ಬೇಸಿಗೆ ಕಾಲ ಬಂತು ಅಂದ್ರೆ ಸಾಕು ಜನರು ಮನೆಯಿಂದ ಹೊರ ಬರೋದಕ್ಕೆ ನೂರು ಸಲ ಯೋಚನೆ ಮಾಡ್ತಾರೆ. ಅದ್ರಲ್ಲಂತೂ ಕಲ್ಲಿನಕೋಟೆ ಚಿತ್ರದುರ್ಗದಲ್ಲಂತೂ ಬಿಸಿಲಿನ ತಾಪಕ್ಕೆ ನಿತ್ಯ ಜನರು ಹೈರಾಣಾಗಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಮೇ.01): ಬೇಸಿಗೆ (Summer) ಕಾಲ ಬಂತು ಅಂದ್ರೆ ಸಾಕು ಜನರು ಮನೆಯಿಂದ ಹೊರ ಬರೋದಕ್ಕೆ ನೂರು ಸಲ ಯೋಚನೆ ಮಾಡ್ತಾರೆ. ಅದ್ರಲ್ಲಂತೂ ಕಲ್ಲಿನಕೋಟೆ ಚಿತ್ರದುರ್ಗದಲ್ಲಂತೂ (Chitradurga) ಬಿಸಿಲಿನ ತಾಪಕ್ಕೆ ನಿತ್ಯ ಜನರು ಹೈರಾಣಾಗಿದ್ದಾರೆ. ಬಿಸಿಲಿನ ತಾಪ ದಿನೇ ದಿನೇ ಹೆಚ್ಚಳ ಆಗ್ತಿರೋದಕ್ಕೆ ಜಮೀನಿನಲ್ಲಿ ಬೆಳೆದ ಹೂವು (Flower) ಬಾಡಿ ಹೋಗುತ್ತೆ ಎಂದು ರೈತರು (Farmers) ಮಾಡಿರೋ ಮಾಸ್ಟರ್ ಪ್ಲಾನ್ ಏನು ಗೊತ್ತಾ? ಈ ಸ್ಟೋರಿ ನೋಡಿ.
undefined
ಕಲರ್ ಕಲರ್ ಸೀರೆಗಳನ್ನು ಕಟ್ಟಿ ಸಿಂಗಾರಗೊಳಿಸಿರೋದು ಯಾವುದೋ ಮದುವೆ ಸಂಭ್ರಮಕ್ಕೋಸ್ಕರ ಅಲ್ಲ. ಮೇಲಾಗಿ ಬಿಸಿಲಿನ ತಾಪಕ್ಕೆ ಕಂಗಾಲಿರೋ ರೈತರು ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮದಲ್ಲಿ ತಮ್ಮ ಜಮೀನಿನಲ್ಲಿ ಬೆಳೆದಿರೋ ಕನಕಾಂಬರ ಹೂವು (Crossandra Infundibuliformis) ಬಾಡದಿರಲಿ ಅಂತ. ದಿನೇ ದಿನೇ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಳ ಆಗ್ತಿರೋದಕ್ಕೆ ಭಾಗಶಃ ಕೋಟೆ ನಾಡಿನ ಮಂದಿ ಹೈರಾಣಾಗಿ ಹೋಗಿದ್ದಾರೆ. ಬೆಳಗ್ಗೆ 10 ಗಂಟೆ ಆದರೆ ಸಾಕು ಸೂರ್ಯದೇವ ಜನರ ನೆತ್ತಿಗೆ ಪಟ್ಟನೇ ತಲೆ ಬಿಸಿ ಆಗೋ ರೀತಿ ಡಮರುಗ ಬಾರಿಸ್ದಂಗೆ ಬಾರಿಸುತ್ತಿರುತ್ತಾನೆ.
Chitradurga ಸಕ್ಕರೆ ಕಾರ್ಖಾನೆ ಮತ್ತೆ ತೆರೆಯುವಂತೆ ಹಿರಿಯೂರು ಜನರ ಆಗ್ರಹ
ಈಗಾಗಲೇ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದೇ ಕಂಗಾಲಾಗಿದ್ದಲ್ಲದೇ, ಬಿಸಿಲಿನ ತಾಪಕ್ಕೆ ಅರ್ಧ ಹೂವು ನಾಶವಾಗುತ್ತೆ ಎಂದು ಡಿಫರೆಂಟ್ ಪ್ಲಾನ್ ಮಾಡಿ ತಮ್ಮ ಮನೆಯಲ್ಲಿದ್ದ ಸೀರೆಗಳನ್ನೆಲ್ಲಾ ತಂದು ಬಿಸಿಲು ಬೀಳಬಾರದೆಂದು ಕಟ್ಟಿರೋದು ವಿಶೇಷವಾಗಿದೆ. ಇನ್ನೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದು ಅಲ್ಪ ಸ್ವಲ್ಪ ಲಾಭದ ನಿರೀಕ್ಷೆ ಕಾಣ್ತಿರೋ ರೈತರಿಗೆ ಬಿಸಿಲು ಕೂಡ ಬರೆ ಎಳೆಯುತ್ತಿರೋದು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಬಿಸಿಲು ಬೀಳಬಾರದು ಎಂದು ಸೀರೆ ಕಟ್ಟಿದರೂ ಅಲ್ಲಲ್ಲಿ ಹೂವುಗಳ ಬೆಳ್ಳಗಾಗ್ತಿವೆ.
ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ನೆಲಕಚ್ಚಿದ ಬಾಳೆ: ಮೂರಾಬಟ್ಟೆಯಾದ ರೈತನ ಬದುಕು
ಇತ್ತ ಸೂಕ್ತ ಬೆಲೆಯೂ ಇಲ್ಲ, ಅತ್ತ ಬೆಳೆಯೂ ಸರಿಯಾಗಿ ಸಿಗ್ತಿಲ್ಲ. ಮಾರುಕಟ್ಟೆ ತೆಗೆದುಕೊಂಡು ಹೋದ್ರೆ ದಲ್ಲಾಳಿಗಳ ಹಾವಳಿಯಲ್ಲಿ ಹೂವಿನ ರೇಟ್ ಕೈಗೆ ಎಟಕುತಿಲ್ಲ. ಕೂಲಿ ಕಾರ್ಮಿಕರಿಗೆ ಕೂಲಿ ಕೊಡುವುದಕ್ಕೂ ರೈತರ ಪಾಡು ಹೇಳತೀರದಾಗಿದೆ ಅಂತಾರೆ ನೊಂದ ರೈತರು. ಒಟ್ಟಾರೆಯಾಗಿ ಬಿರು ಬಿಸಿಲಿನ ತಾಪಕ್ಕೆ ಕೋಟೆನಾಡಿನ ಮಂದಿ ಹೈರಾಣಾಗಿದ್ದು, ತಾವು ಬೆಳೆದಿರೋ ಬೆಳೆಯಲ್ಲಾದ್ರು ಲಾಭದ ನಿರೀಕ್ಷೆ ಇಟ್ಕೊಂಡು ಡಿಫರೆಂಟ್ ಪ್ಲಾನ್ ಮಾಡ್ತಿದ್ದಾರೆ. ಯಾವುದೇ ಟೆಕ್ನಾಲಜಿ ಬಳಸದೇ ರೈತರು ನ್ಯಾಚುರಲ್ ಆಗಿ ಈ ರೀತಿ ಮಾಡಿರೋದು ಬೇರೆ ರೈತರಲ್ಲಿ ಉತ್ಸಾಹ ಹೆಚ್ಚಿಸಿದೆ.