ಹಾಸನ (ಆ.21): ಶಿಕ್ಷಕಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಂಡ ಘಟನೆ ಹಾಸನದಲ್ಲಿಂದು ನಡೆದಿದೆ.
ಹಾಸನ ತಾಲೂಕಿನ ಸೀಗೆ ಗ್ರಾಮದ ಬಳಿ ಘಟನೆ ನಡೆದಿದ್ದು, ಮುಖದ ಭಾಗಕ್ಕೆ ಕಚ್ಚಿ ಗಾಯಗೊಳಿಸಿವೆ.
ವೀರಾಪುರ ಗ್ರಾಮದ ಶಾಲೆ ಶಿಕ್ಷಕಿ ಶಂಕುತಲಾ ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಳಗ್ಗಿನ ಸಮಯ ಸೀಗೆ ಕೆರೆ ಏರಿ ಮೇಲೆ ನಡೆದುಕೊಂಡು ಹೋಗುವಾಗ ಧಿಡೀರ್ ದಾಳಿ ಮಾಡಿದ ಬೀದಿನಾಯಿಗಳು ಶಿಕ್ಷಕಿಯನ್ನು ಗಂಭೀರವಾಗಿ ಗಾಯಗೊಳಿಸಿವೆ.
ದಾವಣಗೆರೆ; ಅಂಗಳದಲ್ಲಿದ್ದ ಬಾಲಕಿ ಎಳೆದೊಯ್ದ ಬೀದಿ ನಾಯಿಗಳು
ನಾಯಿಗಳ ದಾಳಿಯಿಂದ ಮುಖದ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿದ್ದು ತಕ್ಷಣವೇ ಆಂಬುಲೆನ್ಸ್ ಮೂಲಕ ಅಸ್ಪತ್ರೆಗೆ ಕರೆದೊಯ್ಯಲಾಗಿದೆ.
ಗಾಯಾಳು ಶಿಕ್ಷಕಿಗೆ ಹಾಸನ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಹಿಮದೆಯೂ ಹಾಸನ ಹಾಗು ಚನ್ನಪಟ್ಟಣಗಳಲ್ಲಿ ಅತಿಯಾದ ಬಿದಿ ನಾಯಿಗಳ ಹಾವಳಿ ಬಗ್ಗೆ ಜನರು ಆತಂಕ ವ್ಯಕ್ತಪಡಿಸಿದ್ದು, ಅನೇಕ ದುರ್ಘಟನೆಗಳು ನಡೆದಿದ್ದವು.