Bengaluru Rains: ಬೆಂಗ್ಳೂರಲ್ಲಿ ದಿಢೀರ್‌ ಮಳೆ, ಇಂದೂ ಅಬ್ಬರಿಸುವ ಸಾಧ್ಯತೆ

Kannadaprabha News   | Asianet News
Published : Dec 10, 2021, 07:57 AM ISTUpdated : Dec 10, 2021, 09:15 AM IST
Bengaluru Rains:  ಬೆಂಗ್ಳೂರಲ್ಲಿ ದಿಢೀರ್‌ ಮಳೆ, ಇಂದೂ ಅಬ್ಬರಿಸುವ ಸಾಧ್ಯತೆ

ಸಾರಾಂಶ

*   ಕಚೇರಿಯಿಂದ ಮರಳುವವರು, ದ್ವಿಚಕ್ರ ವಾಹನ ಸವಾರರ ಪರದಾಟ *  ದ್ವಿಚಕ್ರ ವಾಹನ ಸವಾರರ ಪರದಾಟ *  ಇಂದೂ ಕೂಡ ಹಗುರದಿಂದ ಮಳೆಯಾಗುವ ಸಾಧ್ಯತೆ 

ಬೆಂಗಳೂರು(ಡಿ.10):  ನಗರದಲ್ಲಿ(Bengaluru) ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ(Rain) ಗುರುವಾರ ಸಂಜೆ ದಿಢೀರ್‌ ಸುರಿದಿದೆ.  ಸಂಜೆ ಆಗಾಗ ತುಂತುರು ಮಳೆ ಆಗುತ್ತಿದ್ದರೂ 6.30ರ ಹೊತ್ತಿಗೆ ಸುಮಾರು ಹತ್ತು ನಿಮಿಷಗಳ ಕಾಲ ಏಕಾಏಕಿ ಭರ್ಜರಿ ಮಳೆಯಾಯಿತು. ಇದರಿಂದ ದ್ವಿಚಕ್ರ ವಾಹನ ಸವಾರರು ಸೇರಿದಂತೆ ಬಸ್‌ಗೆ ಕಾಯುವರು, ಕಚೇರಿಯಿಂದ ಮರಳುವವರಿಗೆ ಸಮಸ್ಯೆ ಆಯಿತು. 

ಮಳೆಯ ಅಬ್ಬರ ಹೆಚ್ಚಿರಲಿಲ್ಲ, ಹಾಗೆಯೇ ಗಾಳಿಯು ತೀವ್ರವಾಗಿರಲಿಲ್ಲ. ಆದ್ದರಿಂದ ಮಳೆ ಅನಾಹುತದ ಯಾವುದೇ ದೂರುಗಳು ರಾತ್ರಿ ಹತ್ತರ ತನಕ ಬಂದಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ(BBMP Helpline) ಸಿಬ್ಬಂದಿ ಹೇಳಿದ್ದಾರೆ.
ಶೇಷಾದ್ರಿಪುರ, ಮಲ್ಲೇಶ್ವರ, ರಾಜಾಜಿನಗರ, ಮೆಜೆಸ್ಟಿಕ್‌, ಬ್ಯಾಟರಾಯನಪುರ, ದೊಡ್ಡಬೊಮ್ಮಸಂದ್ರ, ವಿಜಯನಗರ, ಮನೋರಾಯನಪಾಳ್ಯ, ಆರ್‌.ಟಿ.ನಗರ, ಸದಾಶಿವನಗರ, ಶಿವಾನಂದ ಸರ್ಕಲ್‌, ಶಿವಾಜಿ ನಗರ, ದಯಾನಂದ ನಗರ, ನಂದಿನಿ ಲೇಔಟ್‌, ಕಾಡುಗೋಡಿ, ಹೂಡಿ, ನಾಗಪುರ, ಕೊಡಿಗೇಹಳ್ಳಿ ಭಾಗದಲ್ಲಿ ಮಳೆಯಾಗಿದೆ.

Bengaluru: ಪ್ರವಾಹ ತಡೆಯಲು 900 ಕೋಟಿ ವೆಚ್ಚದ ಹೊಸ ಪ್ಲಾನ್‌: ಸಿಎಂ ಬೊಮ್ಮಾಯಿ

ಹೊರಮಾವು 2 ಸೆಂ.ಮೀ, ಅಟ್ಟೂರು 1.9 ಸೆಂ.ಮೀ, ಯಲಹಂಕ ಕೆಎಸ್‌ಎನ್‌ಡಿಎಂಸಿ 1.8 ಸೆಂ.ಮೀ., ಕೊಡಿಗೇಹಳ್ಳಿ 1.45 ಸೆಂ.ಮೀ, ಜಕ್ಕೂರು 1.4 ಸೆಂ.ಮೀ., ವಿದ್ಯಾರಣ್ಯಪುರ 1.1 ಸೆಂ.ಮೀ., ರಾಧಾಕೃಷ್ಣ ಟೆಂಪಲ್‌ ಮತ್ತು ದೊಡ್ಡಬೊಮ್ಮಸಂದ್ರ 1 ಸೆಂ.ಮೀ. ಮಳೆಯಾಗಿದೆ.

ಇಂದು(ಶುಕ್ರವಾರ) ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ಮುಂಜಾನೆಯ ಹೊತ್ತು ನಗರದ ಕೆಲವೆಡೆ ಮಂಜು ಕವಿದ ವಾತಾವರಣ ಇರಲಿದೆ. ನಗರದ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಡಿಗ್ರಿ ಮತ್ತು 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ(Department of Meteorology) ತಿಳಿಸಿದೆ.

