ಖಾಸಗಿ ಹಾಲಿನ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ ಎಫ್‌ಎಸ್‌ಎಸ್‌ಎಐ ಮಾನದಂಡಗಳ ಅನುಸಾರವಾಗಿರುವುದಿಲ್ಲ. ಇಂತಹ ಹಾಲನ್ನು ಬಳಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ, ಅಂತಹ ಖಾಸಗಿ ಕಂಪನಿಗಳ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಾಧಿಕಾರ ಸೂಚನೆ ನೀಡಿದೆ.
ಬೆಳಗಾವಿ(ನ.04): ಬೆಳ್ಳಗಿರುವುದೆಲ್ಲವೂ ಹಾಲಲ್ಲ. ಕರ್ನಾಟಕ- ಮಹಾರಾಷ್ಟ್ರ ಗಡಿಭಾಗದಲ್ಲಿ ಖಾಸಗಿ ಕಂಪನಿಗಳಿಂದ ಕಳಪೆ ಗುಣಮಟ್ಟದಿಂದ ಕೂಡಿದ ಹಾಲಿನ ಮಾರಾಟ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ನೆರೆಯ ಮಹಾರಾಷ್ಟ್ರದಿಂದ ನಗರದೊಳಗೆ ನಿರಾಂತಕವಾಗಿ ಕಳಪೆ ಗುಣಮಟ್ಟದಿಂದ ಕೂಡಿದ ಹಾಲಿನ ಪ್ಯಾಕೆಟ್ ಸಾಗಾಣಿಕೆಯಾಗುತ್ತಿದೆ.
ಖಾಸಗಿ ಕಂಪನಿಗಳ ಹಾಲಿನ ಪ್ಯಾಕೆಟ್‌ಗಳ ಗುಣಮಟ್ಟ ಪರೀಕ್ಷಿಸುವಂತೆ ಕರ್ನಾಟಕ ಸಹಕಾರಿ ಹಾಲು ಉತ್ಪಾದರಕರ ಮಹಾಮಂಡಳಿ ಪತ್ರ ಬರೆದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತರು ರಾಜ್ಯದ ಎಲ್ಲ ಜಿಲ್ಲಾ ಅಂಕಿತಾಧಿಕಾರಿಗಳಿಗೆ ಖಾಸಗಿ ಕಂಪನಿಗಳ ಪ್ಯಾಕೆಟ್ ಹಾಲಿನ ಗುಣಮಟ್ಟವನ್ನು ಪರೀಕ್ಷಿಸುವಂತೆ ಸೂಚನೆ ನೀಡಿದೆ.
ಬೆಳಗಾವಿ: ಗಂಡನಿಗೆ ಚಟ್ಟಕಟ್ಟಿ ಜೈಲು ಪಾಲಾದ ಪತ್ನಿ, ಮಕ್ಕಳಿಬ್ಬರು ಅನಾಥ..!
ಖಾಸಗಿ ಹಾಲಿನ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ ಎಫ್‌ಎಸ್‌ಎಸ್‌ಎಐ ಮಾನದಂಡಗಳ ಅನುಸಾರವಾಗಿರುವುದಿಲ್ಲ. ಇಂತಹ ಹಾಲನ್ನು ಬಳಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ, ಅಂತಹ ಖಾಸಗಿ ಕಂಪನಿಗಳ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಾಧಿಕಾರ ಸೂಚನೆ ನೀಡಿದೆ.
ಪ್ರತ್ಯೇಕ ರಾಜ್ಯದ ಕೂಗು ನಿಲ್ಲಲು ಅನುದಾನ ನೀಡಿ: ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ
ಬೆಳಗಾವಿ ಸೇರಿದಂತೆ ಕರ್ನಾಟಕದ ಇತರೆ ಜಿಲ್ಲೆಗಳಲ್ಲಿ ನಾವು ಬಳಸುವ ಬಹುತೇಕ ಎಲ್ಲ ಹಾಲಿನ ಪ್ಯಾಕೆಟ್‌ಗಳನ್ನು ಕೆಎಂಎಫ್ ಸಂಸ್ಥೆಯು ಗುಣಮಟ್ಟದಿಂದ ಕೂಡಿಲ್ಲ ಎಂಬುದನ್ನು ಪತ್ತೆ ಹಚ್ಚಿದೆ. ಖಾಸಗಿ ಕಂಪನಿಗಳ ಪ್ಯಾಕೆಟ್ ಹಾಲಿನ ಮಾದರಿಯಲ್ಲಿ ಸಂಗ್ರಹಿಸಿ, ಪರೀಕ್ಷೆಗೊಳಿಪಡಿಸಿದ್ದೇವೆ. ಕಳಪೆ ಗುಣಮಟ್ಟ ಕಂಡುಬಂದಿದೆ. ಅಂತಹ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಜಿಲ್ಲಾ ಅಂಕಿತಾಧಿಕಾರಿ ಡಾ. ಜಗದೀಶ ಜಿಂಗಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಅಥಣಿ, ಬೈಲಹೊಂಗಲ, ಗೋಕಾಕ, ಘಟಪ್ರಬಾ, ಬೆಳಗಾವಿ ನಗರ ಮತ್ತು ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಖಾಸಗಿ ಕಂಪನಿಗಳ ಪ್ಯಾಕೆಟ್ ಹಾಲಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಿಪಡಿಸಲಾಗಿದೆ. ಆದಿತ್ಯ, ಆರೋಕ್ಯ, ಗೋವಿಂದ ಸ್ಪೂರ್ತಿ, ಗೋಕುಲ್ ಕ್ಲಾಸಿಕ್, ವೈಟ್ ಗೋಲ್ಡ್, ರಾಧಿಕಾ ಮಿಲ್ಕ್, ಶಿವ ಮಿಲ್ಕ್ ಸಂಗಮ, ಗೋಪಿ, ಅಮುಲ್ ತಾಜ್ ಕಂಪನಿಗಳ ಹಾಲಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.