ಉಭಯ ಮಠಗಳು ಸೌಹಾರ್ಧತೆಯಿಂದ ಒಗ್ಗಟ್ಟಾಗುವ ಸಮಯ ಬಂದಿದೆ: ಸುಬುಧೇಂದ್ರ ಶ್ರೀ

By Girish GoudarFirst Published Dec 10, 2023, 7:48 PM IST
Highlights

ನವವೃಂದಾವನದ ವಿವಾದ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಿದ್ಧ. ಈ ವಿವಾದ ದೀರ್ಘಾವಧಿಯ ವಿವಾದವಾಗಿದೆ. ಅನಿವಾರ್ಯ ಕಾರಣಕ್ಕೆ ನ್ಯಾಯಲಯಕ್ಕೆ ಹೋಗಿದೆ. ಈ ವಿವಾದ ಬಗೆಹರಿಸಿಕೊಳ್ಳಲು ನಾವು ಮೊದಲಿಗರು ಎಂದ ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ 
 

ಗಂಗಾವತಿ(ಡಿ.10):  ಮುಂಬರುವ ದಿನಗಳಲ್ಲಿ  ಉಭಯ ಮಠಗಳು ಸೌಹಾರ್ಧತೆಯಿಂದ ಒಗ್ಗಟ್ಟಾಗುವ ಸಮಯ ಕೂಡಿ ಬಂದಿದೆ ಎಂದು ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಹೇಳಿದರು.   ತಾಲೂಕಿನ ಆನೆಗೊಂದಿಯ ನವ ವೃಂದಾವನ ಗಡ್ಡೆಯಲ್ಲಿ ಶ್ರೀಪದ್ಮನಾಭತೀರ್ಥ ಶ್ರೀಪಾದಂಗಳವರ 700 ನೇ ವರ್ಷದ ಪೂರ್ವಾರಾಧನೆ ಕಾರ್ಯಕ್ರಮ ನೆರವೇರಿಸಿ ಪತ್ರಕರ್ತರೊಂದಿಗೆ ಮಾತನಾಡಿದರು. ನವವೃಂದಾವನದ ವಿವಾದ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಿದ್ಧ. ಈ ವಿವಾದ ದೀರ್ಘಾವಧಿಯ ವಿವಾದವಾಗಿದೆ. ಅನಿವಾರ್ಯ ಕಾರಣಕ್ಕೆ ನ್ಯಾಯಲಯಕ್ಕೆ ಹೋಗಿದೆ. ಈ ವಿವಾದ ಬಗೆಹರಿಸಿಕೊಳ್ಳಲು ನಾವು ಮೊದಲಿಗರು ಎಂದರು. 

ನವವೃಂದಾವನದಲ್ಲಿ ಮೂಲಭೂತ ಸೌಲಭ್ಯ ರಾಯರ ಮಠದಿಂದ ಕ್ರಮ ಕೈಗೊಳ್ಳಲಾಗಿದೆ. ನವವೃಂದಾವನವು ಈಗ ಸರಕಾರ ಸುಪರ್ದಿಯಲ್ಲಿದ್ದರಿಂದ ನ್ಯಾಯಲಯದ ಆದೇಶ ಪಾಲನೆ ಮಾಡಲಾಗುವುದು. ಸರಕಾರದ ಅನುಮತಿ ಪಡೆದು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು. ಅಯೋದ್ಯಯ ಶ್ರೀರಾಮಮಂದಿರ ಉಧ್ಘಾಟನೆಗೆ ಅಹ್ವಾನ ಬಂದಿದೆ ಸಮಯ ನೋಡಿ ಅಯೋದ್ಯೆಗೆ ತೆರುಳುತ್ತೇನೆ ಎಂದರು.

ಸಿಎಂ ಸಿದ್ದರಾಮಯ್ಯರಿಂದ ಈಡಿಗ ಸಮುದಾಯ ಒಡೆಯುವ ಕೆಲಸ: ಪ್ರಣವಾನಂದ ಸ್ವಾಮೀಜಿ

ಶ್ರೀರಾಮನ ಜನ್ಮ ಸ್ಥಳ ಅಭಿವೃದ್ಧಿ ಯಾದಂತೆ ಅಂಜನಾದ್ರಿಯೂ ಅಭಿವೃದ್ಧಿಯಾಗಬೇಕು. ಪಕ್ಷಾತೀತವಾಗಿ ಅಂಜನಾದ್ರಿ ಅಭಿವೃದ್ಧಿಯ ಬಗ್ಗೆ ಧ್ವನಿ ಎತ್ತಿದ್ದಾರೆ ಅದಕ್ಕೆ ನಾವು ಸಹ ಸರಕಾರಕ್ಕೆ ಒತ್ತಾಯಿಸಲಾಗುತ್ತದೆ. ಸನಾತನ ಧರ್ಮದ ಬಗ್ಗೆ ಯಾರು ಮಾತನಾಡಬಾರದು. ಸನಾತನ ಧರ್ಮದ ಬಗ್ಗೆ ಮಾತನಾಡಿದರೆ ಅದಕ್ಕೆ ತಕ್ಕ ಪಾಠ ಕಲಿಯಬೇಕಾಗುತ್ತದೆ. ಸನಾತನ ಧರ್ಮದ ಬಗ್ಗೆ ವಿಧರ್ಮಿಯರು ಹಾಗೂ ಸ್ವಧರ್ಮೀಯರು ಮಾತನಾಡಬಾರದು. ಸನಾತನ ಹಿಂದೂ ಧರ್ಮವನ್ನು ರಕ್ಷಿಸಬೇಕಾಗಿದೆ. ಕೆಲವರು ಧರ್ಮವನ್ನು ವಿರೋಧಿಸುತ್ತಿರವುದು ಸರಿಯಲ್ಲ ಎಂದರು.

ನವವೃಂದಾವನ ಗಡ್ಡೆ ಸಮಗ್ರವಾಗಿ ಅಭಿವೃದ್ದಿಯಾಗಬೇಕಾಗಿದೆ. ಮಂತ್ರಾಲಯ ಮಠದಿಂದ ಮೂಲಭೂತ ಸೌಕರ್ಯ ಕಲ್ಪಿಸಿದೆ. ಕರ್ನಾಟಕ ಸರಕಾರ ಉಚಿತ ಸಾರಿಗೆ ಬಸ್ಸುಗಳನ್ನು ಮಂತ್ರಾಲಯದವರಿಗೂ ಉಚಿತವಾಗಿ ಬಿಡಬೇಕು. ಕರ್ನಾಟಕ ಸರಕಾರ ಇದರ ಬಗ್ಗೆ ಗಮನ ಹರಿಸಬೇಕೆಂದರು. 

click me!