ರಸ್ತೆಗುಂಡಿ ಮುಕ್ತ ಬೆಂಗಳೂರು ಬೇಕಾ? ಬನ್ನಿ..ಭಾಗವಹಿಸಿ

By Web DeskFirst Published Sep 26, 2018, 4:48 PM IST
Highlights

ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗಳು, ಟ್ರಾಫಿಕ್ ಸಮಸ್ಯೆ, ಕೊಳಚೆ ನೀರು, ಕಸ ... ಅಯ್ಯೋ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂಥದಕ್ಕೆಲ್ಲ ತಲೆ ಚಿಟ್ಟು ಹಿಡಿದು ಹೋಗಿದೆಯೇ?  ಆಡಳಿತಕ್ಕೆ ಬಿಸಿ ಮುಟ್ಟಿಸಬೇಕು ಎಂದು ಒಂದೆಲ್ಲಾ ಒಂದು ಸಂದರ್ಭದಲ್ಲಿ ನಿಮಗೆ ಅನ್ನಿಸಿಯೇ ಇರುತ್ತೆ.  ಗೊತ್ತಿದ್ದೂ ಗೊತ್ತಿಲ್ಲದೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸುವ ಮನಸ್ಸು ನಿಮಗಿದೆಯೇ.. ಅದಕ್ಕೆ ಒಂದು ಪರಿಹಾರವನ್ನು ನಾವು ಕೊಡುತ್ತಿದ್ದೇವೆ.. ಬನ್ನಿ ಕೈ ಜೋಡಿಸಿ.

ಬೆಂಗಳೂರು(ಸೆ.26)  ಸುಂದರ ಬೆಂಗಳೂರು ನಿರ್ಮಾಣ ಮಾಡುವುದು ಕೇವಲ ಆಡಳಿತದ ಜವಾಬ್ದಾರಿ ಮಾತ್ರವಲ್ಲ. ಅದರಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರವೂ ಇರುತ್ತದೆ. ನಿಮಗೆ ಯುನೈಟೆಡ್ ಬೆಂಗಳೂರು ಒಂದು ಅವಕಾಶ ಮಾಡಿಕೊಡುತ್ತಿದೆ.

ಈ ಬಗ್ಗೆ ಒಂದು ನಾಗರಿಕರ ಸಭೆ ಸೆಪ್ಟೆಂಬರ್ 29 ರಂದು ಇಂದಿರಾನಗರ ಕ್ಲಬ್ ನಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು ಪಾಲ್ಗೊಂಡು ಸಲಹೆ ನೀಡಬಹುದು.

ಸಭೆಯಲ್ಲಿನ ಪ್ರಮುಖ ವಿಚಾರಗಳು

- ಅಧಿಕಾರಿಗಳ‌ ನಿರ್ಲಕ್ಷ್ಯದಿಂದಾಗಿ‌ ನಗರದಲ್ಲಿ‌ ಪದೇ ಪದೇ ಆಗುತ್ತಿರುವ‌ ನೆರೆ ಪ್ರವಾಹ ದಿಂದಾಗಿ ತೊಂದರೆ ಅನುಭವಿಸುತ್ತಿದ್ದೀರಾ?
- ನಿಮ್ಮ ಮನೆಯ ಸುತ್ತ ಮುತ್ತ ನಡೆಯುತ್ತಿರುವ ಅಕ್ರಮ ವಾಣಿಜ್ಯ ಚಟುವಟಿಕೆ ಗಳಿಂದ ನಿಮ್ಮ ನೆಮ್ಮದಿ ಹಾಳಾಗುತ್ತಿದೆಯೇ?
- ನಿಮ್ಮ ಬಡಾವಣೆಯಲ್ಲಿ ನಡೆಯುತ್ತಿರುವ ಅನಧಿಕೃತ ಪಬ್ ಮತ್ತು ಬಾರ್ ಗಳಿಂದ ನಿಮ್ಮ ನೆಮ್ಮದಿ ಹಾಳಾಗುತ್ತಿದೆಯೇ?
- ನಿಮ್ಮ ಬಡಾವಣೆಯಲ್ಲಿ ನಡೆಯುತ್ತಿರುವ ಅನಧಿಕೃತ ಮಸಾಜ್ ಪಾರ್ಲರ್ಗಳಿಂದ ತೊಂದರೆ ಆಗಿದೆಯಾ?
- ನಿಮ್ಮ ಬಡಾವಣೆಯಲ್ಲಿ ಕಸ ವಿಲೇವಾರಿ ಸರಿಯಾಗಿ ಅಗುತ್ತಿಲ್ಲವೇ?
- ನಗರದಲ್ಲಿ ನಿರಂತರವಾಗಿ ನಡೆಯುತ್ತಿರುವ ಮರಗಳ ಮಾರಣಹೋಮದಿಂದ ನಿಮಗೆ ಬೇಸರವಾಗಿದೆಯೇ?
- ನಮ್ಮ ಬೆಂಗಳೂರಿನ ಕೆರೆ ಕಟ್ಟೆಗಳನ್ನು ರಕ್ಷಿಸಬೇಕೆ?
- ನಿಮ್ಮ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಬೇಕೇ?

