ಮದುವೆ ಮೆರವಣಿಗೆಗೆ ಅಬ್ಬಬ್ಬಾ ಎಂದರೆ 1 ಲಕ್ಷ ಖರ್ಚು ಮಾಡುತ್ತಾರೇನೋ.. ಆದ್ರೆ ಮಂಡ್ಯದಲ್ಲಿ ಸಂಕ್ರಾಂತಿ ಹಬ್ಬದ ಸಂದರ್ಭ ದನಗಳ ಮೆರವಣಿಗೆಗೇ 2 ಲಕ್ಷ ಖರ್ಚು ಮಾಡ್ತಾರೆ ಎಂದರೆ ನಂಬ್ತೀರಾ..?
ಮಂಡ್ಯ(ಜ.15): ಮದುವೆ ಮೆರವಣಿಗೆಗೆ ಅಬ್ಬಬ್ಬಾ ಎಂದರೆ 1 ಲಕ್ಷ ಖರ್ಚು ಮಾಡುತ್ತಾರೇನೋ.. ಆದ್ರೆ ಮಂಡ್ಯದಲ್ಲಿ ಸಂಕ್ರಾಂತಿ ಹಬ್ಬದ ಸಂದರ್ಭ ದನಗಳ ಮೆರವಣಿಗೆಗೇ 2 ಲಕ್ಷ ಖರ್ಚು ಮಾಡ್ತಾರೆ ಎಂದರೆ ನಂಬ್ತೀರಾ..?
ಸಕ್ಕರೆ ನಾಡಲ್ಲಿ ಸಂಕ್ರಾಂತಿ ಸಡಗರ ಮನೆ ಮಾಡಿದ್ದು, ಸಂಕ್ರಾಂತಿ ಹಬ್ಬ ಬಂದರೆ ಸಾಕು ಈ ಊರಲ್ಲಿ ಜೋಡೆತ್ತುಗಳ ಪ್ರತಿಷ್ಠೆ ಶುರುವಾಗುತ್ತದೆ. ಲಕ್ಷ-ಲಕ್ಷ ಕೊಟ್ಟು ಬೈಕು-ಕಾರು ತಂದು ಹೆಮ್ಮೆ ಪಡುವ ಹಾಗೇ ಈ ಊರ ಜನ ದನಗಳನ್ನ ತಂದು ಹೆಮ್ಮೆ ಪಡ್ತಾರೆ.
ಮಂಗಳೂರಲ್ಲಿ 5 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಮಂಡ್ಯದ ಹೊಸಹಳ್ಳಿಯಲ್ಲಿ ಪ್ರತಿವರ್ಷ ಪ್ರತಿಷ್ಠೆಯ ಸಂಕ್ರಾಂತಿ ನಡೆಯುತ್ತದೆ. ಈ ಊರಿನ ಮುಖಂಡರು ಲಕ್ಷ-ಲಕ್ಷ ಬೆಲೆಬಾಳುವ ಜೋಡೆತ್ತುಗಳನ್ನು ತರುತ್ತಾರೆ. ಜಾಸ್ತಿ ದುಡ್ಡಿನ ದನಗಳನ್ನ ತಂದು ವಿಜೃಂಭಣೆಯ ಮೆರವಣಿಗೆ ಮಾಡಿದ್ರೆ ಆತನಿಗೆ ಈ ಊರಿನಲ್ಲಿ ಗೌರವ ಸಿಗುತ್ತದೆ.
