ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶ, ಅಧ್ಬುತ ಕ್ಷಣ ಕಣ್ತುಂಬಿಕೊಂಡ ಭಕ್ತರು

By Suvarna News  |  First Published Jan 15, 2020, 10:46 AM IST

ಐತಿಹಾಸಿಕ ಕಾಶಿ ಚಂದ್ರಮೌಳೇಶ್ವರ ಸ್ವಾಮಿ ದೇಗುಲದಲ್ಲಿ ಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶವಾಗಿದ್ದು, ಭಕ್ತರು ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಂಡರು.


ಮಂಡ್ಯ(ಜ.15): ಉತ್ತರಾಯಣಕ್ಕೆ ಸೂರ್ಯ ಪಥ ಬದಲಿಸಿದ ಹಿನ್ನೆಲೆ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶವಾಯಿತು. ಭಕ್ತರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿರುವ ದೇವಾಲಯದಲ್ಲಿ ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಂಡರು.

ಐತಿಹಾಸಿಕ ಕಾಶಿ ಚಂದ್ರಮೌಳೇಶ್ವರ ಸ್ವಾಮಿ ದೇಗುಲದಲ್ಲಿ ಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶವಾಗಿದ್ದು, ಇದು ಶ್ರೀರಂಗಪಟ್ಟಣದ ದಕ್ಷಿಣ ಕಾವೇರಿ ತೀರದಲ್ಲಿರುವ ಏಕೈಕ ಶಿವನ ದೇವಾಲಯವಾಗಿದೆ.

Tap to resize

Latest Videos

ಸಂಕ್ರಾಂತಿ ಸಂಭ್ರಮ: ಈ ಊರಲ್ಲಿ ದನಗಳ ಮೆರವಣಿಗೆಗೆ ಖರ್ಚು ಮಾಡೋದು ಲಕ್ಷ ಲಕ್ಷ..!.

ಚಂದ್ರಮೌಳೇಶ್ವರ ದೇವಸ್ಥಾನದ ಗರ್ಭ ಗುಡಿಯ ಲಿಂಗದ ಮೇಲೆ ಸೂರ್ಯನ ರಶ್ಮಿ ಸ್ಪರ್ಶವಾಗಿದ್ದು, ಲಿಂಗದ ಮೇಲೆ ಸೂರ್ಯನ ಪ್ರಥಮ ಕಿರಣಗಳು ಸ್ಪರ್ಶಿಸುವ ಕ್ಷಣಗಳನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು. ಜನ ಮುಂಜಾನೆಯಿಂದ ಕಾದು ಕುಳಿತು ಸೂರ್ಯ ರಶ್ಮಿ ಸ್ಪರ್ಶಿಸುವ ದೃಶ್ಯ ಕಣ್ತುಂಬಿಕೊಂಡಿದ್ದಾರೆ.

ಮುಂಜಾನೆ ಮೂರು ಗಂಟೆಯಿಂದಲೇ ಪೂಜಾ ಕೈಂಕರ್ಯ ನಡೆಯುತ್ತಿದ್ದು, ವಿವಿಧ ಅಭಿಷೇಕ, ಮಂಗಳಾರತಿ ಸೇರಿದಂತೆ ಹಲವು ಪೂಜೆ ಪುನಸ್ಕಾರಗಳು ನಡೆದಿವೆ. ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದೆ. ದೇವರಿಗೆ ಎಳ್ಳು, ಬೆಲ್ಲ ಅರ್ಪಣೆ ಮಾಡಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗಿದೆ. ನಂತರ ಗೋ ಪೂಜೆ ಮಾಡಲಾಗಿದೆ.

ಮಂಗಳೂರಲ್ಲಿ 5 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ

click me!