Chikkaballapur Utsav: ಸುಧಾಕರ್ ವ್ಯಕ್ತಿಯಲ್ಲ, ಶಕ್ತಿ; ಭವಿಷ್ಯದ ನಾಯಕ : ವಸತಿ ಸಚಿವ ಸೋಮಣ್ಣ

By Ravi Janekal  |  First Published Jan 11, 2023, 3:17 AM IST

 ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷ, ಸುಧಾಕರ್ ಅವರು ಶಾಸಕರಾಗಿ 10 ವರ್ಷದ ಅವಧಿಯಲ್ಲಿ ಜಿಲ್ಲೆ 50 ವರ್ಷಗಳ ಅಭಿವೃದ್ಧಿ ಕಂಡಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಕೊಂಡಾಡಿದರು.


ವರದಿ- ರವಿಕುಮಾರ್ ವಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಬಳ್ಳಾಪುರ (ಜ.11): ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷ, ಸುಧಾಕರ್ ಅವರು ಶಾಸಕರಾಗಿ 10 ವರ್ಷದ ಅವಧಿಯಲ್ಲಿ ಜಿಲ್ಲೆ 50 ವರ್ಷಗಳ ಅಭಿವೃದ್ಧಿ ಕಂಡಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಕೊಂಡಾಡಿದರು.

Tap to resize

Latest Videos

ಚಿಕ್ಕಬಳ್ಳಾಪುರ ಉತ್ಸವ(Chikkaballapur Utsav)ದ 4ನೇ ದಿನದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬರಡು ನಾಡು ಎಂಬ ಖ್ಯಾತಿಗೆ ಪಾತ್ರವಾಗಿದ್ದ ಚಿಕ್ಕಬಳ್ಳಾಪುರವನ್ನು ಮಲೆನಾಡಿಗೆ ಸಮನಾಗಿ ಮಾಡಿದ ಕೀರ್ತಿ, ಭಗೀರಥ ಸುಧಾಕರ್(Dr K Sudhakar) ಅವರಿಗೆ ಸಲ್ಲುತ್ತದೆ. ಇಂತಹ ನಾಯಕನನ್ನು ಪಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ ಧನ್ಯರು ಎಂದು ಬಣ್ಣಿಸಿದರು.

ಸುಧಾಕರ್ ಅವರು ಚಿಕ್ಕಬಳ್ಳಾಪುರಕ್ಕೆ ಮಾತ್ರ ಶಾಸಕರಾಗಿಲ್ಲ ಬದಲಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಜೊತೆಗೆ ಕೋಲಾರ(Kolar)ದ ಶಾಸಕರೂ ಆಗಿದ್ದಾರೆ. ಇವರು ಇತಿಹಾಸದಲ್ಲಿ ಉಳಿಯುವ ಶಾಸಕರಾಗಿದ್ದಾರೆ. ಸರ್.ಎಂ. ವಿಶ್ವೇಶ್ವರಯ್ಯ, ಸಿ.ಎನ್.ಆರ್. ರಾವ್, ಎಚ್. ನರಸಿಂಹಯ್ಯ ಅವರು ಈ ಜಿಲ್ಲೆಯಲ್ಲಿ ಜನಿಸಿ ಶಾಶ್ವತವಾಗಿ ಉಳಿದಿರುವ ಮಾದರಿಯಲ್ಲಿಯೇ ಸುಧಾಕರ್ ಅವರ ಹೆಸರೂ ಶಾಶ್ವತವಾಗಿ ಉಳಿಯುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Chikkaballapur Utsav: ಬಿಜೆಪಿ ಸರ್ಕಾರಕ್ಕೆ ಹೆಸರು ತಂದ ಸುಧಾಕರ್‌

 ಸುಧಾಕರ್ ವ್ಯಕ್ತಿಯಲ್ಲ ಶಕ್ತಿ:

