ಕೊರಟಗೆರೆಯಲ್ಲಿ ತಮಗೆ ಪ್ರಬಲ ಎದುರಾಳಿ ಜೆಡಿಎಸ್. ಕಾಂಗ್ರೆಸ್‌ನ ಪರಮೇಶ್ವರ್ ಅಲ್ಲ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ, ನಿವೃತ್ತ ಐಎಎಸ್ ಅಧಿಕಾರಿ ಅನಿಲ್‌ಕುಮಾರ್ ತಿಳಿಸಿದರು.
ತುಮಕೂರು : ಕೊರಟಗೆರೆಯಲ್ಲಿ ತಮಗೆ ಪ್ರಬಲ ಎದುರಾಳಿ ಜೆಡಿಎಸ್. ಕಾಂಗ್ರೆಸ್‌ನ ಪರಮೇಶ್ವರ್ ಅಲ್ಲ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ, ನಿವೃತ್ತ ಐಎಎಸ್ ಅಧಿಕಾರಿ ಅನಿಲ್‌ಕುಮಾರ್ ತಿಳಿಸಿದರು.
ಅವರು ಕೊರಟಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪರಮೇಶ್ವರ್ ಲೆಕ್ಕಕ್ಕೆ ಇದ್ದಾರೆ ಆದರೆ ಪ್ರಬಲ ಎದುರಾಳಿ ಅಲ್ಲ. ಪರಮೇಶ್ವರ್‌ಗೆ ಪ್ರಬಲ ಸಮುದಾಯಗಳ ಬೆಂಬಲ ಇಲ್ಲ. ದಲ್ಲಿ ಸಮುದಾಯಗಳ ಪಾತ್ರ ಪ್ರಮುಖವಾಗಿರುತ್ತದೆ. ಕೊರಟಗೆರೆ ಕ್ಷೇತ್ರದಲ್ಲಿ ನಮ್ಮ ಸಮುದಾಯ ಅಂದರೆ ಮಾದಿಗ ಸಮುದಾಯ ಹಾಗೂ ಲಿಂಗಾಯಿತ ಸಮುದಾಯ ಹೆಚ್ಚಿದೆ. ಈ ಎರಡು ಪ್ರಬಲ ಸಮುದಾಯಗಳ ಬೆಂಬಲ ಬಿಜೆಪಿಗೆ ಇದೆ. 5 ರಿಂದ 6 ಸಾವಿರ ಮತಗಳಿರುವ ಸಣ್ಣ ಹೊಲೆಯ ಸಮುದಾಯದ ಬೆಂಬಲ ಕಾಂಗ್ರೆಸ್ಸಿಗಿದೆ.
ಗೆ ಪ್ರಬಲ ಸಮುದಾಯದ ಓಟ್ ಬೇಸ್ ಇದೆ. ಜೆಡಿಎಸ್‌ಗೆ ಒಕ್ಕಲಿಗ ಸಮುದಾಯದ ಓಟ್ ಬೇಸ್ ಇದೆ. ಆದರೆ ಕಾಂಗ್ರೆಸ್‌ಗೆ ತನ್ನದೇ ಆದ ಓಟ್ ಬೇಸ್ ಇಲ್ಲ. ಹಿಂದಿನ ಚುನಾವಣೆಗಳಲ್ಲಿ ಒಡೆದು ಆಳುವ ನೀತಿ ಹಾಗೂ ಹಣ, ತೋಳ್ಬಲದಿಂದ ಗೆದಿದ್ದಾರೆ. ಈ ಬಾರಿ ಹಾಗಿಲ್ಲ. ಹೀಗಾಗಿ ಡಾ. ಜಿ.ಪರಮೇಶ್ವರ್ ಹತಾಶರಾಗಿದ್ದಾರೆ. ಪರಮೇಶ್ವರ್ ಬೇರೆ ಕ್ಷೇತ್ರವನ್ನು ಹುಡುಕಿಕೊಳ್ಳುತ್ತಿದ್ದಾರೆ. ಇದು ಅವರ ಮನಸ್ಥಿತಿ ತೋರಿಸುತ್ತದೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿರುವ ಅಭ್ಯರ್ಥಿಗಳು ಎರಡೆರಡು ಕ್ಷೇತ್ರ ಕೇಳುತ್ತಿದ್ದಾರೆ. ಹಾಗಾಗಿ ನಾನು ಎರಡು ಕ್ಷೇತ್ರ ಕೇಳುತ್ತೇನೆ ಅಂತ ಮಾಧ್ಯಮದವರ ಮುಂದೆ ಜಿ.ಪರಮೇಶ್ವರ್ ಹೇಳಿದ್ದಾರೆ ಎಂದು ಅನಿಲ್‌ಕುಮಾರ್ ಹೇಳಿದರು.
