ಎಲ್ಲರಿಗೂ ಗೌರವಿಸುವ ಕಾಂಗ್ರೆಸ್‌ನ್ನು ಬೆಂಬಲಿಸಿ : ಲೋಕೇಶ್ವರ

By Kannadaprabha NewsFirst Published Mar 19, 2023, 5:11 AM IST
Highlights

ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯತ ಸಮಾಜದ ಪ್ರಾಬಲ್ಯವೇ ಕಾರಣ. ಆದರೆ ಅದೇ ಪಕ್ಷದಲ್ಲಿ ಲಿಂಗಾಯತ ಸಮಾಜಕ್ಕೆ ಪದೇ ಪದೇ ಅವಮಾನವಾಗುತ್ತಲೇ, ಇದ್ದು ಸಿ.ಟಿ ರವಿಯವರ ಹೇಳಿಕೆಯನ್ನು ನಮ್ಮ ಲಿಂಗಾಯತ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡ ಹಾಗೂ ಕಾಂಗ್ರೆಸ್‌ ಮುಖಂಡ ಲೋಕೇಶ್ವರ ಆಕ್ರೋಶ ವ್ಯಕ್ತಪಡಿಸಿದರು.

 ತಿಪಟೂರು :  ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯತ ಸಮಾಜದ ಪ್ರಾಬಲ್ಯವೇ ಕಾರಣ. ಆದರೆ ಅದೇ ಪಕ್ಷದಲ್ಲಿ ಲಿಂಗಾಯತ ಸಮಾಜಕ್ಕೆ ಪದೇ ಪದೇ ಅವಮಾನವಾಗುತ್ತಲೇ, ಇದ್ದು ಸಿ.ಟಿ ರವಿಯವರ ಹೇಳಿಕೆಯನ್ನು ನಮ್ಮ ಲಿಂಗಾಯತ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡ ಹಾಗೂ ಕಾಂಗ್ರೆಸ್‌ ಮುಖಂಡ ಲೋಕೇಶ್ವರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಸಿ.ಟಿ.ರವಿ ಲಿಂಗಾಯತ ಸಮಾಜಕ್ಕೆ ಪ್ರಾಮುಖ್ಯತೆ ಕೊಡಬೇಡಿ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಬಿಜೆಪಿಗೆ ಲಿಂಗಾಯತ ಸಮಾಜವೇ ಶಕ್ತಿ. ಲಿಂಗಾಯತ ಸಮಾಜ ಮತಹಾಕದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿ ಲಿಂಗಾಯತ ಸಮಾಜವಿದೆ ಎಂದು ತಿಳಿದಿದ್ದರೂ ಬಿಜೆಪಿ ಅವಮಾನ, ಸ್ವಾಭಿಮಾನಕ್ಕೆ ಧಕ್ಕೆಯುಂಟಾಗುವ ಕೆಲಸವನ್ನೇ ಮಾಡುತ್ತಿದೆ. ಅದೇ ಕಾಂಗ್ರೆಸ್‌ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಲಿಂಗಾಯತ ಸಮಾಜಕ್ಕೆ ಗೌರವ ಕೊಡುವ ಮೂಲಕ ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದು ಎಂ.ಬಿ ಪಾಟೀಲ್‌ರಂತಹ ನಾಯಕರನ್ನು ಬೆಳೆಸಿದ್ದಾರೆ ಎಂದರು.

ವೀರಶೈವ ಲಿಂಗಾಯತ ಸಮಾಜದ ಮುಖಂಡ ಬನ್ನಿಹಳ್ಳಿ ಲೋಹಿತ್‌, ವಿನಯ್‌ ಮಡೇನೂರು ಮತ್ತು ಹರಚನಹಳ್ಳಿ ಹೇಮೇಶ್‌ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಸೊಪ್ಪುಗಣೇಶ್‌, ಸದಸ್ಯರಾದ ಭಾರತಿ, ಆಶೀಫಾ, ಮಾಜಿ ಸದಸ್ಯ ರಾಜಶೇಖರ್‌, ಸಮಾಜದ ಮುಖಂಡರಾದ ತಿಮ್ಮೇಗೌಡ, ನಂದೀಶ್‌, ನಾಗರಾಜು, ಪ್ರಸನ್ನ, ಶಂಕರ್‌, ನಿಜಗುಣ, ರೇಣುಪಟೇಲ್‌, ವನಿತಾ, ಡಾಬಾ ಶಿವಶಂಕರ್‌ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಭಾಗವಹಿಸಿದ್ದರು. 