2023ರ ನಂತರ ಸುಧಾಕರ್ ಅವರು ಭವಿಷ್ಯದ ನಾಯಕರಾಗಿ ಹೊರಹೊಮ್ಮಲಿದ್ದಾರೆ, ರಾಜ್ಯದ 32 ಜಿಲ್ಲೆಗಳಲ್ಲಿ ತನ್ನದೇ ದೃಷ್ಟಿಕೋನದ ಮೂಲಕ ಕೋವಿಡ್(Covid) ಸಂದರ್ಭದಲ್ಲಿ ಸಮರ್ಪಕವಾಗಿ ನಿಭಾಯಿಸಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡಿ, ಅವರು ರಾಜ್ಯದಲ್ಲಿಯೇ ಶಾಶ್ವತವಾಗಿ ಉಳಿಯುವ ಅಭಿವೃದ್ಧಿ ಮಾಡಲಿದ್ದಾರೆ. ಸುಧಾಕರ್ ವ್ಯಕ್ತಿಯಲ್ಲ ಅವರೊಂದು ಶಕ್ತಿ ಎಂದು ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವುದು ಉತ್ಸವ ಅಲ್ಲ, ಬೃಹತ್ ಜಾತ್ರೆ. ರಾಜ್ಯದ 224 ಕ್ಷೇತ್ರಗಳಲ್ಲಿಯೂ ಸುಧಾಕರ್ ಬಂದು ತಮ್ಮದೇ ಆದ ಅಭಿವೃದ್ಧಿ ಬೀರಲಿದ್ದಾರೆ ಎಂದು ಭವಿಷ್ಯ ನುಡಿದರು.  ಜನರ ಜೀವನ ಮಟ್ಟ ಸುಧಾರಿಸಿ, ಪ್ರಕೃತಿ ಯಿಂದ ಆಗಿರುವ ಅನಾಹುತ ತಪ್ಪಿಸಿ, ಪ್ರಕೃತಿಯನ್ನೇ ರೈತರ ಬಾಳಿಗೆ ತಂದುಕೊಡುವ ಕೆಲಸ ಸುಧಾಕರ್ ಅವರು ಮಾಡಿದ್ದಾರೆ ಇದು ನೋಡಿದರೆ ಸಂತಸ ಆಗಲಿದೆ ಎಂದರು.

ಬಡವರಿಗೆ ಮನೆ, ನಿವೇಶನಗಳು, ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳ ಅಭಿವೃದ್ಧಿ, ಬಡವನಲ್ಲಿಯೂ ಶಕ್ತಿ ಇದೆ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅಧಿಕಾರ ಸಾಮಾನ್ಯರಿಗೆ ಎಂಬುದನ್ನು ತೋರಿಸಿದ ಕೀರ್ತಿ ಸುಧಾಕರ್ ಅವರಿಗೆ ಸಲ್ಲುತ್ತದೆ. ಅವರಿಗೆ ಅಭಾರಿಯಾಗಿರಬೇಕು, ಇಂತಹವರು ಹತ್ತಾರು ವರ್ಷಗಳ ಕಾಲ ರಾಜಕೀಯದಲ್ಲಿರಬೇಕು ಎಂದು ಸೋಮಣ್ಣ ಹಾರೈಸಿದರು.

 ಐದಾರು ಜಿಲ್ಲೆ ಹೊಣೆ ನೀಡಿದರೂ ನಿಭಾಯಿಸುತ್ತಾರೆ :

ಕೆಲಸಗಾರರಿಗೆ ಪಕ್ಷ, ಜಾತಿ ಇರಬಾರದು, ಇವರಿಗೆ ಐದಾರು ಜಿಲ್ಲೆ ನೀಡಿದರೂ ನಿಭಾಯಿಸುವ ಶಕ್ತಿ ಇದೆ. ಊಹೆಗೂ ನಿಲುಕದ ವಿಚಾರಗಳನ್ನು ಸಾಮಾನ್ಯರಿಗೆ ಅರ್ಥೈಸುವ ಕೆಲಸ ಮಾಡಿದ್ದಾರೆ. ಅವರ ದೂರದೃಷ್ಟಿಯ ಚಿಂತನೆಗೆ ಅಭಿನಂದನೆ. ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಕೇಳುವವರಿಗೆ ಉತ್ತರ ಚಿಕ್ಕಬಳ್ಳಾಪುರ ಉತ್ಸವದಲ್ಲಿ ದೊರೆಯಲಿದೆ ಎಂದು ಹೇಳಿದರು.

 ಮೆಟ್ರೋ ದುರಂತದ ಬಗ್ಗೆ ತನಿಖೆಗೆ ಆದೇಶ :

ಮೆಟ್ರೋದಲ್ಲಿ ನಡೆದಿರುವ ಅವಘಡದ ಬಗ್ಗೆ ಈಗಾಗಲೇ ತನಿಖೆ ನಡೆಸಲಾಗುತ್ತಿದೆ, ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ದೌಡಾಯಿಸಿದ್ದಾರೆ. ತಾಂತ್ರಿಕವಾಗಿ ಏನು ತೊಂದರೆಯಾಗಿದೆ ನೋಡಿ ಅವರ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಮೆಟ್ರೋದಲ್ಲಿ ಈವರೆಗೆ ಅವಘಡ ಆಗಿರಲಿಲ್ಲ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ತನಿಖೆಗೆ ಆದೇಶ ಮಾಡಿದ್ದಾರೆ ಎಂದು ಅವರು ತಿಳಿಸಿದರು.