ಬಹುಮತದೊಂದಿಗೆ ಸರ್ಕಾರ ರಚನೆ
ಯಲ್ಲಾಪುರ(ಏ.08): ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಧುರೀಣ ಕುಮಾರಸ್ವಾಮಿ ನ್ಝೇ=ತ್ವದಲ್ಲಿ ಚುನಾವಣೆಯ ಹೊಸ ಗಾಳಿ ಬೀಸತೊಡಗಿದ್ದು, ಈ ಚುನಾವಣೆಯಲ್ಲಿ ನಿಶ್ಚಿತವಾಗಿ ಜನತಾದಳ ಅತ್ಯಂತ ಭಲಿಷ್ಠ ಪಕ್ಷವಾಗಿ ಹೊರ ಹೊಮ್ಮಲಿದೆ. ಅಲ್ಲದೇ ವಿಪಕ್ಷಗಳ ನೆರವು ಪಡೆದು ಸರ್ಕಾರ ರಚಿಸುವ ಪರಿಸ್ಥಿತಿ ಬಾರದೇ ಸಂಪೂರ್ಣ ಬಹುಮತ ಪಡೆದು ನಮ್ಮದೇ ಸರ್ಕಾರ ರಚನೆಯಾಗುವುದು ಖಂಡಿತ ಎಂದು ಜೆಡಿಎಸ್ ರಾಜ್ಯ ವಕ್ತಾರ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಎಂ.ಬಿ. ಸದಾಶಿವ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಪಟ್ಟಣದಲ್ಲಿ ಹಮ್ಮಿಕೊಂಡ ಸದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂಚರತ್ನ ಯಾತ್ರೆಯಿಂದ ಜೆಡಿಎಸ್‌ಗೆ ಅಪಾರ ಜನಬೆಂಬಲ ವ್ಯಕ್ತವಾಗುತ್ತಿದ್ದು, ಅದು ಮತವಾಗಿ ಪರಿವರ್ತಿತವಾಗುವುದರಲ್ಲಿ ಯಾವ ಅನುಮಾನಗಳೂ ಇಲ್ಲ ಎಂದ ಅವರು, ಈ ನೆಲ- ಜಲದ ಅಸ್ಮಿತೆಯನ್ನು ಉಳಿಸಿಕೊಂಡು, ಪ್ರಾದೇಶಿಕ ಹಿನ್ನಲೆಯಲ್ಲಿ ಬಡವರ, ರೈತರ ಪರವಾದ ಸರ್ಕಾರ ರಚಿಸುತ್ತೇವೆ. ಪಕ್ಷದ ಹಳೆಯ ಕಾರ್ಯಕರ್ತರು, ಮತ್ತೆ ಮಂಚೂಣಿಯಲ್ಲಿ ಬರುತ್ತಿದ್ದು ಮಿಷನ್ 123 ಗುರಿ ತಲುಪಿಯೇ ತಲುಪುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
KARNATAKA ELECTION 2023: ಹೊಸ ಚುನಾವಣೆ, ಹಳೆಯ ಕಲಿಗಳ ಕಾಳಗ
ನಮ್ಮ ಸರ್ಕಾರ ಬಂದ ನಂತರದಲ್ಲಿ ರೈತರು ಕೃಷಿಯಲ್ಲಿ ಉನ್ನತಿ ಸಾಧಿಸಲು ನೆರವಾಗುವ ನಿಟ್ಟಿನಲ್ಲಿ ರೈತರಿಗೆ .10 ಸಾವಿರ ಆರ್ಥಿಕ ನೆರವು, ಮಹಿಳೆಯರ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮತ್ತಿತರ ಉಪಯುಕ್ತ ಯೋಜನೆಗಳನ್ನು ಜನರಿಗೆ ತಲುಪಿಸಲಿದೆ. ಇದು ರೈತರಿಗೆ ಉಚಿವಾಗಿರದೇ, ಉತ್ಪಾದಕತೆಗೆ ಪೂರಕವಾಗಿ ನೀರಾವರಿ, ರಸಗೊಬ್ಬರಕ್ಕೆ ಸಹಾಯಧನವಾಗಿದೆ ಎಂದರು. ಪಕ್ಷ ಸಂಘಟನೆಗಾಗಿ ಕುಮಾರಸ್ವಾಮಿ ಅವರು ಏಪ್ರಿಲ್ ಎರಡನೇ ವಾರ ಜಿಲ್ಲೆಗೆ ಆಗಮಿಸಿ ಜೋಯಿಡಾ, ದಾಂಡೇಲಿ, ಶಿರಸಿ, ಕುಮಟಾಗಳಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಉಚಿತ ನೆರವುಗಳಿಗೆ ಸಂಪನ್ಮೂಲ ಕ್ರೋಢೀಕರಣ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ರೈತರ ಸಾಲ ಮನ್ನಾಕ್ಕೆ .52 ಸಾವಿರ ಕೊಟಿ ಮನ್ನಾ ಮಾಡಿ ಯಶಸ್ವಿಯಾದಂತೆ ಇದನ್ನೂ ಮಾಡಲಾಗುವುದು. ಹಣದ ದುರ್ಬಳಕೆ ತಡೆದು, ಬೊಕ್ಕಸಕ್ಕೆ ನಷ್ಠವಾಗದಂತೆ ಸಂಪನ್ಮೂಲ ಕ್ರೋಢಿಕರಿಸಲು ವಿತ್ತ ಸಚಿವರಾಗಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ ಎಂದರು