ರಾಹುಲ್ ಚೌಗುಲೆ ಎಂಬ ವಿದ್ಯಾರ್ಥಿಯ 7ನೇ ವರ್ಗದ ಪ್ರಮಾಣ ಪತ್ರದಲ್ಲಿ ಮರಾಠಿ, ಕನ್ನಡ ಮಿಶ್ರಿತ ಭಾಷೆ ಬಳಸಲಾಗಿದೆ. ಅಲ್ಲದೆ, ಜತ್ತ ತಾಲೂಕಿನ ಬಿಳ್ಳೂರ ಗ್ರಾಮ ಕರ್ನಾಟಕಕ್ಕೆ ಸೇರಿದ್ದು ಎಂದು ಪ್ರಮಾಣ ಪತ್ರದಲ್ಲಿ ನಮೂದಿಸಲಾಗಿದೆ.
ಬೆಳಗಾವಿ(ಜೂ.17): ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಬಿಳ್ಳೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗೆ ನೀಡಿರುವ ವರ್ಗಾವಣೆ ಪ್ರಮಾಣ ಪತ್ರದಲ್ಲಿ ಮರಾಠಿ, ಕನ್ನಡ ಮಿಶ್ರಿತ ಭಾಷೆ ಬಳಸಲಾಗಿದ್ದು, ಬಿಳ್ಳೂರ ಗ್ರಾಮ ಕರ್ನಾಟಕದಲ್ಲಿದೆ ಎಂದು ನಮೂದಿಸಲಾಗಿದೆ. ಈ ವರ್ಗಾವಣೆ ಪತ್ರವೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ರಾಹುಲ್ ಚೌಗುಲೆ ಎಂಬ ವಿದ್ಯಾರ್ಥಿಯ 7ನೇ ವರ್ಗದ ಪ್ರಮಾಣ ಪತ್ರದಲ್ಲಿ ಮರಾಠಿ, ಕನ್ನಡ ಮಿಶ್ರಿತ ಭಾಷೆ ಬಳಸಲಾಗಿದೆ. ಅಲ್ಲದೆ, ಜತ್ತ ತಾಲೂಕಿನ ಬಿಳ್ಳೂರ ಗ್ರಾಮ ಕರ್ನಾಟಕಕ್ಕೆ ಸೇರಿದ್ದು ಎಂದು ಪ್ರಮಾಣ ಪತ್ರದಲ್ಲಿ ನಮೂದಿಸಲಾಗಿದೆ.
ಬೆಳಗಾವಿ: ನೀರಿಲ್ಲದೇ ಪಾತಾಳ ಕಂಡ ಹಿಡಕಲ್ ಅಣೆಕಟ್ಟು..!
ಜನ್ಮ ಸ್ಥಳ ಕಾಲಂನಲ್ಲಿ ಬಿಳ್ಳೂರ ಗ್ರಾಮ ಜತ್ತ ತಾಲೂಕೂ ಸಾಂಗ್ಲಿ ಜಿಲ್ಲೆ, ಕರ್ನಾಟಕ ರಾಜ್ಯ ಎಂದು ಉಲ್ಲೇಖಿಸಲಾಗಿದೆ. ಬಿಳ್ಳೂರ ಗ್ರಾಮ ಮಹಾರಾಷ್ಟ್ರಕ್ಕೆ ಸೇರಿದ್ದರೂ ಕೂಡ ಕರ್ನಾಟಕ ಎಂದು ನಮೂದಿಸಲಾಗಿದೆ. ಮೂಲಭೂತ ಸೌಲಭ್ಯಗಳ ಕೊರತೆ ಹಿನ್ನೆಲೆಯಲ್ಲಿ ಗಡಿಭಾಗದ ಕನ್ನಡ ಭಾಷಿಕರು ಕರ್ನಾಟಕಕ್ಕೆ ಹೋಗುತ್ತೇವೆ ಎಂದು ಈ ಹಿಂದೆ ಹೋರಾಟವನ್ನು ಕೈಗೊಂಡಿದ್ದರು.