ಪಿಯು ವಿದ್ಯಾರ್ಥಿ ಮಾಸ್ಟರ್ ಪ್ಲಾನ್ : ಫ್ಲಾಪ್ ಆಯ್ತು ಪರೀಕ್ಷೆ ಮುಂದೂಡುವ ಕ್ರಿಮಿನಲ್ ಐಡಿಯಾ

By Kannadaprabha News  |  First Published Mar 14, 2020, 1:11 PM IST

ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೋರ್ವನನ್ನು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 


ಬೆಂಗಳೂರು [ಮಾ.14]: ಪರೀಕ್ಷೆ ಓದಿಲ್ಲವೆಂದು ಫೇಲ್ ಆಗುವ ಆತಂಕದಿಂದ ವಿದ್ಯಾರ್ಥಿಯೋರ್ವ ಮಾಸ್ಟರ್ ಪ್ಲಾನ್ ಮಾಡಿ ಸಿಕ್ಕಿ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಪರೀಕ್ಷೆಯಲ್ಲಿ ಫೇಲ್ ಆಗುವ ಆತಂಕದಿಂದ ಪರೀಕ್ಷೆ ಮುಂದೂಡುವ ಉದ್ದೇಶದಿಂದ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾನೆ. 

Latest Videos

undefined

ಕಂಪ್ಯೂಟರ್ ಸೆನ್ಸ್ ವಿದ್ಯಾರ್ಥಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂದು ಪಿಯು ಬೋರ್ಡಿಗೆ ಕರೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಸುಳ್ಳು ಹೇಳಿದ್ದಾನೆ.  ಹೀಗೆ ಹೇಳಿ ಪರೀಕ್ಷೆ ಮುಂದೂಡಲು ಯತ್ನಿಸಿದ್ದಾನೆ. 

PUC ಪರೀಕ್ಷೆ: ಒಬ್ಬ ವಿದ್ಯಾರ್ಥಿನಿಗಾಗಿ 18 ಸಿಬ್ಬಂದಿ ಕರ್ತವ್ಯ ನಿರ್ವಹಣೆ!...

ತಕ್ಷಣವೆ ಪಿಯು ಬೋರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದು, ವಿದ್ಯಾರ್ಥಿಯನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಪೊಲೀಸರು ಆತನನ್ನು ಎಕ್ಸಾಂ ಸೆಂಟರ್ ಗೆ ಕರೆದೊಯ್ದಿದ್ದಾರೆ. 

ಆದರೆ  ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಪರೀಕ್ಷಾ ಮೇಲ್ವಿಚಾರಕರು ವಿದ್ಯಾರ್ಥಿಯನ್ನು ಡಿಬಾರ್ ಮಾಡಿ ಪರೀಕ್ಷೆಗೆ ಅವಕಾಶ ನಿರಾಕರಿಸಿದ್ದಾರೆ. 

 ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!