 ಹೆತ್ತವರಿಗೆ ಹೆಸರು ತರುವ ಕೆಲಸ :

ಅಬಕಾರಿ ಸಚಿವ ಗೋಪಾಲಯ್ಯ(K Gopalaiah) ಮಾತನಾಡಿ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ ಹಂಚಿಕೆ ಸೇರಿದಂತೆ ಯಾರೂ ಮಾಡದ ಅಭಿವೃದ್ಧಿ ಮಾಡಿದ್ದಾರೆ. ಹೆತ್ತವರಿಗೆ ಒಳ್ಳೆಯ ಹೆಸರು ತರುವ ಕೆಲಸ ಅವರು ಮಾಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

 ಬೇರು ಮಟ್ಟ ಕಿತ್ತೆಸೆಯಲಾಗುವುದು :

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಸ್ಯಾಂಟ್ರೋ ರವಿಯಂತಹ ವ್ಯಕ್ತಿಗಳನ್ನು ಬೇರು ಮಟ್ಟ ಕಿತ್ತೆಸೆಯಲಾಗುವುದು ಎಂದು ತಿಳಿಸಿದರು. ಈಗಾಗಲೇ ಆರೋಪಿಗೆ ಸಹಕರಿಸಿದ ಆರೋಪದ ಮೇಲೆ ಇನ್ಸ್ ಪೆಪೆಕ್ಟರ್ ರನ್ನು ಅಮಾನತು ಮಾಡಲಾಗಿದೆ. ಅಂತಹವರನ್ನು ಬಿಡಲ್ಲ, ಬೇರು ಮಟ್ಟ ಕಿತ್ತುಹಾಕುತ್ತೇವೆ. ಅಂತಹ ವ್ಯಕ್ತಿಗಳು ಓಡಾಡಲೇ ಬಾರದು, ಅವರು ಎಲ್ಲಿರಬೇಕೋ ಅಲ್ಲಿರಬೋಕು, ಅವರಿಗೆ ಸ್ಥಾನ ತೋರಿಸುತ್ತೇವೆ ಎಂದು ಹೇಳಿದರು.

ಸುಧಾಕರ್‌ಗೆ ಸಿಎಂ ಆಗುವ ಎಲ್ಲಾ ಅರ್ಹತೆಯಿದೆ: ಸಚಿವ ಎಸ್‌.ಟಿ.ಸೋಮಶೇಖರ್‌

 ಸುಧಾಕರ್ ಅವರಿಗೆ ನಾನು ಆಭಾರಿ :

ಕೋವಿಡ್ ಎರಡನೇ ಅಲೆಯಲ್ಲಿ ನನ್ನನ್ನು ರಕ್ಷಣೆ ಮಾಡಿದವರು ಸುಧಾಕರ್ ಅವರು. ಇದಕ್ಕೆ ನಾನು ಅಬಾರಿಯಾಗಿದ್ದೇನೆ ಎಂದ ಅವರು, ಕರ್ನಾಟಕವನ್ನು ಕೋವಿಡ್ ನಿಂದ ಪಾರು ಮಾಡಿದ ವ್ಯಕ್ತಿ, ಇಂತಹ ವ್ಯಕ್ತಿ ಮಾಡುತ್ತಿರುವ ಉತ್ಸವದ ಬಗ್ಗೆ ಚಿಂತನೆ ಮಾಡುವ ಕೆಲಸ ಇದೆ. ಪ್ರದರ್ಶನ, ಮಾದರಿ ಗ್ರಾಮ ಎಲ್ಲವನ್ನೂ ಕಲಿಸುತ್ತದೆ. ನೀರಾವರಿ ಯೋಜನೆಗಳ ಅನುಷ್ಠಾನ ಸೇರಿದಂತೆ ಇವರ ಅಭಿವೃದ್ಧಿ ಅನುಕರಣೀಯ, ಅವರ ಚಿಂತನೆ, ಕಾರ್ಯಪ್ರವೃತ್ತಿ, ದಕ್ಷತೆ ಉತ್ಸವದಲ್ಲಿ ಮೇಳೈಸಿದೆ ಎಂದು

click me!