* ಆನಂದ್ ಸಿಂಗ್ ವಿರುದ್ಧ ಅಸಮಾಧಾನ ಹೊರಹಾಕಿದ ಸೋಮಶೇಖರ್ ರೆಡ್ಡಿ
* ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನ ಶ್ರೀರಾಮುಲು ಅವರಿಗೇ ನೀಡಬೇಕು
* ಜನಾರ್ದನ ರೆಡ್ಡಿ ಕೆಲ ದಿನಗಳ ಕಾಲ ಸಾರ್ವಜನಿಕರಿಂದ ಅಂತರ ಕಾಯ್ದುಕೊಳ್ತಾರೆ
ಬಳ್ಳಾರಿ(ಆ.21): ಮಾಜಿ ಸಚಿವ ಬಳ್ಳಾರಿಗೆ ಬಂದಿದ್ದಾರೆ. ನಮಗೆ ಸಾಕಷ್ಟು ಸಂತೋಷವಾಗಿದೆ. ಮನೆಯಲ್ಲಿ ನಾವು ನಿನ್ನೆ ಜನಾರ್ದನ ರೆಡ್ಡಿ ಸೇರಿ ವರಮಹಾಲಕ್ಷ್ಮಿ ಹಬ್ಬವನ್ನ ಆಚರಣೆ ಮಾಡಿದ್ದೇವೆ. ಬಳ್ಳಾರಿ ನಮಗೆ ಜನ್ಮ ಕೊಟ್ಟ ಭೂಮಿ, ಈ ಭೂಮಿಯ ಮೇಲೆ ಆಪಾರ ಗೌರವ ಇದೆ. ರೆಡ್ಡಿ ಬಳ್ಳಾರಿಗೆ ಬಂದಿರುವುದು ವೈಯಕ್ತಿಕವಾಗಿ ನನಗೆ ಆನೆ ಬಲ ಬಂದಂತೆ ಆಗಿದೆ ಅಂತ ಬಿಜೆಪಿ ಶಾಸಕ ಹೇಳಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಕೆಲ ದಿನಗಳ ಕಾಲ ಸಾರ್ವಜನಿಕರಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ರೆಡ್ಡಿ ಮನೆಗೆ ಭೇಟಿ ನೀಡಿದ ಸಚಿವ ಬಿ.ಶ್ರೀರಾಮುಲು
ಬಳ್ಳಾರಿ ಜಿಲ್ಲಾ ಉಸ್ತುವಾರಿ ಹಂಚಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸೋಮಶೇಖರ್ ರೆಡ್ಡಿ, ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿದವರಿಗೆ ಉಸ್ತುವಾರಿ ನೀಡಿದ್ದಾರೆ. ಇದು ನಮ್ಮ ದುರ್ದೈವ. ಜಿಲ್ಲಾ ಉಸ್ತುವಾರಿ ಬದಲಾವಣೆ ಮಾಡಿ ಎಂದು ನಾನು ಸಾವಿರ ಬಾರಿ ಹೇಳಿರುವೆ. ಆದರೆ ಯಾರು ಈವರಗೆ ಮಾಡಿಲ್ಲ. ಮುಂದಿನ ಮೂರು ದಿನಗಳ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡುತ್ತೇನೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಸಚಿವ ಆನಂದ್ ಸಿಂಗ್ ವಿರುದ್ಧ ಅಸಮಾಧಾನವನ್ನ ಹೊರಹಾಕಿದ್ದಾರೆ.
ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನ ಅವರಿಗೇ ನೀಡಬೇಕು. ರಾಮುಲು ಅವರು ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಿ, ಮಂತ್ರಿಯಾಗಿದ್ದಾರೆ. ಇದು ರಾಮುಲು ಅವರ ಜನ್ಮಭೂಮಿ, ರಾಮುಲು ಅವರಿಗೆ ಜಿಲ್ಲಾ ಉಸ್ತುವಾರಿ ಅವರಿಗೇ ನೀಡಲೇಬೇಕು ಎಂದು ಸೋಮಶೇಖರ್ ರೆಡ್ಡಿ ಆಗ್ರಹಿಸಿದ್ದಾರೆ.