ಹುಬ್ಬಳ್ಳಿ: 101 ವರ್ಷ ವಯಸ್ಸು, 40 ನಿಮಿಷದ ಸರ್ಜರಿ, ಮರುದಿನ ಡಿಸ್ಚಾರ್ಜ್! ದೇಶದ ಮೊದಲ ಯಶಸ್ವಿ ಕೀಲು ಚಿಕಿತ್ಸೆ!

Kannadaprabha News   | Kannada Prabha
Published : Jul 17, 2026, 10:57 AM IST
Successful joint surgery for a 101 year old man at hubballi

ಸಾರಾಂಶ

ದೇಶದಲ್ಲೇ ಮೊದಲ ಬಾರಿಗೆ ಶತಾಯುಷಿಗೆ ಅಪರೂಪದ ರೀತಿಯ ಸೊಂಟದ ಕೀಲು (Hip Joint) ಮುರಿತಕ್ಕೆ ಹುಬ್ಬಳ್ಳಿಯ ಎಲುಬು ಕೀಲು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

 ಹುಬ್ಬಳ್ಳಿ (ಜು.17): ದೇಶದಲ್ಲೇ ಮೊದಲ ಬಾರಿಗೆ ಶತಾಯುಷಿಗೆ ಅಪರೂಪದ ರೀತಿಯ ಸೊಂಟದ ಕೀಲು (Hip Joint) ಮುರಿತಕ್ಕೆ ಹುಬ್ಬಳ್ಳಿಯ ಎಲುಬು ಕೀಲು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಶತಾಯುಷಿಗೆ ಶಸ್ತ್ರ ಚಿಕಿತ್ಸೆ:

ಇಲ್ಲಿನ ದಾಜಿಬಾನಪೇಟೆಯಲ್ಲಿ ಇರುವ ಎಲುಬು ಕೀಲು ಮತ್ತು ಮಲ್ಟಿಸ್ವೆಷಾಲಿಟಿ ಆಸ್ಪತ್ರೆಯ ತಜ್ಞ ಡಾ। ಭಾಸ್ಕರ್ ರಾವ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಶಿಗ್ಗಾಂವಿ ತಾಲೂಕಿನ ಚಿಕ್ಕಬೆಂಡಿಗೇರಿಯ ಶತಾಯುಷಿ, 101 ವರ್ಷದ ನಿವೃತ್ತ ಶಿಕ್ಷಕ ಇಮಾಮಸಾಬ್ ತಮ್ಮ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಎಡಭಾಗದ ಹಿಪ್ ಜಾಯಿಂಟ್‌ ಸಮೀಪ ಅಪರೂಪದ ರೀತಿಯ ಫ್ರಾಕ್ಚರ್ ಆಗಿರುವುದು ದೃಢಪಟ್ಟಿತ್ತು. ರೋಗಿ ಮತ್ತೆ ಸಹಜವಾಗಿ ನಡೆಯಬೇಕಾದರೆ ಹಿಪ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆಯೇ ಶಾಶ್ವತ ಪರಿಹಾರ ಆಗಿತ್ತು ಎಂದು ವಿವರಿಸಿದರು.

ಈ ಶಸ್ತ್ರಚಿಕಿತ್ಸೆ ಹಿರಿಯ ನಾಗರಿಕರಲ್ಲಿ ಹೆಚ್ಚು ಅಪಾಯ

ಈ ಶಸ್ತ್ರಚಿಕಿತ್ಸೆ ಹಿರಿಯ ನಾಗರಿಕರಲ್ಲಿ ಹೆಚ್ಚು ಅಪಾಯಕಾರಿ. ಹೃದಯ ತಜ್ಞರು, ಫಿಸಿಷಿಯನ್ ಸೇರಿದಂತೆ ವಿವಿಧ ವಿಭಾಗಗಳ ವೈದ್ಯರ ಸಮನ್ವಯದೊಂದಿಗೆ ರೋಗಿಯನ್ನು ಸಂಪೂರ್ಣವಾಗಿ ಸಿದ್ಧಪಡಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದು ದೇಶದಲ್ಲಿಯೇ ಮೊದಲ ಪ್ರಕರಣವಾಗಿದೆ. ಜೂ.7ರಂದು 40 ನಿಮಿಷ ಶಸ್ತ್ರಚಿಕಿತ್ಸೆ ನಡೆಸಿದ್ದು ರೋಗಿಯು ಮರುದಿನವೇ ವಾಕರ್‌ ಸಹಾಯದಿಂದ ನಡೆಯಲು ಆರಂಭಿಸಿದ್ದಾರೆ ಎಂದರು.

. ಶಸ್ತ್ರಚಿಕಿತ್ಸೆಗೆ 4ರಿಂದ 5 ಲಕ್ಷ ರು. ತಗುಲಿದರೆ ನಮ್ಮ ಆಸ್ಪತ್ರೆಯಲ್ಲಿ ₹1.40 ಲಕ್ಷದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿಸಿದರು.

PREV
Read more Articles on
click me!

Recommended Stories

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳಿಗೆ ವೇಗ ನೀಡಿ: ಅಧಿಕಾರಿಗಳಿಗೆ ಸಂಸದ ಬಿವೈ ರಾಘವೇಂದ್ರ ಸೂಚನೆ
Bidadi Township Row: ಹೆಚ್‌ಡಿಕೆ ಪ್ರಾರಂಭಿಸಿದ್ದರೆ ಡಿಕೆಶಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ?