ಗಮನಿಸಿ, ಸದ್ಯಕ್ಕೆ ನಮ್ಮ ಮೆಟ್ರೋ ಆನ್‌ಲೈನ್‌ ರೀಜಾರ್ಜ್ ಮಾಡಬೇಡಿ.. ಯಾಕೆ ಅಂತೀರಾ?

By Web DeskFirst Published Aug 6, 2019, 9:05 PM IST
Highlights

ಹಿಂದೆ ಬೆಂಗಳೂರಿನ ನರನಾಡಿ ಎಂದರೆ ಬಿಎಂಟಿಸಿ ಎಂದು ಕರೆಯಲಾಗುತ್ತಿತ್ತು. ಈಗ ಬಿಎಂಟಿಸಿಯೊಂದಿಗೆ ನಮ್ಮ ಮೆಟ್ರೋವೂ ಸೇರಿಕೊಂಡಿದೆ. ಪ್ರತಿನಿತ್ಯ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಪ್ರಯಾಣಿಕರನ್ನು ಹೊತ್ತುಯ್ಯುವ ಸಾರ್ವಜನಿಕ ಸಾರಿಗೆ ಮಹಾನಗರದ ಹೆಮ್ಮೆ. ನಮ್ಮ ಮೆಟ್ರೋ ಪ್ರಯಾಣಿಕರೆ ಇಲ್ಲೊಂದು ಚೂರು ಗಮನಿಸಿ.. ಆನ್ ಲೈನ್ ಮೂಲಕ ನಮ್ಮ ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಲು ಹೋಗಬೇಡಿ.. ಯಾಕೆ ಅಂತೀರಾ ಮುಂದಕ್ಕೆ ಓದಿ...

ಬೆಂಗಳೂರು[ಆ. 06]   ತಾಂತ್ರಿಕ ದೋಷದಿಂದಾಗಿ ಆನ್ ಲೈನ್ ಮೂಲಕ‌ ಮೆಟ್ರೋ ಕಾರ್ಡ್ ರಿಚಾರ್ಜ್ ಆಗ್ತಿಲ್ಲ ಹಾಗಾಗಿ ಸದ್ಯಕ್ಕೆ ಆನ್ ಲೈನ್ ವ್ಯವಹಾರ ಬಂದ್ ಮಾಡುವುದು ಒಳಿತು.

ಈ ಬಗ್ಗೆ ಸ್ವತಾ ಬಿಎಂಆರ್‌ಸಿಎಲ್ ಪ್ರಕಟಣೆ ನೀಡಿದೆ. ಜು. 29, ಆ. 3 ಮತ್ತು 5 ರಂದು ರಿಚಾರ್ಜ್‌ಮಾಡಿದ 9 ಸಾವಿರಕ್ಕೂ ಹೆಚ್ಚು ಕಾರ್ಡ್ ಗಳು‌  ರೀಚಾರ್ಜ್ ಆಗಿಲ್ಲ. ಅಂತಹ ಕಾರ್ಡ್ ಹೊಂದಿರುವ ಪ್ರಯಾಣಿಕರಿಗೆ ಎಲ್ಲಾ ನಿಲ್ದಾಣಗಳಲ್ಲೂ ರಿಚಾರ್ಜ್ ವ್ಯವಸ್ಥೆ‌ ಮಾಡಲಾಗಿದೆ. ಆನಲೈನ್ ಮೂಲಕ ರಿಚಾರ್ಜ್ ವ್ಯವಸ್ಥೆ ಸರಿಪಡಿಸುವ ಕಾರ್ಯ ನಡೆಯುತ್ತಿದೆ.

ಹೊಸ ಯೋಜನೆ, ಮೆಟ್ರೋ, BMTC ಸ್ಮಾರ್ಟ್ ಕಾರ್ಡ್ ತಾಪತ್ರಯಕ್ಕೆ ಫುಲ್ ಸ್ಟಾಪ್

ಬಿಎಂಆರ್ ಸಿಎಲ್ ವೆಬ್ ಸೈಟ್ ಮೂಲಕ ರಿಚಾರ್ಜ್ ಮಾಡಬಾರದು ಎಂದು ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿರುವ ನಮ್ಮ ಮೆಟ್ರೋ ಮುಂದಿನ ಪ್ರಕಟಣೆವರೆಗೂ ಕಾಯಿರಿ ಎಂದು ತಿಳಿಸಿದೆ.

 

click me!