ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಉಚಿತ ದುಬೈ ಪ್ರವಾಸ : ಬಂಪರ್ ಆಫರ್

By Kannadaprabha NewsFirst Published Oct 18, 2020, 9:48 AM IST
Highlights

ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದುಬೈ ಪ್ರವಾಸದ ಅವಕಾಶ ಲಭ್ಯವಾಗಿದೆ. 

ಬೀದರ್‌ (ಅ.18): ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌)ಯಲ್ಲಿ ಉತ್ತಮ ಸಾಧನೆ ಮಾಡಿದ ಶಾಹೀನ್‌ ಪದವಿಪೂರ್ವ ವಿಜ್ಞಾನ ಕಾಲೇಜು ತನ್ನ ಇಬ್ಬರು ವಿದ್ಯಾರ್ಥಿಗಳಿಗೆ ಉಚಿತ ದುಬೈ ಟೂರ್‌ ಪ್ಯಾಕೇಜ್‌ ಪ್ರಕಟಿಸಿದೆ. 

ಪ್ರಸಕ್ತ ಸಾಲಿನ ನೀಟ್‌ನಲ್ಲಿ 9ನೇ ರಾರ‍ಯಂಕ್‌ ಪಡೆದ ಬೀದರ್‌ನ ಕಾರ್ತಿಕ ರೆಡ್ಡಿ, 85ನೇ ರಾರ‍ಯಂಕ್‌ ಗಳಿಸಿದ ಬಸವಕಲ್ಯಾಣದ ಎಂ.ಡಿ. ಅರ್ಬಾಜ್‌ ಅಹಮ್ಮದ್‌ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ದುಬೈ ಪ್ರವಾಸಕ್ಕೆ ಕಳುಸಲಾಗುವುದು ಎಂದು ಶಾಹೀನ್‌ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ಅಬ್ದುಲ್‌ ಖದೀರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

720ಕ್ಕೆ 720 ಅಂಕ ಪಡೆದರೂ ನೀಟ್ ನಲ್ಲಿ ಈಕೆಗೆ ಮೊದಲ ಸ್ಥಾನವಿಲ್ಲ!

ಕಾರ್ತಿಕ ರೆಡ್ಡಿ ನೀಟ್‌ನಲ್ಲಿ 720 ಅಂಕಗಳ ಪೈಕಿ 710 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಎಂಡಿ ಅರ್ಬಾಜ್‌ ಅಹಮ್ಮದ್‌ 700 ಅಂಕಗಳನ್ನು ಗಳಿಸಿದ್ದಾರೆ.

ಈ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದರಿಂದ ಉತ್ತಮ ಅವಕಾಶ ಒಂದು ವಿದ್ಯಾರ್ಥಿಗಳಿಗೆ ಒಲಿದು ಬಂದಿದೆ. 

click me!