ಕಾಂಗ್ರೆಸ್‌ನಿಂದ ಮಾತ್ರ ಎಲ್ಲರ ಏಳಿಗೆ

ಹುಣಸಗಿ(ಮಾ.18):  ಸರ್ವಜನಾಂಗದ ಏಳಿಗೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು. ತಾಲೂಕಿನ ಕುಪ್ಪಿ ಗ್ರಾಮದಲ್ಲಿ ಬಿಜೆಪಿ ತೊರೆದ ಅನೇಕ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡು ಮಾತನಾಡಿದ ಅವರು, ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಅಧಿಕಾರದಲ್ಲಿದ್ದಾಗ, ಇಲ್ಲದಾಗಲೂ ಸದಾ ರೈತ​ರಪರ ಇದ್ದು, ರೈತರ ಬೆಳೆಗಳಿಗೆ ನೀರು ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ಹೀಗಾಗಿ ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ನನಗೆ ಆರ್ಶೀವದಿಸಬೇಕು ಎಂದು ಮನವಿ ಮಾಡಿದರು.

ಬ್ಲಾಕ್‌ ಕಾಂಗ್ರೆಸ್‌ ತಾಲೂಕಾಧ್ಯಕ್ಷ ಚಂದ್ರಶೇಖರ ದಂಡಿನ್‌ ಮಾತನಾಡಿ, ಬಿಜೆಪಿ ಪಕ್ಷದವರು ಹೇಳುವ ಸುಳ್ಳು ಭರವಸೆಗಳನ್ನು ನಂಬಬೇಡಿ. ಇಲ್ಲಿಯವರಿಗೂ ಅಭಿವೃದ್ಧಿ ಮಾಡದೆ, ಚುನಾವಣೆ ಹತ್ತಿರಲಿದ್ದಾಗ ಅಭಿವೃದ್ಧಿ ತೋರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸರಳ ಸಜ್ಜನಿಕೆಯ ರಾಜಾ ವೆಂಕಟಪ್ಪನಾಯಕ ಅವರನ್ನು ಬೆಂಬಲಿಸಬೇಕು ಎಂದರು.

ಯಾದಗಿರಿ: ಬಿಜೆಪಿಯ ಮಾಲಕರೆಡ್ಡಿ ಪುತ್ರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಗುತ್ತಾ?

ಸುರಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿಮಾತನಾಡಿ, ಕುರುಬ ಜನಾಂಗದ ಮೂವರನ್ನು ಜಿಪಂ ಸದಸ್ಯರನ್ನಾಗಿ ಮಾಡಿದ ಕೀರ್ತಿ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರಿಗೆ ಸಲ್ಲುತ್ತದೆ. ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ನೀರಿಕ್ಷಿಸಲು ಸಾಧ್ಯವಿಲ್ಲ. ಅದು ಏನಿದ್ದರೂ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. 2023ಕ್ಕೆ ಬಿಜೆಪಿ ಸೋಲು ಖಚಿತ ಎಂದರು.

ಕೆಪಿಸಿಸಿ ಸದಸ್ಯರಾದ ಸಿದ್ದಣ್ಣ ಸಾಹುಕಾರ ಮಲಗಲದಿನ್ನಿ, ಗುಂಡಪ್ಪ ಸೊಲ್ಲಾಪುರ, ಮಲ್ಲಣ್ಣ ಸಾಹುಕಾರ ಮುಧೋಳ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಾಪುಗೌಡ ಪಾಟೀಲ್‌, ವೆಂಕೋಬ ಸಾಹುಕಾರ, ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಮುದಿಗೌಡ ಹಣಮರೆಡ್ಡಿ, ಚೆನ್ನಯ್ಯಸ್ವಾಮಿ, ಕೋನಪ್ಪಗೌಡ ತೆಗ್ಗಿನಮನಿ, ಶಾಂತಗೌಡ ಮಾಲಿಪಾಟೀಲ್‌, ನಿಂಗನಾಯ್ಕ ರಾಠೋಡ, ಗೋಪಾಲ ದೊರೆ, ನಿಂಗನಗೌಡ ಬಿರಾದಾರ್‌ ಇತರರಿದ್ದರು.

click me!