ರಾಯಚೂರಿಗೆ ಏಮ್ಸ್‌ ನೀಡದಿದ್ದರೆ ಪ್ರತ್ಯೇಕ ರಾಜ್ಯಕ್ಕೆ ಹೋರಾಟ: ಲಕ್ಷ್ಮಣ್‌ ದಸ್ತಿ ಎಚ್ಚರಿಕೆ

By Kannadaprabha NewsFirst Published Aug 6, 2023, 10:45 PM IST
Highlights

ಕೇಂದ್ರ ಸರ್ಕಾರ ಜಿಲ್ಲೆಯಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಸ್ಥಾಪಿಸಲೇಬೇಕು. ಇಲ್ಲವಾದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆಯನ್ನಿಟ್ಟು ಹೋರಾ​ಟ​ವನ್ನು ರೂಪಿ​ಸ​ಬೇ​ಕಾ​ಗು​ತ್ತದೆ ಎಂದು ಎಚ್ಚ​ರಿ​ಸಿ​ದ ಲಕ್ಷ್ಮಣ್‌ ದಸ್ತಿ. 

ರಾಯಚೂರು(ಆ.06):  ಜಿಲ್ಲೆಗೆ ಏಮ್ಸ್‌ ಮಂಜೂರು ಮಾಡ​ಬೇಕು ಎಂದು ಆಗ್ರ​ಹಿಸಿ ಏಮ್ಸ್‌ ಹೋರಾಟ ಸಮಿತಿ ನೇತೃ​ತ್ವ​ದಲ್ಲಿ ನಡೆ​ಯು​ತ್ತಿ​ರುವ ಐತಿ​ಹಾ​ಸಿಕ ಹೋರಾಟ ಶನಿ​ವಾರ 450ನೇ ದಿನ ಪೂರೈ​ಸಿತು.

ಸ್ಥಳೀ​ಯ ಜಿಲ್ಲಾ ಕ್ರೀಡಾಂಗಣದ ಆವ​ರ​ಣ​ದಲ್ಲಿ ನಡೆ​ಯು​ತ್ತಿ​ರುವ ನಿರಂತರ ಧರಣಿ ಸ್ಥಳ​ಕ್ಕೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಮುಖಂಡರು ಭೇಟಿ ನೀಡಿ ಹೋರಾ​ಟಕ್ಕೆ ಸಂಪೂರ್ಣ ಬೆಂಬಲ ಸೂಚಿ​ಸಿ​ದರು. ಈ ವೇಳೆ ಸಮಿತಿ ಅಧ್ಯಕ್ಷ ಲಕ್ಷ್ಮಣ್‌ ದಸ್ತಿ ಮಾತ​ನಾ​ಡಿ, ಕೇಂದ್ರ ಸರ್ಕಾರ ಜಿಲ್ಲೆಯಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಸ್ಥಾಪಿಸಲೇಬೇಕು. ಇಲ್ಲವಾದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆಯನ್ನಿಟ್ಟು ಹೋರಾ​ಟ​ವನ್ನು ರೂಪಿ​ಸ​ಬೇ​ಕಾ​ಗು​ತ್ತದೆ ಎಂದು ಎಚ್ಚ​ರಿ​ಸಿ​ದರು.

ಮುಸ್ಲಿಂ ವ್ಯಕ್ತಿ ಗ್ರಾಪಂ ಅಧ್ಯಕ್ಷ ಆಗಿದ್ದಕ್ಕೆ 15 ಜನ ಹಿಂದು ಗ್ರಾಪಂ ಸದಸ್ಯರು ರಾಜೀನಾಮೆ

ಕಳೆದ 450 ದಿನಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಇದು ಚರಿತ್ರೆಯಲ್ಲಿ ದಾಖಲಾರ್ಹ ಹೋರಾಟವಾಗಲಿದೆ. ಮುಖ್ಯಮಂತ್ರಿ ರಾಯಚೂರಿನಲ್ಲಿ ಏಮ್ಸ್‌ ಸ್ಥಾಪಿಸಬೇಕು ಎನ್ನುವ ಶಿಫಾರಸು ಪತ್ರವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದಾರೆ. ಆದರೆ ಇದುವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಪ್ರತಿಕ್ರಿಯೆ ದೊರೆತಿಲ್ಲ. ಕೂಡಲೇ ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸಬೇಕು. ಇದು ಕೇವಲ ರಾಯಚೂರು ಜಿಲ್ಲೆಯ ಬೇಡಿಕೆಯಲ್ಲ ಇಡೀ ಕಲ್ಯಾಣ ಕರ್ನಾಟಕದ ಬೇಡಿಕೆಯಾಗಿದೆ ಎಂದರು.

ಹೋರಾಟಗಾರ ಪ್ರೊ. ಆರ್‌.ಕೆ.ಹುಡುಗಿ ಮಾತನಾಡಿ, ಈ ಹೋರಾಟ ರಾಜ್ಯದಲ್ಲಿಯೇ ಇತಿಹಾಸ ನಿರ್ಮಿಸಿದೆ. ಬದ್ಧತೆ ಹಠ ಛಲದಿಂದ ಏಮ್ಸ್‌ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಅಖಂಡ ಕಲ್ಯಾಣ ಕರ್ನಾಟಕದ ಬೆಂಬಲವಿದೆ. ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು.

ದೇವದುರ್ಗ ತಾಲೂಕಿನ ಗಬ್ಬೂರಿನ ದಲಿತ ಸಂಘರ್ಷ ಸಮಿತಿ (ಭೀಮವಾದ) ಕಾರ್ಯಕರ್ತರು ಬೈಕ್‌ ರಾರ‍ಯಲಿ ಮೂಲಕ ಆಗಮಿಸಿ ಬೆಂಬಲ ಸೂಚಿಸಿದರು. ಅಧ್ಯಕ್ಷ ರಾಜಪ್ಪ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಯಾದಗಿರಿ ಜಿಲ್ಲೆಯ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ವೈಜನಾಥ ಪಾಟೀಲ್‌, ಏಮ್ಸ್‌ ಹೋರಾಟ ಸಮಿತಿ ಸಂಚಾಲಕರಾದ ಡಾ.ಬಸವರಾಜ ಕಳಸ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ್‌ ಕುಮಾರ್‌ ಜೈನ್‌, ಡಾ.ಎಸ್‌.ಎಸ್‌.ಪಾಟೀಲ್‌, ವೀರಭದ್ರಪ್ಪ ಅಂಬರಪೇಟೆ, ನರಸಪ್ಪ ಬಾಡಿಯಾಲ, ವೆಂಕಯ್ಯ ಶೆಟ್ಟಿಹೊಸಪೇಟೆ, ಎನ್‌.ಮಹಾವೀರ್‌, ಕಾಮರಾಜ್‌ ಪಾಟೀಲ್‌, ವೆಂಕಟರೆಡ್ಡಿ ದಿನ್ನಿ, ಪರಶುರಾಮ, ರುದ್ರಯ್ಯ ಗುಣಾರಿ ಸೇರಿ ಅನೇಕರು ಪಾಲ್ಗೊಂಡಿದ್ದರು.

click me!