ಪಿಯುಸಿ ಪರೀಕ್ಷೆಯಲ್ಲಿ ಪಡೆದದ್ದು 98 ಅಂಕ, ಅಂಕ​ಪ​ಟ್ಟಿ​ಯಲ್ಲಿ ಬಂದಿದ್ದು 20 ಅಂಕ!

By Kannadaprabha News  |  First Published Aug 6, 2020, 12:19 PM IST

ದ್ವಿತೀಯ ಪಿಯುಸಿ ಮಂಡಳಿಯ ಯಡವಟ್ಟು| ವಿದ್ಯಾರ್ಥಿಯೋರ್ವ ವಿಷಯವೊಂದರಲ್ಲಿ 98 ಅಂಕ ಗಳಿಸಿದ್ದರೂ, ಕಂಪ್ಯೂಟರ್‌ನಲ್ಲಿ 20 ಎಂದು ದಾಖಲು| ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹರೀಶ ಅವರನ್ನು ಸಂಪರ್ಕಿಸಿ ತನ್ನ ನೋವನ್ನು ತೋಡಿಕೊಂಡ ನಿರಾಶೆಗೊಂಡ ವಿದ್ಯಾರ್ಥಿ|


ಕೊಟ್ಟೂರು(ಆ.06): ದ್ವಿತೀಯ ಪಿಯುಸಿ ಮಂಡಳಿಯ ಯಡವಟ್ಟಿನಿಂದ ವಿದ್ಯಾರ್ಥಿಯೋರ್ವ ವಿಷಯವೊಂದರಲ್ಲಿ 98 ಅಂಕ ಗಳಿಸಿದ್ದರೂ, ಕಂಪ್ಯೂಟರ್‌ನಲ್ಲಿ 20 ಎಂದು ದಾಖಲಾಗಿದೆ. ಇದರಿಂದ ಆತನ ಅನುತ್ತೀರ್ಣನಾಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ದ್ವಿತೀಯ ಪಿಯು ವಿದ್ಯಾರ್ಥಿ ಆಕಾಶ ನಿಂಬಳಗೆರೆ ಕನ್ನಡದಲ್ಲಿ 97, ಇಂಗ್ಲಿಷ್‌ 41, ಇತಿಹಾಸ 95, ಅಕೌಂಟೆನ್ಸ್‌ 97, ಅರ್ಥಶಾಸ್ತ್ರ 96, ವ್ಯವಹಾರ ಅಧ್ಯಯನ ವಿಷಯದಲ್ಲಿ 20 ಅಂಕ ಬಂದಿವೆ. 

Latest Videos

undefined

ಬಳ್ಳಾರಿ: ಕೊರೋನಾ ಸೋಂಕಿತರ ಜತೆ ಜನ್ಮದಿನ ಆಚರಿಸಿಕೊಂಡ ವೈದ್ಯ!

ಆನ್‌ಲೈನ್‌ನಲ್ಲಿ ವ್ಯವಹಾರ ಅಧ್ಯಯನದ ಉತ್ತರ ಪತ್ರಿಕೆಯ ಪ್ರತಿ ಪಡೆದಾಗ 98 ಅಂಕ ಬಂದಿದೆ. ಆದರೆ ಕಂಪ್ಯೂಟರ್‌ನಲ್ಲಿ 20 ಅಂಕಗಳನ್ನು ದಾಖಲಿಸಿರುವುದು ಸ್ಪಷ್ಟವಾಗಿದೆ. ಈ 20 ಅಂಕಗಳ ಕಾರಣಕ್ಕಾಗಿಯೇ ವಿದ್ಯಾರ್ಥಿ ಆಕಾಶ ಫೇಲ್‌ ಎಂದು ಫಲಿ​ತಾಂಶ ಬಂದಿ​ದೆ.

ಇದರಿಂದ ನಿರಾಶೆಗೊಂಡ ವಿದ್ಯಾರ್ಥಿ ಆಕಾಶ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹರೀಶ ಅವರನ್ನು ಸಂಪರ್ಕಿಸಿ ತನ್ನ ನೋವನ್ನು ತೋಡಿಕೊಂಡಿದ್ದಾನೆ. ಕೂಡಲೇ ಹರೀಶ ಅವರು ವಿದ್ಯಾರ್ಥಿ ಆಕಾಶನಿಗೆ ಆನ್‌ಲೈನ್‌ನಲ್ಲಿ ಪಿಯುಸಿ ಮಂಡಳಿಯಿಂದ ಉತ್ತರ ಪತ್ರಿಕೆಯ ಪ್ರತಿಯನ್ನು ಪಡೆಯುವಂತೆ ಹೇಳಿದರು. ಈ ಪ್ರಕ್ರಿಯೆಗೆ ಮುಂದಾದ ಆಕಾಶ್‌ ಆನ್‌ಲೈನ್‌ನಲ್ಲಿ ಉತ್ತರ ಪತ್ರಿಕೆಯ ಪ್ರತಿ ನೋಡಿದಾಗ ಮೌಲ್ಯಮಾಪಕರು ವ್ಯವಹಾರ ಅಧ್ಯಯನ ವಿಷಯದಲ್ಲಿ 98 ಅಂಕ ನೀಡಿರುವುದು ಖಚಿತವಾಗಿದೆ. ಮೌಲ್ಯಮಾಪನ ಮಾಡಿದ ಪ್ರಾಧ್ಯಾಪಕರು 98ರ ಬದಲು 20 ಅಂಕಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿರುವುದು ಸ್ಪಷ್ಟವಾಗಿದೆ. ಈ 20 ಅಂಕಗಳ ಕಾರಣಕ್ಕಾಗಿಯೇ ವಿದ್ಯಾರ್ಥಿನ ಆಕಾಶ ಫೇಲ್‌ ಎಂದು ಫಲಿತಾಂಶ ಬಂದಿದೆ. 
 

click me!