ಉತ್ತಮ ಮಳೆಯಿಂದ ರೈತನ ಮೊಗದಲ್ಲಿ ಮಂದಹಾಸ

ಅರಸೀಕೆರೆ(Arsikere):  ದೈವ ಕೃಪೆಯಿಂದಾಗಿ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಬಂದಿದ್ದು ತಾಲೂಕಿನ ಹಲವು ಕೆರೆಕಟ್ಟೆಗಳು ಭರ್ತಿಯಾಗಿ ರೈತನ(Farmers) ಮೊಗದಲ್ಲಿ ಮಂದಾಹಾಸ ಮೂಡಿಸಿದೆ ಎಂದು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಶಂಭುನಾಥ ಸ್ವಾಮೀಜಿ(Shambunath Swamiji) ಹೇಳಿದರು.

Bengaluru Rain : 20 ವರ್ಷಗಳ ವೈಜ್ಞಾನಿಕ ಎಚ್‌ಐವಿ, ಕೊರೋನಾ ಸೇರಿ ವಿವಿಧ ವೈರಸ್‌ ಸಂಗ್ರಹ ನೀರುಪಾಲು

ತಾಲೂಕಿನ ಲಾಳನಕೆರೆ ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದಿರುವ ಹಿನ್ನಲೆಯಲ್ಲಿ ಶ್ರೀ ಮಾರಿಕಾಂಬಾ ದೇವಿಯ(Marikamba Devi) ಉತ್ಸವದೊಂದಿಗೆ ಬಾಗಿನ ಸಮರ್ಪಿಸಿ ಮಾತನಾಡಿದರು. ಕಳೆದ ಹತ್ತಾರು ವರ್ಷಗಳಿಂದ ವರುಣ ಕೃಪೆ ತೋರದ ಹಿನ್ನಲೆಯಲ್ಲಿ ಕೆರೆ, ಕಟ್ಟೆಗಳು ನೀರಿಲ್ಲದೇ ಬಣಗುಡುತ್ತಿದ್ದವು. ಇದರಿಂದಾಗಿ ಸಹಸ್ರಾರು ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿತವಾಗಿದ್ದು, ಅನ್ನದಾತನನ್ನು ಕಂಗಾಲು ಮಾಡಿತ್ತು. ಜತೆಗೆ ತಾಲೂಕಿನ ವಾಣಿಜ್ಯ ಬೆಳೆ ತೆಂಗು, ಅಡಕೆ, ದಾಳಿಂಬೆ ಸೇರಿ ಹಲವು ತೋಟಗಾರಿಕಾ ಬೆಳೆಗಳು ವಿನಾಶದ ಅಂಚಿಗೆ ತಲುಪಿದ್ದವು.ಜನ ಜಾನುವಾರುಗಳು, ಹಕ್ಕಿ ಪಕ್ಷಿಗಳು ಕಾಡು ಬಿಟ್ಟು ನಾಡು ಸೇರುವ ದುಸ್ಥಿತಿ ನಿರ್ಮಾಣವಾಗಿ ತೀವ್ರ ಸಂಕಷ್ಟಎದುರಾಗಿತ್ತು. ಕಳೆದೆರಡು ತಿಂಗಳಿನಿಂದ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗಿದ್ದು ಸಣ್ಣಪುಟ್ಟಕೆರೆ, ಕುಂಟೆಗಳಿಗೂ ನೀರು ಹರಿದು ಬಂದಿದ್ದು ಜನ ಜಾನುವಾರುಗಳ(Livestock) ಜಲ ದಾಹ ನೀಗಲಿದೆ ಎಂದರು.

ಬಿಜೆಪಿ ಮುಖಂಡ ಲಾಳನಕೆರೆ ಯೋಗೀಶ್‌ ಮಾತನಾಡಿ, ಒಮ್ಮೆ ಕೆರೆಕಟ್ಟೆಗಳು ತುಂಬಿದರೆ ಅದನ್ನೇ ನಂಬಿ ಜೀವನ ನಡೆಸುವ ಸಾವಿರಾರು ಜನರ ಹೊಟ್ಟೆ ವರ್ಷಾನುಗಟ್ಟಲೆ ತುಂಬುತ್ತದೆ. ಇದನ್ನರಿತ ನಮ್ಮ ಪೂರ್ವಿಕರು ಊರುಕೇರಿಯ ಹೊರವಲಯಗಳಲ್ಲಿ ಕೆರೆಕಟ್ಟೆಗಳನ್ನು ನಿರ್ಮಿಸಿ ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಮೂಲಕ ಬೆಳೆ ಬೆಳೆಯುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಆಧುನಿಕತೆಯ ಹೆಸರಿನಲ್ಲಿ ಕೆರೆಕಟ್ಟೆಗಳು ಮಾಯವಾಗುತ್ತಿದ್ದು ಕೃಷಿ ಚಟುವಟಿಕೆಗೆ ಇರಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ(water) ಹಾಹಾಕಾರ ಪಡಬೇಕಾದ ದುಸ್ಥಿತಿ ನಿರ್ಮಾಣವಾಗಬಹುದು. ಈಗಲೇ ಮನುಷ್ಯ ಎಚ್ಚೆತ್ತುಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
 

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC