Kolar: ಶ್ರೀರಾಮ ಶೋಭಾಯಾತ್ರೆಯ ಮೇಲೆ ಕಲ್ಲು ತೂರಾಟ: ಬೈಕ್‌ಗೆ ಬೆಂಕಿ

By Girish Goudar  |  First Published Apr 9, 2022, 9:50 AM IST

*  ಕೋಲಾರ ಜಿಲ್ಲೆಯ ಮುಳಬಾಗಿಲು ನಗರದಲ್ಲಿ ನಡೆದ ಘಟನೆ 
*  ಶ್ರೀರಾಮನ ಪ್ರತಿಮೆ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು, 3 ಬೈಕ್‌ಗಳು ಅಗ್ನಿಗಾಹುತಿ
*  ಪೇಜಾವರ ಶ್ರೀಗಳಿಂದ ಪುಷ್ಪ ನಮನ
 


ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಮುಳಬಾಗಿಲು(ಏ.09):  ಅದು ಶ್ರೀರಾಮ ನವಮಿ ಅಂಗವಾಗಿ ಅದ್ದೂರಿಯಾಗಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮ, ಕಾರ್ಯಕ್ರಮದ ಮೊದಲ ದಿನವಾಗಿ ಶ್ರೀರಾಮನ ಶೋಭಾಯಾತ್ರೆ( Sri Rama Shobhayatre) ನಡೆಯುತ್ತಿತ್ತು, ಅದ್ದೂರಿಯಾಗಿ ನಡೆಯುತ್ತಿದ್ದ ಶೋಭಾಯಾತ್ರೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ(Stone Pelting) ಪರಿಣಾಮ ಆ ಊರಿನಲ್ಲಿ ಪ್ರಕೃಬ್ದ ವಾತಾವರಣ ನಿರ್ಮಾಣವಾಗಿದೆ. ಒಂದೆಡೆ ಅದ್ದೂರಿಯಾಗಿ ನಡೆಯುತ್ತಿರುವ ಶ್ರೀರಾಮನ ಶೋಭಾಯಾತ್ರೆಯಲ್ಲಿ ಭಾಗವಹಿಸಿರುವ ನೂರಾರು ಸಾವಿರಾರು ಹಿಂದೂ ಕಾರ್ಯಕರ್ತರು(Hindu Activists), ಮತ್ತೊಂದೆಡೆ ಶೋಭಾಯಾತ್ರೆಯಲ್ಲಿದ್ದ ಜನರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ, ಅಲ್ಲೇ ಹೊತ್ತಿ ಉರಿಯುತ್ತಿರುವ ಬೈಕ್​, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ, ಇವೆಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ(Kolar) ಜಿಲ್ಲೆ ಮುಳಬಾಗಿಲು(Mulabagilu) ಪಟ್ಟಣದಲ್ಲಿ. 

Latest Videos

undefined

Karnataka Politics:  'ಸ್ನಾನ ಮಾಡುವಾಗ ಮಾತ್ರ ಬಂದು ನೋಡಬೇಡಿ..ನನಗೆ ವಯಸ್ಸಾಗಿದೆ'

ಹೌದು, ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಲವಕುಶರ ಜನ್ಮಭೂಮಿ ಪುಣ್ಯಕ್ಷೇತ್ರ ಟ್ರಸ್ಟ್​ ವತಿಯಿಂದ ಶ್ರೀರಾಮನವಮಿ ಪ್ರಯುಕ್ತ ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಅದರ ಮೊದಲ ದಿನದ ಅಂಗವಾಗಿ ಶ್ರೀರಾಮನ ಶೋಭಾಯಾತ್ರೆ ಮುಳಬಾಗಿಲು ಪಟ್ಟಣದಲ್ಲಿ ನಡೆಯುತ್ತಿತ್ತು,ಶೋಭಾಯಾತ್ರೆ ಮುಳಬಾಗಿಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಿತ್ತು. ಶೋಭಾಯಾತ್ರೆ ಸಂಜೆ 6.45 ರ ಸುಮಾರಿಗೆ ಮುಳಬಾಗಿಲು ಪಟ್ಟಣದ ಜಹಂಗೀರ್​ ಸರ್ಕಲ್​ ಬಳಿ ಬರುತ್ತಿದ್ದಂತೆ ವಿದ್ಯತ್ ಸಂಪರ್ಕ ಕಡಿತವಾಗಿದೆ ರಸ್ತೆಯಲ್ಲಿ ಕತ್ತಲು ಆವರಿಸುತ್ತಿದ್ದ ಕೆಲವೇ ಕ್ಷಣಗಳಲ್ಲಿ ಶೋಭಾಯಾತ್ರೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ತಣ್ಣಗಿದ್ದ ವಾತಾವರಣ ನೋಡ ನೋಡುತ್ತಿದಂತೆ ಆತಂಕ ಸೃಷ್ಟಿಯಾಗಿತ್ತು ಶೋಭಾಯಾತ್ರೆಯಲ್ಲಿದ್ದವರು ಚೆಲ್ಲಾಪಿಲ್ಲಿಯಾಗಿ ಓಡಲು ಆರಂಭಿಸಿದರೆ,ಕೆಲವರು ಕಲ್ಲು ತೂರಾರಟ ನಡೆಸಿದವರ ಮೇಲೆ ಪ್ರತಿಯಾಗಿ ಕಲ್ಲುತೂರಲು ಆರಂಭಿಸಿದರು,ಈ ವೇಳೆ ಪರಿಸ್ಥಿತಿಯಲ್ಲಿ ನಿಯಂತ್ರಿಸಿಲು ಪೊಲೀಸರು(Police) ಅನಿವಾರ್ಯವಾಗಿ ಲಾಠಿ ಚಾರ್ಜ್​ ಮಾಡಬೇಕಾಯ್ತು.

ಇನ್ನು ಶೋಭಾಯಾತ್ರೆ ಸಾಗುತ್ತಿದ್ದ ರಸ್ತೆಯಲ್ಲಿ ವಿದ್ಯುತ್​ ಸಂಪರ್ಕ ಕಡಿತವಾಗಿದ್ದೇ ಮತ್ತೆ ವಿದ್ಯುತ್​ ಬರುವಷ್ಟರಲ್ಲಿ ಶಾಂತವಾಗಿದ್ದ ಶೋಭಾಯಾತ್ರೆಯಲ್ಲಿ ಪ್ರಕೃಬ್ದ ವಾತಾವರಣ ನಿರ್ಮಾಣವಾಗಿ ಹೋಗಿತ್ತು,ರಸ್ತೆ ಬಳಿ ಇದ್ದ ಜನರೆಲ್ಲಾ ಅಂಗಡಿಗಳನ್ನು ಬಂದ್​ ಮಾಡಿದರೆ,ಕೆಲವು ಕಿಡಿಗೇಡಿಗಳು ರಸ್ತೆ ಬಳಿ ಇದ್ದ ಬೈಕ್​ವೊಂದಕ್ಕೆ ಬೆಂಕಿ ಹಚ್ಚಿದ್ದರು,ರಸ್ತೆ ಬದಿ ಇದ್ದ ಕೆಲವು ಕಾರ್​ಗಳ ಮೇಲೆ ಪೊಲೀಸರ ವಾಹನಗಳ ಮೇಲೂ ಕಲ್ಲು ತೂರಾಟ ಮಾಡಿದ್ದರು,ಕ್ಷಣದಲ್ಲಿ ಎರಡು ಕೋಮಿನ ಜನರ ನಡುವೆ ಸಂಘರ್ಷಕ್ಕೆ ದಾರಿ ಮಾಡುವ ಸಾಧ್ಯತೆ ಇತ್ತು,ಆದರೆ ಪರಿಸ್ಥಿತಿಯನ್ನು ನಿಯಂತ್ರಿಸಿದ ಪೊಲೀಸರು ಜನರನ್ನು ಚದುರಿಸಿದರು, ಶೋಭಾಯಾತ್ರೆ ಹಿನ್ನೆಲೆ ಆಗಾಗಲೇ ಹೆಚ್ಚಿನ ಪೊಲೀಸ್​ ಬಂದೋಬಸ್ತ್​ ಮಾಡಿದ್ದ ಪರಿಣಾಮ ಪರಿಸ್ಥಿತಿಯನ್ನು ತಹಬದಿಗೆ ತಂದರು, ಸ್ಥಳಕ್ಕೆ ಬಂದ ಹಿರಿಯ ಪೊಲೀಸ್​ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿ ಶೋಭಾಯಾತ್ರೆಯನ್ನು ಮುಂದುವರೆಯಲು ಅನುವು ಮಾಡಿಕೊಟ್ಟರು.

ಮುಳಬಾಗಿಲು ತಾಲ್ಲೂಕು ಆವನಿ ಗ್ರಾಮಕ್ಕೆ ತಲುಪ ಬೇಗಿದ್ದ ಶೋಭಾಯಾತ್ರೆ ತಲುಪಿದೆ.ಆದ್ರೆ ಮುಳಬಾಗಿಲು ಪಟ್ಟಣದಲ್ಲಿ ಬೂದಿಮುಚ್ಚಿದ ಕೆಂಡದಂತಿದೆ. ಸ್ಥಳಕ್ಕೆ ಎಸ್ಪಿ ದೇವರಾಜ್​, ಐಜಿಪಿ ಚಂದ್ರಶೇಖರ್​ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಎರಡು ದಿನಗಳ ಕಾಲ ಮುಳಬಾಗಿಲು ಪಟ್ಟಣದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್ ಮಾಡಲಾಗಿದೆ. ಜೊತೆಗೆ ಘಟನೆ ಸಂಬಂಧ ಐದು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಮುಳಬಾಗಿಲು ತಾಲೂಕಿನಾದ್ಯಂತ ಖಾಕಿ ಕಣ್ಗಾಗಲು ಬಹಳಷ್ಟು ಆಕ್ಟಿವ್ ಆಗಿದ್ದು,ಅಹಿತಕರ ಘಟನೆ ನಡೆಯಂತೆ ಕ್ರಮ ವಹಿಸಿದ್ದಾರೆ. ಸ್ಥಳದಲ್ಲಿ ಐಜಿಪಿ ಚಂದ್ರಶೇಖರ್, ಎಸ್ಪಿ ದೇವರಾಜ್,6 ಡಿಎಆರ್,  2 ಕೆಎಸ್ ಆರ್ ಪಿ  6 ಪಿಐ, 2 ಡಿಎಸ್ ಪಿ ಸೇರಿದಂತೆ 500 ಜನ ಪೊಲೀಸರನ್ನು ಬಂದೋಬಸ್ತ್ ಗೆ ಬಳಸಿಕೊಳ್ಳಲಾಗಿದೆ.

ಇನ್ನು ಘಟನಾ ಸ್ಥಳಕ್ಕೆ ಮಧ್ಯರಾತ್ರಿ 1.30 ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಸ್ಥಳ ಪರಿಶೀಲನೆ ನಡೆಸಿ ಎಸ್ಪಿ ದೇವರಾಜ್ ಬಳಿ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಐಜಿಪಿ ಚಂದ್ರಶೇಖರ್,ಶೋಭಾ ಯಾತ್ರೆ ತೆರಳುವ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಸಧ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಪೊಲೀಸ್ ಬಂದೋಬಸ್ತ್ ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗಿದೆ. ಕಲ್ಲು ತೂರಾಟದ ವೇಳೆ ಕರೆಂಟ್ ಸಹ ಹೋಗಿದೆ, ಆದ್ರೆ ಅದೇ ಸಮಯದಲ್ಲಿ ಏಕೆ ಹೋಯ್ತು ಎಂದು ಪರಿಶೀಲನೆ ನಡೆಸುತ್ತಿದ್ದೇವೆ. ಬೆಸ್ಕಾಂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ತಿದ್ದೇವೆ ಎಲ್ಲವೂ ತನಿಖೆ ಹಂತದಲ್ಲಿರೋದ್ರಿಂದ ಹೆಚ್ಚುವರಿಯಾಗಿ ಏನೂ ಪ್ರತಿಕ್ರಿಯೆ ನೀಡೋದಿಲ್ಲ ಎಂದು ತಿಳಿಸಿದ್ರು.

Kolar: ಯುವಕನ ಬದುಕನ್ನೇ ಬದಲಾಯಿಸಿದ ಕೊರೋನಾ: ಛಲವೊಂದಿದ್ರೆ ಯಾವುದು ಅಸಾಧ್ಯವಲ್ಲ..!

ಇನ್ನು ಕಲ್ಲು ತೂರಾಟ ಪರಿಣಾಮ ಮೂರು ಕಾರುಗಳ ಗಾಜು ಪುಡಿ ಪುಡಿ ಆಗಿದೆ, ಒಂದು ಬೊಲೆರೋ ಪಿಕಪ್ ಜಖಂ ಆಗಿದೆ, ಒಂದು ಡಿಯೋ ವಾಹನ ಕಿಡಿಗೇಡಿಗಳಿಂದ ಸುಟ್ಟು ಕರುಕಲಾಗಿದ್ದು,ನಗರದ ಸೋಮೇಶ್ವರ ಪಾಳ್ಯದ ವೃತ್ತದಲ್ಲಿ ಇರುವ ಆಟೋಮೊಬೈಲ್ ಕಾಂಪ್ಲೆಕ್ಸ್ ಮೇಲು ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ.

