ಮಸೀದಿಯಲ್ಲಿ ಆಶ್ರಯ ಪಡೆದ ಅಪರಿಚಿತರು; ಕಳ್ಳರೆಂದು ಭಾವಿಸಿ ಮುತ್ತಿಗೆ ಹಾಕಿದ ಗ್ರಾಮಸ್ಥರು!

By Ravi Janekal  |  First Published Oct 24, 2022, 12:49 PM IST

ಹೊರಗಿನವರು ಬಂದು ಮಸೀದಿಯಲ್ಲಿ ಅಡಗಿ ಕುಳಿತಿದ್ದಾರೆ. ಗ್ರಾಮದಲ್ಲಿ ನಡೆಯಿತ್ತಿರುವ ಕಳ್ಳತನಗಳಿಗೆ ಇವರೇ ಕಾರಣ ಎಂದು ಶಂಕಿಸಿ ಗ್ರಾಮಸ್ಥರೆಲ್ಲಾ ಸೇರಿ ಮಸೀದಿಗೆ ಮುತ್ತಿಗೆ ಹಾಕಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. 


ಕಲಬುರಗಿ (ಅ. 24):- ಹೊರಗಿನವರು ಬಂದು ಮಸೀದಿಯಲ್ಲಿ ಅಡಗಿ ಕುಳಿತಿದ್ದಾರೆ. ಗ್ರಾಮದಲ್ಲಿ ನಡೆಯಿತ್ತಿರುವ ಕಳ್ಳತನಗಳಿಗೆ ಇವರೇ ಕಾರಣ ಎಂದು ಶಂಕಿಸಿ ಗ್ರಾಮಸ್ಥರೆಲ್ಲಾ ಸೇರಿ ಮಸೀದಿಗೆ ಮುತ್ತಿಗೆ ಹಾಕಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.  ಕಲಬುರಗಿ(Kalaburagi) ಜಿಲ್ಲೆಯ ಅಫಜಲಪೂರ(Afzalpur) ತಾಲೂಕಿನ ಆನೂರು(Anooru Village) ಗ್ರಾಮದಲ್ಲಿನ ಮಸೀದಿಗೆ ಆನೂರು ಗ್ರಾಮಸ್ಥರು ಮುತ್ತಿಗೆ ಹಾಕಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಕೆಲ ಸಮಯ ಭಾರಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. 

Bengaluru: ಮಕ್ಕಳ ಕಳ್ಳನೆಂದು ಭಾವಿಸಿ ಕಾರ್ಮಿಕನ ಬಡಿದು ಕೊಂದರು!

Tap to resize

Latest Videos

ಹಿನ್ನಲೆ:- ಆನೂರು ಗ್ರಾಮದ ಹೊರವಲಯದ ಮಸೀದಿಯಲ್ಲಿ ಗ್ರಾಮಸ್ಥರಲ್ಲದ ಹೊರಗಿನವರು ಬಂದು ಕಳೆದ ಒಂದು ವಾರದಿಂದ ಬಿಡಾರ ಹೂಡಿದ್ದಾರೆ. ಅವರು ಯಾರು ? ಎಲ್ಲಿಯವರು ? ಏಕೆ ಬಂದಿದ್ದಾರೆ ? ಏನು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಗ್ರಾಮಸ್ಥರಿಗೆ ಇರಲಿಲ್ಲ. ಇವರ ಬಗ್ಗೆ ಗ್ರಾಮಸ್ಥರಲ್ಲಿ ನಿಗೂಢ ಪ್ರಶ್ನೆ ಹುಟ್ಟಿಕೊಂಡಿತ್ತು. 

