Kodagu: ನರಿಮಲೆ ಬೆಟ್ಟ ಏರಿ ಪರಿಸರ ಅಧ್ಯಯನ ಮಾಡಿದ ವಿದ್ಯಾರ್ಥಿಗಳು

By Govindaraj S  |  First Published Jan 23, 2023, 9:23 AM IST

ವಿದ್ಯಾರ್ಥಿಗಳು ಪರಿಸರದ ಬಗ್ಗೆ ಅರಿವು ಪಡೆದುಕೊಂಡರೆ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ. ವಿದ್ಯಾರ್ಥಿಗಳು ಪರಿಸರದ ಬಗ್ಗೆ ಅರಿವನ್ನು ಹೊಂದಿದರೆ ಮಾತ್ರ ಪರಿಸರ ಸಂರಕ್ಷಣೆ ಮಾಡಬಹುದು. 


ವರದಿ: ರವಿ ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜ.23): ವಿದ್ಯಾರ್ಥಿಗಳು ಪರಿಸರದ ಬಗ್ಗೆ ಅರಿವು ಪಡೆದುಕೊಂಡರೆ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ. ವಿದ್ಯಾರ್ಥಿಗಳು ಪರಿಸರದ ಬಗ್ಗೆ ಅರಿವನ್ನು ಹೊಂದಿದರೆ ಮಾತ್ರ ಪರಿಸರ ಸಂರಕ್ಷಣೆ ಮಾಡಬಹುದು. ಇಲ್ಲದಿದ್ದರೆ ಪರಿಸರದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ಇಲ್ಲದೆ  ಪರಿಸರ ನಾಶಕ್ಕೆ ಮುಂದಾಗಬಹುದು ಎಂದು ಪರಿಸರವಾದಿ ಬೋಸ್ ಮಾದಪ್ಪ ಅಭಿಪ್ರಾಯ ಪಟ್ಟರು. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಕಾವೇರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಬ್ರಹ್ಮಗಿರಿ ವನ್ಯಜೀವಿಧಾಮದ ನರಿಮಲೆ ಬೆಟ್ಟಕ್ಕೆ ಪರಿಸರ ಅಧ್ಯಯನ ಮತ್ತು ಚಾರಣ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. 

Tap to resize

Latest Videos

undefined

ಈ ಸಂದರ್ಭ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕೊಡಗು ವೈಲ್ಡ್ ಲೈಫ್ ಸೊಸೈಟಿಯ ಉಪಾಧ್ಯಕ್ಷರು ಹಾಗೂ ವನ್ಯಜೀವಿ ಪರಿಪಾಲಕರಾದ ಬೋಸ್ ಮಾದಪ್ಪನವರು ಪರಿಸರ ಅಧ್ಯಯನ ಮತ್ತು ಚಾರಣದ ಕುರಿತು  ವಿದ್ಯಾರ್ಥಿಗಳಿಗೆ  ಮಾಹಿತಿ ನೀಡಿದ್ರು. ಪರಿಸರದಲ್ಲಿ ಅನೇಕ ಜೀವ ಪ್ರಭೇದಗಳಿದ್ದು ಅವುಗಳು ಮಾನವನಂತೆ ಪರಿಸರದಲ್ಲಿ ಬದುಕುವ ಸ್ವತಂತ್ರ ಪಡೆದಿವೆ. ಮಾನವನಿಗೆ ಬದುಕುವ ಹಕ್ಕಿರುವಂತೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡಿದ್ದಲ್ಲದೆ ವನ್ಯಜೀವಿಗಳನ್ನು ಬೇಟೆಯಾಡಿ ತನ್ನ ಆಹಾರವನ್ನಾಗಿಸಿ ಕೊಂಡಿದ್ದಾನೆ. ಇದರಿಂದ ಪರಿಸರ ಅಸಮತೋಲನವಾಗಿ ಹವಾಮಾನ ವೈಪರಿತ್ಯವಾಗುತ್ತಿದೆ. 

26 ಕೆರೆಗಳಲ್ಲಿ ಮನೆ, ತೋಟ ನಿರ್ಮಾಣ: ಒತ್ತುವರಿ ತೆರವು ಮಾಡದ ಅಧಿಕಾರಿಗಳು

ಪರಿಸರ ನಾಶವಾದಂತೆ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪರಿಸರ ಪ್ರತಿಯೊಬ್ಬ ಮಾನವನಿಗೂ ಅಗತ್ಯವಿರುವಂತೆ ಪ್ರಾಣಿ, ಪಕ್ಷಿಗಳಿಗೂ ಅಗತ್ಯವಾಗಿದ್ದು ಪರಿಸರವನ್ನು ಅವಲಂಬಿಸಿ ಜೀವನ ಸಾಗಿಸುತ್ತಿವೆ. ಜಗತ್ತಿನ ಪರಿಸರವೆಲ್ಲ ಮಾನವನಿಗೆ ಮಾತ್ರ ಎಂದು ಭಾವಿಸುವ ಜನರ ಮನಸ್ಥಿತಿ ಬದಲಾಗಬೇಕಾಗಿದೆ. ಕೊಡಗಿನಲ್ಲಿ ವನ್ಯಜೀವಿ ಸಂರಕ್ಷಿತ ಪ್ರದೇಶವಿದ್ದು ಕಾಡು ಪ್ರಾಣಿಯನ್ನು ಬೇಟೆಯಾಡುವುದನ್ನು ರದ್ದುಪಡಿಸಲಾಗಿದೆ.  ಕೊಡಗಿನ ಪರಿಸರದಲ್ಲಿ ಜೀವ ವೈವಿಧ್ಯಗಳಿದ್ದು ಅವುಗಳಲ್ಲಿ ಅವನತಿಯ ಅಂಚಿನಲ್ಲಿರುವ ಅನೇಕ ಜೀವ ಪ್ರಬೇಧಗಳಿವೆ. 