2-3 ಲಕ್ಷ ಕೊಟ್ಟು ತಂದ ದನಗಳಿಂದ ಕೆಲ್ಸವನ್ನೇ ಮಾಡ್ಸಲ್ಲ
2-3ಲಕ್ಷ ಬೆಲೆಬಾಳುವ ದನಗಳನ್ನು ತಂದು ಅವುಗಳಿಂದ ಕೆಲಸ ಮಾಡಿಸದೆ ಬೆಣ್ಣೆ-ತುಪ್ಪ, ಮೊಟ್ಟೆ, ಉದ್ದಿನ ಕಾಳು, ಹೆಸರುಕಾಳು ಆಹಾರ ಕೊಟ್ಟು ದನಗಳನ್ನ ಮಗುವಿನ ರೀತಿ ಸಾಕುತ್ತಾರೆ. ಹಬ್ಬಕ್ಕೆ ವಾರವಿರುವಂತೆ ಮನೆಮುಂದೆ ಪೆಂಡಾಲ್ ಹಾಕಿ ದನಗಳಿಗೆ ರಾಜವೈಭೋಗ ನೀಡುತ್ತಾರೆ. ಪ್ರತಿನಿತ್ಯ ಬಿಸಿ ನೀರ ಸ್ನಾನ ನೆರಳಲ್ಲೆ ವಿಶ್ರಾಂತಿ, ಸಮಯಕ್ಕೆ ಸರಿಯಾದ ಆಹಾರವನ್ನೂ ನೀಡಲಾಗುತ್ತದೆ.
ಮೈಸೂರು: ಸಂಕ್ರಾಂತಿ ಹಬ್ಬಕ್ಕೆ ಖರೀದಿ ಭರಾಟೆ..!
ವಿಜೃಂಭಣೆಯ ಹಬ್ಬ ಮಾಡಿ ಊರಿನಲ್ಲಿ ಸೈ ಎನ್ನಿಸಿಕೊಳ್ಳೋದೆ ಮಾಲೀಕರ ಗುರಿಯಾಗಿರುತ್ತದೆ. ಪೈಪೋಟಿಗೆ ಬಿದ್ದ ಗ್ರಾಮದ ಮುಖಂಡರು ಹಬ್ಬಕ್ಕಾಗಿ ಲಕ್ಷ ಲಕ್ಷ ಖರ್ಚು ಮಾಡುತ್ತಾರೆ. ಊರಿನವರು ಕಡಿಮೆ ಕಾಸಿನ ದನ ಎಂದು ಅಣಕಿಸಿದ್ದಕ್ಕೆ ಸ್ವಾಮಿಗೌಡ ಎಂಬುವರು 3 ಲಕ್ಷ ಬೆಲೆ ಬಾಳುವ ದನಗಳನ್ನು ಕೊಂಡು ತಂದಿದ್ದಾರೆ. ನಿಂಗೇಗೌಡ ಎಂಬುವವರು ತಮ್ಮ ದನಗಳ ವಿಜೃಂಭಣೆಯ ಮೆರವಣಿಗೆಗೆ ಖರ್ಚು ಮಾಡ್ತಿರೋದು ಬರೋಬ್ಬರಿ 2ಲಕ್ಷ ರೂಪಾಯಿ.
ಮೆನುನಿಂದ ಮಾಂಸಹಾರ ಮಾಯ: ಸಂಸತ್ ಕ್ಯಾಂಟೀನ್ ಶೀಘ್ರ ಸಸ್ಯಾಹಾರಿ!
ಇಂದು ಸಂಜೆ ಹೊಸಹಳ್ಳಿ ಗ್ರಾಮದಲ್ಲಿ ನಡೆಯುವ ಸಡಗರದ ಸಂಕ್ರಾಂತಿಯಲ್ಲಿ ದನ ಕಿಚಾಯಿಸುವ ಮುನ್ನ ದನಗಳ ಮಾಲೀಕರಿಂದ ಊರಿನ ತುಂಬೆಲ್ಲಾ ಅದ್ದೂರಿ ಮೆರವಣಿಗೆ ನಡೆಯುತ್ತದೆ. ಮೆರವಣಿಗೆಯಲ್ಲಿ ಡಿಜೆ ಸೌಂಡ್ಸ್ ಸೇರಿದಂತೆ ವಿವಿಧ ಕಲಾತಂಡಗಳು ಭಾಗಿಯಾಗುತ್ತವೆ. ಭರ್ಜರಿ ಹಬ್ಬ ಮಾಡಿ ಊರಿನವರಿಂದ ಸೈ ಎನಿಸಿಕೊಳ್ಳಲು ಊರಿನ ಮುಖಂಡರು ಪಣತೊಟ್ಟಿದ್ದಾರೆ.