ಅಕ್ರಮ ಗಣಿಗಾರಿಕೆ ನಿಲ್ಲಿಸಿ:
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಯುನೈಟೆಡ್‌ ಬೆಂಗಳೂರು ಸಂಸ್ಥೆ ಬನ್ನೆರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿತು.

ಸ್ವಾಂತ್ರ್ಯ ಹೋರಾಟಗಾರ ಎಚ್ .ಎಸ್ ದೊರೆಸ್ವಾಮಿ, ಪರಿಸರವಾದಿ ವಿಜಯ್ ನಿಶಾಂತ್, ಯುನೆಟೆಡ್ ಬೆಂಗಳೂರು ಸಂಚಾಲಕ ಎನ್.ಆರ್ . ಸುರೇಶ್  ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ನಿರಂತರವಾಗಿ  ಅಕ್ರಮ ಗಣಿಗಾರಿಕೆ ‌ನಡೆಯುತ್ತಿದೆ. ರಾಜ್ಯ ಸರ್ಕಾರ ಅಕ್ರಮ ಚಟುವಟಿಕೆ ನಿಯಂತ್ರಿಸಲು ವಿಫಲವಾಗಿದೆ. ರಾಷ್ಟ್ರೀಯ ಉದ್ಯಾನವನ ಸುತ್ತಮುತ್ತ 10 ಕಿ. ಮೀ ದೂರ ಯಾವುದೇ ಗಣಿಗಾರಿಕೆ ನಡೆಸಬಾರದು ಅದೇಶವಿದ್ರೂ  ಗಣಿಗಾರಿಕೆ ನಡೆಯುತ್ತಿದೆ ಎಂದು ದೊರೆಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ 2016 ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸಭೆಯಲ್ಲಿ ಅಕ್ರಮ ನಡೆಯುತ್ತಿದೆ ಉಲ್ಲೇಖಿಸಿದೆ. ಈ ಬಗ್ಗೆ ಯುನಿಟೆಡ್ ಬೆಂಗಳೂರು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದೆ. ಪರಿಸರವಾದಿಗಳು, ಸಂಘ ಸಂಸ್ಥೆಗಳ ಹೋರಾಟಕ್ಕೆ ಸರ್ಕಾರ ಕಿವಿಗೊಡುತ್ತಿಲ್ಲ. ಯುನೈಟೆಡ್ ಬೆಂಗಳೂರು ಹಮ್ಮಿಕೊಂಡಿರುವ ನಾಗರಿಕ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ. ಜನಪ್ರತಿನಿಧಿಗಳು ಹಾಗೂ ಸರಕಾರಿ ಅಧಿಕಾರಿಗಳೊಂದಿಗೆ ಮಾತನಾಡಿ.

click me!