ದತ್ತಪೀಠಕ್ಕೆ ಸುನೀಲ್ ಕುಮಾರ್ ಭೇಟಿ; ದತ್ತಪಾದುಕೆ ದರ್ಶನ

By Ravi Janekal  |  First Published Dec 7, 2022, 3:01 PM IST

ಚಿಕ್ಕಮಗಳೂರು ಜಿಲ್ಲೆಯ ವಿವಾದಿತ ಕೇಂದ್ರ ದತ್ತಪೀಠಕ್ಕೆ ಇಂಧನ ಸಚಿವ ವಿ ಸುನೀಲ್ ಕುಮಾರ್ ಕುಟುಂಬ ಸಮೇತರಾಗಿ ಇಂದು ಭೇಟಿ ನೀಡಿ ದತ್ತಪಾದುಕೆಯ ದರ್ಶನವನ್ನು ಮಾಡಿದರು. ಈ ವರ್ಷ ದತ್ತಪಾದುಕೆ ದರ್ಶನದ ಜೊತೆ ಹಿಂದೂ ಅರ್ಚಕರಿಂದ ಪೂಜೆ, ಮಂಗಳಾರತಿಯನ್ನ ನೋಡುವ ಭಾಗ್ಯ ಲಭಿಸಿದೆ. ಹಾಗಾಗಿ, ಈ ವರ್ಷದ ದತ್ತಜಯಂತಿ ಹಿಂದೂ ಸಮುದಾಯ ಮತ್ತು ದತ್ತಭಕ್ತಿರಿಗೆ ಅತ್ಯಂತ ಸಂತಸದ ದಿನ ಎಂದರು. 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು (ಡಿ.7) : ಚಿಕ್ಕಮಗಳೂರು ಜಿಲ್ಲೆಯ ವಿವಾದಿತ ಕೇಂದ್ರ ದತ್ತಪೀಠಕ್ಕೆ ಇಂಧನ ಸಚಿವ ವಿ ಸುನೀಲ್ ಕುಮಾರ್ ಕುಟುಂಬ ಸಮೇತರಾಗಿ ಇಂದು ಭೇಟಿ ನೀಡಿ ದತ್ತಪಾದುಕೆಯ ದರ್ಶನವನ್ನು ಮಾಡಿದರು. ಪತ್ನಿ ಮಕ್ಕಳೊಂದಿಗೆ ದತ್ತಮಾಲೆ ಧಾರಣೆ ಮಾಡಿಕೊಂಡು ಸಚಿವ ಸುನೀಲ್ ಕುಮಾರ್ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಯ ದರ್ಶನವನ್ನು ಮಾಡಿದರು. ನಂತರ ಸುದ್ದಿಗಾರೊಂದಿಗೆ ಮಾತಾಡಿದ ಅವರು, ಪ್ರತಿವರ್ಷಕ್ಕಿಂತ ಈ ವರ್ಷ ದತ್ತಜಯಂತಿ ಅತ್ಯಂತ ಸಂತೋಷ ಹಾಗೂ ಸಂಭ್ರಮದಿಂದ ಕೂಡಿದೆ ಎಂದರು. ಇಷ್ಟು ದಿನ ದತ್ತಾತ್ರೇಯರ ಪಾದುಕೆ ದರ್ಶನ ಮಾಡಿಕೊಂಡು ಹೋಗುತ್ತಿದ್ದೇವು. ಆದರೆ, ಈ ವರ್ಷ ದತ್ತಪಾದುಕೆ ದರ್ಶನದ ಜೊತೆ ಹಿಂದೂ ಅರ್ಚಕರಿಂದ ಪೂಜೆ, ಮಂಗಳಾರತಿಯನ್ನ ನೋಡುವ ಭಾಗ್ಯ ಲಭಿಸಿದೆ. ಹಾಗಾಗಿ, ಈ ವರ್ಷದ ದತ್ತಜಯಂತಿ ಹಿಂದೂ ಸಮುದಾಯ ಮತ್ತು ದತ್ತಭಕ್ತಿರಿಗೆ ಅತ್ಯಂತ ಸಂತಸದ ದಿನ ಎಂದರು. 

