ಚಂದ್ರಯಾನಕ್ಕೆ ವಿಶಿಷ್ಟರೀತಿಯಲ್ಲಿ ಶುಭ ಹಾರೈಸಿದ ಮಕ್ಕಳು

By Kannadaprabha NewsFirst Published Jul 23, 2019, 10:23 AM IST
Highlights

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಕೈಗೊಂಡ ಚಂದ್ರಯಾನ-2 ಯೋಜನೆಗೆ ಶಿವಮೊಗ್ಗದ ವಿದ್ಯಾರ್ಥಿಗಳು ವಿಶಿಷ್ಟ ರೀತಿಯಲ್ಲಿ ಶುಭ ಕೂರಿದ್ದಾರೆ. ಉಪಗ್ರಹ ಮಾದರಿಯಲ್ಲಿ ನಿಂತು ಗಮನಸೆಳೆದ ವಿದ್ಯಾರ್ಥಿಗಳು ಯೋಜನೆ ಯಶಸ್ವಿಯಾಗಲಿ ಎಂದು ಹಾರೈಸಿದ್ರು.

ಶಿವಮೊಗ್ಗ(ಜು.23): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಕೈಗೊಂಡ ಚಂದ್ರಯಾನ-2 ಯೋಜನೆ ಯಶಸ್ವಿಯಾಗಲಿ ಎಂದು ನಗರದ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಸೋಮವಾರ ಉಪಗ್ರಹ ಮಾದರಿಯಲ್ಲಿ ನಿಂತು ವಿಶಿಷ್ಟರೀತಿಯಲ್ಲಿ ಶುಭ ಹಾರೈಸಿದರು.

ವಿನೋಬನಗರ ಕಲ್ಲಹಳ್ಳಿಯ ಪ್ರಿಯದರ್ಶಿನಿ ಶಾಲೆ ವಿದ್ಯಾರ್ಥಿಗಳು ಶಾಲೆ ಆವರಣದಲ್ಲಿ ಉಪಗ್ರಹ ಮಾದರಿಯಲ್ಲಿ ನಿಂತು ಗಮನ ಸೆಳೆದರು.

ಸಂಸ್ಥೆ ಕಾರ್ಯದರ್ಶಿ ಎನ್‌. ರಮೇಶ್‌ ಮಾತನಾಡಿ, ಇಸ್ರೋ ಕೈಗೊಂಡಿರುವ ಚಂದ್ರಯಾನ -2 ನೌಕೆ ಹೊತ್ತು ‘ಬಾಹುಬಲಿ’ ನಭಕ್ಕೆ ಚಿಮ್ಮಲಿದೆ. ಜು. 15 ರಂದು ನೌಕೆಯ ಉಡಾವಣೆಗೆ ಮಹೂರ್ತ ನಿಗದಿಯಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ ಮುಂದೂಡಲಾಗಿತ್ತು ಎಂದು ತಿಳಿಸಿದರು.

ಇಸ್ರೋ ಇತಿಹಾಸ: ಚಂದ್ರನೂರಿಗೆ ಹೊರಟ ಭಾರತದ 'ಬಾಹುಬಲಿ'!

ಉಡ್ಡಯನ ರಾಕೆಟ್‌ನ ತಾಂತ್ರಿಕ ದೋಷ ಸರಿಪಡಿಸಲಾಗಿದ್ದು, ಇಂದು ಉಡಾವಣೆಗೊಂಡಿರುವ ಚಂದ್ರಯಾನ-2 ಯಶಸ್ವಿಯಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರು, ಸಿಬ್ಬಂದಿ, ಪೋಷಕರು ಇದ್ದರು.

click me!