ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯದಲ್ಲಿ ನೀರು ಇಲ್ಲದಿರುವುದನ್ನು ಖಂಡಿಸಿ ವಿದ್ಯಾರ್ಥಿನಿಯರು ಬುಧವಾರ ಪ್ರತಿಭಟನೆ ನಡೆಸಿದರು
ರಾಯಚೂರು (ಡಿ.14): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯದಲ್ಲಿ ನೀರು ಇಲ್ಲದಿರುವುದನ್ನು ಖಂಡಿಸಿ ವಿದ್ಯಾರ್ಥಿನಿಯರು ಬುಧವಾರ ಪ್ರತಿಭಟನೆ ನಡೆಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿನಿಲಯದಲ್ಲಿ ಕಳೆದ ಒಂದು ತಿಂಗಳಿಂದ ವಾರ್ಡನ್ ಸಮರ್ಪಕ ನೀರು ಪೂರೈಕೆಗೆ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಅವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ವಾರ್ಡನ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೇ ವಾರ್ಡನ್ ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕು ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದರು.
undefined
ಪೊಲೀಸರನ್ನು ಪರೀಕ್ಷಿಸಲು ರಾಜಭವನಕ್ಕೆ ಬಾಂಬ್ ಬೆದರಿಕೆ ಹಾಕಿದ್ನಂತೆ ಆಸಾಮಿ!
ಮಂಗಳವಾರ ಸಂಜೆ ಕೆಲ ಮಾಧ್ಯಮದವರು ವಸತಿ ನಿಲಯಕ್ಕೆ ಭೇಟಿ ನೀಡಿ ವರದಿಗೆ ಮುಂದಾಗಿದ್ದಾರೆ. ಮಾಧ್ಯಮದವರಿಗೆ ನೀವೇ ಹೇಳಿದ್ದೀರಿ ಎಂದು ವಾರ್ಡನ್ ಕೆಲ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಅವರಿಗೆ ರಾತ್ರಿ ಊಟ ಮತ್ತು ಬೆಳಗಿನ ಉಪಾಹಾರ ಮತ್ತು ಊಟ ನೀಡದೆ ತೊಂದರೆ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಇಲಾಖೆಯ ಉಪನಿರ್ದೇಶಕ ವಾಲ್ಮೀಕಿ.ಬಿ.ವಾಯ್. ಭೇಟಿ ನೀಡಿದ ಸಂದರ್ಭದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಟ್ಯಾಂಕರ್ ಮೂಲಕ ನೀರು ಹಾಕಿಸುವಂತೆ ಸೂಚಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ. ಆದರೂ ವಾರ್ಡನ್ ಅಗತ್ಯಕ್ಕೆ ತಕ್ಕಂತೆ ನೀರನ್ನು ಹಾಕಿಸಿಲ್ಲ ಈ ಕುರಿತು ತನಿಖೆ ಮಾಡಬೇಕು.
ವಾರ್ಡನ್ ಅವರನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು.
ವಾರ್ಡನ್ ಬೇಕು ಎಂದು ಆಗ್ರಹ: ಪ್ರತಿಭಟನೆ ನಿರತ ವಿದ್ಯಾರ್ಥಿನಿಯರದು ವಾರ್ಡನ್ ಬೇಡ ಎನ್ನುವುದು ಒಂದು ಗುಂಪಾದರೆ. ನಮಗೂ ನೀರು ಬೇಕು. ಆದರೆ, ವಾರ್ಡನ್ ಸಹ ಇರಬೇಕು ಎನ್ನುವುದು ವಿದ್ಯಾರ್ಥಿನಿಯರ ಇನ್ನೊಂದು ಗುಂಪು ವಸತಿ ನಿಲಯದ ಬಾಗಿಲ ಬಳಿ ಕೂಳಿತುಕೊಂಡು ಪ್ರತಿಭಟನೆ ನಡೆಸಿ ಅವರೂ ಸಹ ಘೋಷಣೆಗಳನ್ನು ಕೂಗಿದ್ದು ಕಂಡುಬಂದಿತು. ಒಂದು ಹಂತದಲ್ಲಿ ವಾರ್ಡನ್ ಪರ ಮತ್ತು ವಿರೋಧ ಘೋಷಣೆಗಳು ಕಂಡುಬಂದವು.
ಇದೇ ಆವರಣದಲ್ಲಿರುವ ಒಟ್ಟು ನಾಲ್ಕು ವಿದ್ಯಾರ್ಥಿ ನಿಲಯಗಳಲ್ಲಿ ನೀರಿನ ಸಮಸ್ಯೆ ಇದೆ. ನೀರಿನ ಸಮಸ್ಯೆಯನ್ನು ದೂರ ಮಾಡುವುದಕ್ಕೆ ಟ್ಯಾಂಕರ್ ಮೂಲಕ ನೀರು ಹಾಕಿಸುವಂತೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ವಾರ್ಡನ್ ಅವರಿಗೆ ಸೂಚನೆ ನೀಡಿದ್ದರೂ ವಾರ್ಡನ್ ಮಾತ್ರ ನೀರನ್ನು ಟ್ಯಾಂಕರ್ ಮೂಲಕ ಹಾಕಿಸದೇ ವಿದ್ಯಾರ್ಥಿನಿಯರಿಗೆ ಯಾವುದಕ್ಕೂ ನೀರಿಲ್ಲದಂತೆ ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು.
ಮಗಳಿಂದಲೇ ತಾಯಿ ಹತ್ಯೆ- 13 ತಿಂಗಳ ಬಳಿಕ ಶವ ಸ್ಮಶಾನದಲ್ಲಿ ಪತ್ತೆ! ಕಾರಣ ಕೇಳಿದ್ರೆ ಶಾಕ್!
ಕೆಲ ವಿದ್ಯಾರ್ಥಿಗಳು ಪ್ರಾಕ್ಟಿಕಲ್ ಪರೀಕ್ಷೆಗೂ ಹೋಗದಂತೆ ಮುಖ್ಯದ್ವಾರಕ್ಕೆ ಬೀಗ ಹಾಕುವ ಮೂಲಕ ಕೆಲ ವಿದ್ಯಾರ್ಥಿನಿಯರು ಪರೀಕ್ಷೆಗೂ ಕೂಡುವುದಕ್ಕೆ ಅವಕಾಶ ಮಾಡಿಕೊಡದೆ ದರ್ಪ ತೋರಿದ್ದಾರೆ ಎಂದು ವಿದ್ಯಾರ್ಥಿನಿಯರು ಸಮಸ್ಯೆ ವಿವರಿಸಿದ್ದಾರೆ.