ಆದರೆ ಕಳ್ಳ ಬೇಟೆಗಾರರು ಅವನತಿಯ ಅಂಚಿನಲ್ಲಿರುವ ಪ್ರಾಣಿಗಳನ್ನೇ ಹಿಡಿಯುತ್ತಿರುವುದು ದುರದೃಷ್ಟಕರ ಎಂದು ಆತಂಕ ವ್ಯಕ್ತಪಡಿಸಿದರು. ಮಾನವನ ಸ್ವಾರ್ಥಕ್ಕೆ ಪರಿಸರವನ್ನು ನಾಶ ಮಾಡಿದರೆ ಮುಂದೊಂದು ದಿನ ಪರಿಸರವೇ ಮಾನವನನ್ನು ನಾಶ ಮಾಡಿಬಿಡುತ್ತದೆ. ಆದ್ದರಿಂದ ಮಾನವ ಎಚ್ಚರಿಕೆಯಿಂದ ಇರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಬ್ರಹ್ಮಗಿರಿ ಅರಣ್ಯ ಪ್ರದೇಶದ ಫಾರೆಸ್ಟರ್ ಮಲ್ಲನಗೌಡ ಪಾಟೀಲ್ ಮಾತನಾಡಿ ಕರ್ನಾಟಕದಲ್ಲಿ ಅನೇಕ ಅರಣ್ಯ ಪ್ರದೇಶಗಳಿದ್ದರೂ ಕೊಡಗಿನ ಅರಣ್ಯ ಪ್ರದೇಶ ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಕೊಡಗಿನಲ್ಲಿ ವಿಶೇಷವಾದ ಮರ-ಗಿಡಗಳನ್ನು ಗುರುತಿಸಬಹುದು. ಅಲ್ಲದೇ ಔಷದಿಯ ಸಸ್ಯಗಳಾದ ನೆಲ್ಲಿ, ತಾಳೆ, ಅರಳೆ ಮುಂತಾದ ಔಷಧಿಯ ಸಸ್ಯಗಳಿಂದಲೇ ಔಷಧಿಗಳು ತಯಾರಾಗುತ್ತಿದ್ದು, ಪ್ರತಿ ಸಸ್ಯವರ್ಗದಲ್ಲೂ ಔಷಧಿಯ ಗುಣಗಳಿವೆ. 

ಪೋಷಕರನ್ನು ಹೊರಹಾಕಿದ ಮಕ್ಕಳಿಗೆ ತಕ್ಕಶಾಸ್ತಿ: ತಂದೆ-ತಾಯಿಗೆ ಆಸ್ತಿ ವಾಪಸ್‌ ಕೊಡಿಸಿದ ಕೋರ್ಟ್‌

ಆದ್ದರಿಂದ  ಸಸ್ಯ ಮತ್ತು ಪ್ರಾಣಿಗಳನ್ನು ಸಂರಕ್ಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕಾಗಿದೆ. ಅಲ್ಲದೆ ಈ ಒಂದು ವನ್ಯಧಾಮದಲ್ಲಿ ಕೆಲವೊಂದು ಅಪರೂಪದ ಜೀವಿಗಳಿದ್ದು ಅದನ್ನ ನೋಡುವುದು ಬಹಳ ಕಷ್ಟ ಅದೃಷ್ಟ ಇದ್ದವರಿಗೆ ಅದರ ದರ್ಶನವಾಗುವುದಾಗಿ ಮಾಹಿತಿ ನೀಡಿದರು.  ಈ ಚಾರಣದಲ್ಲಿ  ಎನ್ ಎಸ್ ಎಸ್ ಯೋಜನಾಧಿಕಾರಿಯಾದ ವನೀತ್ ಕುಮಾರ್ ಎಂ.ಎನ್. ಉಪನ್ಯಾಸಕಿಯಾದ ಪೂಜಾ.ಕೆ.ಎಸ್. ಎನ್ಎಸ್ಎಸ್ ನಾಯಕರಾದ ಕಲನ್ ಕಾರಿಯಪ್ಪ ಮತ್ತು ದರ್ಶನ್.ಎಸ್.ಕೆ ಸೇರಿದಂತೆ 44 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರಿಸರದ ಕುರಿತ ಅರಿವು ಪಡೆದುಕೊಳ್ಳುವುದರ ಜೊತೆಗೆ ಚಾರಣದ ಅನುಭವ ಪಡೆದರು.

click me!