ಗ್ರಾಮ ಪಂಚಾಯಿತಿ ಚುನಾವಣೆಗೆ ಜೈಲಿನಿಂದಲೇ ನಾಮಪತ್ರ ಸಲ್ಲಿಕೆ| ಪಿ.ಪಿ.ಬೋಪಣ್ಣ ಎಂಬವರು ಜೈಲಿಂದಲೇ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ| ದೌರ್ಜನ್ಯ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಬೋಪಣ್ಣ, ನಾಲ್ಕು ಅವಧಿಯಿಂದ ಸದಸ್ಯರಾಗಿದ್ದರು|
ಮಡಿಕೇರಿ(ಡಿ.18): ಜೈಲಿನಿಂದಲೇ ಚುನಾವಣೆಗೆ ನಾಮಪತ್ರ ಸಲ್ಲಿಸಿ ಗೆದ್ದು ಆಡಳಿತ ನಡೆಸಿರುವ ಅನೇಕ ಉದಾಹರಣೆಗಳನ್ನು ದೇಶದ ಕೆಲಭಾಗಗಳಲ್ಲಿ ಈ ಹಿಂದೆ ಕಂಡಿದ್ದೇವೆ. ಇದೀಗ ಗ್ರಾಮ ಪಂಚಾಯಿತಿ ಚುನಾವಣೆಗೆ ಜೈಲಿನಿಂದಲೇ ನಾಮಪತ್ರ ಸಲ್ಲಿಸಿರುವ ವಿಶೇಷ ಪ್ರಕರಣ ಕೊಡಗು ಜಿಲ್ಲೆಯ ಪಾಲಿಬೆಟ್ಟದಲ್ಲಿ ನಡೆದಿದೆ. ಪಿ.ಪಿ.ಬೋಪಣ್ಣ ಎಂಬವರು ಜೈಲಿಂದಲೇ ನಾಮಪತ್ರ ಸಲ್ಲಿಸಿದವರು.
ಪಾಲಿಬೆಟ್ಟ ಗ್ರಾಮ ಪಂಚಾಯಿತಿಯಯ ಎಮ್ಮೆಗುಂಡಿ ವಾರ್ಡ್‌ನಿಂದ ಸ್ಪರ್ಧೆ ಮಾಡಿದ್ದಾರೆ. ದೌರ್ಜನ್ಯ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಬೋಪಣ್ಣ, ನಾಲ್ಕು ಅವಧಿಯಿಂದ ಸದಸ್ಯರಾಗಿದ್ದರು.
ತಲಕಾವೇರಿಯ ಗಜಗಿರಿ ಬೆಟ್ಟ ಕುಸಿತಕ್ಕೆ ಮಾನವನ ಹಸ್ತಕ್ಷೇಪ ಕಾರಣ
ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅವರ ಪರ ಅವರ ಬೆಂಬಲಿಗರು ಅಗತ್ಯ ದಾಖಲೆಗಳೊಂದಿಗೆ ಇತ್ತೀಚೆಗೆ ನಾಮಪತ್ರ ಸಲ್ಲಿಸಿದ್ದಾರೆ.