ಇನ್ನೊಂದೆಡೆ ಹೆಚ್ಚಿದ ಕಳ್ಳತನ :- ಇನ್ನೊಂದೆಡೆ ಇದೆ ಆನೂರು ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಮಸೀದಿಯೊಳಗೆ ವಾಸವಿರುವ ಹೊರಗಿನ ವ್ಯಕ್ತಿಗಳದ್ದೇ ಈ ಕೃತ್ಯ ಎನ್ನುವ ಅನುಮಾನ ಗ್ರಾಮಸ್ಥರಿಗೆ ಕಾಡಲಾರಂಭಿಸಿದೆ. ಅದಾಗ್ಯೂ ಮಸೀದಿಯೊಳಗೆ ವಾಸವಿರುವವರು ಯಾರು ? ಏಕೆ ಬಂದಿದ್ದಾರೆ ? ಎನ್ನುವ ಮಾಹಿತಿ ಪಡೆಯಲು ಯತ್ನಿಸಿದರೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ಮಸೀದಿಗೆ ಮುತ್ತಿಗೆ :- ಮಸೀದಿಯಲ್ಲಿ ವಾರದಿಂದ ಬಿಡಾರ ಹೂಡಿರೋದು ಕಳ್ಳರ ಗುಂಪು. ಇವರೇ ರಾತ್ರಿ ಕಳ್ಳತನ ಮಾಡುತ್ತಿದ್ದಾರೆ ಎನ್ನುವ ವದಂತಿ ಹಬ್ಬದ್ದೇ ತಡ ಗ್ರಾಮಸ್ಥರು ಗುಂಪು ಗುಂಪಾಗಿ ಬಂದು ಮಸೀದಿಗೆ ಮುತ್ತಿಗೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಒಳಗೆ ನುಗ್ಗಿ ಅವರನ್ನು ಹೊರಗೆ ಕರೆಸಿ ಅವರ ಗಂಟು ಮೂಟೆ, ಬ್ಯಾಗ್ ಗಳೆಲ್ಲವನ್ನೂ ಗ್ರಾಮಸ್ಥರು ಚೆಕ್ ಮಾಡಿದ್ದಾರೆ. 

ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮಸಿದಿಯಲ್ಲಿದ್ದ ಗ್ರಾಮಸ್ಥರಲ್ಲದ ಆರು ಜನರನ್ನು ವಿಚಾರಣೆಗಾಗಿ ಮತ್ತು ಭದ್ರತಾ ದೃಷ್ಡಿಯಿಂದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸರು ಬಂದು ಅವರನ್ನು ವಶಕ್ಕೆ ಪಡೆದ ನಂತರ  ಪರಿಸ್ಥಿತಿ ತಿಳಿಯಾಗಿದೆ. 

Maharashtra: ಮಕ್ಕಳ ಕಳ್ಳರೆಂದು ತಪ್ಪು ತಿಳಿದು 4 ಸಾಧುಗಳನ್ನು ಬರ್ಬರವಾಗಿ ಥಳಿಸಿದ ಗ್ರಾಮಸ್ಥರು

ಜಮಾತ್ ಗೆ ಬಂದಿದ್ದೇವೆ :- ನಾವು ಜಮಾತ್ ಗೆ ಬಂದಿದ್ದೇವೆ. ನಾವು ಕಳ್ಳರಲ್ಲ ಎಂದು ಮಸೀದಿಯಲ್ಲಿ ಆಶ್ರಯ ಪಡೆದವರು ವಾದಿಸಿದ್ದಾರೆ. ಇವರು ಯಾರು ? ಈ ಊರಿನ ಮಸೀದಿಯಲ್ಲೇಕೆ ಆಶ್ರಯ ಪಡೆದಿದ್ದಾರೆ. ಗ್ರಾಮದಲ್ಲಿ ನಡೆಯುತ್ತಿರುವ ಕಳ್ಳತನಗಳಿಗೂ ಇವರಿಗೂ ಸಂಬಂಧ ಇದೆಯಾ? ಎನ್ಬುವ ಪ್ರಶ್ನೆಗಳಿಗೆ ಪೊಲೀಸ್ ವಿಚಾರಣೆಯಿಂದ ಉತ್ತರ ಸಿಗಬೇಕಿದೆ. ಸದ್ಯ ಅವರೆಲ್ಲಾ ಅಫಜಲಪುರ ಪೊಲೀಸರ ವಶದಲ್ಲಿದ್ದು ವಿಚಾರಣೆ ನಡೆಯುತ್ತಿದೆ.

click me!