಡ ಆಪ್ತ ಗದ್ದೆಪ್ಪ ಪೂಜಾರಿ ತೀವ್ರ ಆಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಮಾಜಿ ಸಚಿವ ರಾಜುಗೌಡ ಅವರ ಆಪ್ತ ಗದ್ದೆಪ್ಪ ಪೂಜಾರಿ ಅವರು ತೀವ್ರ ಆಘಾತಕ್ಕೆ ಒಳಗಾಗಿ ಅಸ್ವಸ್ಥಗೊಂಡಿದ್ದಾರೆ. ತೀವ್ರ ಆಘಾತಕ್ಕೆ ಒಳಗಾಗಿ ಅಸ್ವಸ್ಥಗೊಂಡ ಗದ್ದೆಪ್ಪ ಪೂಜಾರಿ ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

YADGIR ELECTION RESULT ಯಾದಗಿರಿಯಲ್ಲಿ ಗಿರಗಿರ ತಿರುಗಿದ ಬಿಜೆಪಿ, 3 ಕ್ಷೇತ್ರ ಕಾಂಗ್ರೆಸ್ ಪಾಲು!

ಸುದ್ದಿ ತಿಳಿದ ಕೂಡಲೇ ಮಾಜಿ ಸಚಿವ ರಾಜುಗೌಡ ಅವರು ಬಾಗಲಕೋಟೆ ನಗರದ ಆಸ್ಪತ್ರೆಗೆ ಭೇಟಿ ಗದ್ದೆಪ್ಪ ಪೂಜಾರಿ ಆರೋಗ್ಯವನ್ನ ವಿಚಾರಿಸಿದ್ದಾರೆ. 

ಹೈ ವೋಲ್ಟೇಜ್‌ ಕ್ಷೇತ್ರವೆಂದೇ ಪರಿಗಣಿಸಲಾಗುವ ಸುರಪುರ ಕ್ಷೇತ್ರದಲ್ಲಿ ಈ ಬಾರಿ ಮತದಾರರು ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ ಅವರ ಕೈ ಹಿಡಿದಿದ್ದಾರೆ. ಮಾಜಿ ಸಚಿವ ಹಾಗೂ ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ್‌ (ರಾಜೂಗೌಡ) ಅವರಿಗೆ ಹಿನ್ನೆಡೆಯಾಗಿದೆ. ರಾಜೂಗೌಡರ ವಿರುದ್ಧ ರಾಜಾ ವೆಂಕಟಪ್ಪ ನಾಯಕ್‌ 25,176 ಭರ್ಜರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಆರಂಭದಿಂದಲೂ ಗುಪ್ತಗಾಮಿನಿಯಂತೆ ಹರಿದು ಬಂದಿದ್ದ ಆಡಳಿತ ಶಾಸಕರ ವಿರುದ್ಧದ ಅಲೆ ಇಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ. ರಾಜೂಗೌಡರ ವಿರುದ್ಧವಾದ ಅಲೆಗಳೆಲ್ಲವೂ ಒಂದಾಗಿ ಇಡೀ ಚುನಾವಣೆಯನ್ನು ಎದುರಿಸಿದ್ದು ಸತ್ಯ. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಣ ಗುಂಪುಗಳ ನಡುವಿನ ಪದೇ ಪದೇ ಘರ್ಷಣೆಗಳಿಂದಾಗಿ ಹಾಗೂ ವಾಕ್ಸಮರಕ್ಕೆ ಸಾಕ್ಷಿಯಾಗಿದ್ದ ಸುರಪುರ ಒಂದು ರೀತಿಯಲ್ಲಿ ಸೂಕ್ಷ್ಮ ವಾತಾವರಣಕ್ಕೂ ಸಾಕ್ಷಿಯಾಗಿತ್ತು.
 

click me!