Latest Videos

undefined

ನನ್ನನ್ನು ಮುಲ್ಲಾಅಂತಾ ಕರೆದರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ: ಸಿ.ಟಿ.ರವಿ

ದತ್ತಪೀಠದ ಹೋರಾಟದಲ್ಲಿ ಈ ವರ್ಷ ಪುಳಕಿತ ವರ್ಷವಾಗಿದ್ದು ಹಲವು ವರ್ಷಗಳಿಂದ ನಮ್ಮ ಬೇಡಿಕೆ ಇದ್ದುದ್ದೇ ದತ್ತಾತ್ರೇಯರ ಪಾದುಕೆಗಳಿಗೆ ಹಿಂದೂ ಅರ್ಚಕರಿಂದ ಪೂಜೆ ಜೊತೆ, ತ್ರಿಕಾಲ ಪೂಜೆ ಆಗಬೇಕು ಎಂದು ಬೇಡಿಕೆ ಇಟ್ಟಿದ್ದೇವು. ಅದರಿಂದ ಬಿಜೆಪಿ ಸರ್ಕಾರ ಇಂದು ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಿಸಿ ಹಿಂದೂ ಅರ್ಚಕರಿಂದ ಪೂಜೆ ನೋಡಲು ಅವಕಾಶ ಕಲ್ಪಿಸಿದೆ. ಇದು ಹಿಂದೂಬಾಂಧವರಿಗೆ ಅತ್ಯಂತ ಸಂಭ್ರಮದ ದಿನವಾಗಿದ್ದು ನಾಲ್ಕೈದು ದಶಕಗಳ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ ಎಂದರು. 

ಹಿಂದೂಗಳ ಮನದಲ್ಲಿ ಮತ್ತಷ್ಟು ಧಾರ್ಮಿಕ ಭಾವನೆಗಳು ಅರಳಿವೆ, ಬಿಜೆಪಿ ಸರ್ಕಾರ ಬಂದಾಗೆಲ್ಲಾ ಹಿಂದೂಗಳ ಬೇಡಿಕೆಗೆ ಸಹಮತ ನೀಡುತ್ತಿದ್ದೇವೆ ಎಂದು ಹೇಳಿ ಮುಜರಾಯಿ ದೇವಸ್ಥಾನದಂತೆ ಎಲ್ಲಾ ಹಿಂದೂ ಧಾರ್ಮಿಕ ಚಟುವಟಿಕೆ ನಡೆಯಬೇಕು ಅದರ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರದ ಜೊತೆ ಎಲ್ಲಿ ಏನೇನು ಆಗಬೇಕೋ ಅದೆಲ್ಲವನ್ನೂ ಮಾಡ್ತೀವಿ ಎಂದು ಭರವಸೆ ನೀಡಿದರು. 

ದತ್ತಪೀಠ ವಿವಾದ: ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ: ಶ್ರೀರಾಮಸೇನೆ

ಕಿಡಿಗೇಡಿಗಳ ಚಟುವಟಿಕೆಗೆ ಸರ್ಕಾರ ಕ್ರಮ:

ಈ ರಾಜ್ಯದ ಭಾಷೆ-ನೆಲ-ಜಲದ ವಿಚಾರದಲ್ಲಿ ಎಲ್ಲರೂ ಒಂದು, ಒಗ್ಗಟ್ಟು ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು. ಗಡಿಭಾಗದಲ್ಲಿ ಎಂಇಎಸ್ ಹಾಗೂ ಕಿಡಿಗೇಡಿಗಳ ಚಟುವಟಿಕೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತೆ ಎಂದು ಭರವಸೆ ನೀಡಿ ಸಿಎಂ ಬಸವರಾಜ ಬೊಮ್ಮಾಯಿ ಸಾಂದರ್ಭಿಕವಾಗಿ ಎಚ್ಚರಿಕೆಯ ನಡೆಯನ್ನ ವ್ಯಕ್ತಪಡಿಸಿದ್ದಾರೆ. ಗಡಿಯಲ್ಲಿ ಕನ್ನಡದ ಭಾಷೆ-ಸಂಸ್ಕೃತಿಗೆ ತೊಂದರೆ ಆಗದಂತೆ ಸರ್ಕಾರ ಕ್ರಮಕೈಗೊಳ್ಳುತ್ತೆ, ಸಮಾಜದ ಶಾಂತಿಗೆ ತೊಂದರೆ ಮಾಡುವ ಚಟುವಟಿಕೆಗಳನ್ನ ಸರ್ಕಾರ ಸಹಿಸಲ್ಲ ಎಂದರು.

click me!