ಇನ್ನು ಶೋಭಾ ಯಾತ್ರೆಯ ಮೇಲೆ ಕಲ್ಲು ತೂರಾಟ ನಡೆಸಿರುವ ಕುರಿತು ಸಾಕಷ್ಟು ಅನುಮಾನಗಳಿಗೆ.ವಿದ್ಯುತ್ ಬಂದ್ ಮಾಡಿ ಕಲ್ಲು ತುರಾಟಕ್ಕೆ ನಡೆಸಿದ್ರಾ ಕಿಡಿಗೇಡಿಗಳು ? ಅನ್ನೋ ಅನುಮಾನ ಕಾಡ್ತಿದ್ದು,ಘಟನಾ ಸ್ಥಳಕ್ಕೆ ತೆರಳುವ ಕೆಲಕಾಲ ಮುಂದೇಯಷ್ಟೇ ವಿದ್ಯುತ್ ಸಂಪರ್ಕ ಕಟ್ ಮಾಡಲಾಗಿದ್ದು,ಯಾರಿಗೂ ಗೊತ್ತಾಗಬಾರದು ಎಂದು ಕರೆಂಟ್ ಕಟ್ ಮಾಡಿದ್ದಾರೆ ಅನ್ನೋ ಅನುಮಾನದ ಮೇಲೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.ಹೆಚ್ಚು ಪೊಲೀಸ್ ಬಂದೋಬಸ್ತ್ ಇದ್ರು ಸಹ ಕ್ಯಾರೆ ಅನ್ನದೆ ಏಕಾಏಕಿ ಕಲ್ಲು ತೂರಾಟಕ್ಕೆ ಏಕೆ ಅವಕಾಶವಾಯ್ತು ಅಂತ ಐಜಿಪಿ ಚಂದ್ರಶೇಖರ್ ಪ್ರಶ್ನೆ ಹಾಕಿದ್ದಾರೆ.

ಇನ್ನು ಕಲ್ಲು ತೂರಾಟದ ವೇಳೆ ಸ್ಥಳದಲ್ಲೇ ಇದ್ದ ಪ್ರತ್ಯಕ್ಷದರ್ಶಿ ಹೇಳುವ ಪ್ರಕಾರ,ಶೋಭಾ ಯಾತ್ರೆ ಸಾಗುವ ವೇಳೆ ಏಕಾಏಕಿ ವಿದ್ಯುತ್ ಕಟ್ ಆಯ್ತು.ನೋಡು ನೋಡುತ್ತಿದ್ದಂತೆ ಕಲ್ಲು ತೂರಾಟ ನಡೆಸಿದ್ರು.ನಮಗೆ ಏನಾಗ್ತಿದೆ ಅಂತ ತುಂಬಾ ಆತಂಕ ಆಯ್ತು.

25 ವರ್ಷಗಳ ಹಿಂದೆ ನಾವು ಈ ರೀತಿ ಘಟನೆ ಮುಳಬಾಗಿಲು ತಾಲೂಕಿನಲ್ಲಿ ನೋಡಿದ್ವಿ.ಹೆಚ್ಚು ಜನ ಪೊಲೀಸರು ಇದ್ರು ಸಹ ಕಲ್ಲು ತೂರಾಟ ನಡೀತು.ಈ ವೇಳೆ ಒಂದು ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚೋದಕ್ಕೆ ಪ್ರಯತ್ನ ನಡೀತು.ಆದ್ರೆ ಪೊಲೀಸರ ಲಾಠಿ ಚಾರ್ಜ್ ನಿಂದ ಗುಂಪು ಚದುರಿ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ವಿವರಿಸಿದ್ರು.

ಸದ್ಯ ಕೋಲಾರ ಜಿಲ್ಲೆ ಮುಳಬಾಗಿಲು ನಗರದಲ್ಲಿ ಮೂರು ದಿನಗಳ ಕಾಲ ನಿಷೇದಾಜ್ಞೆ ಜಾರಿ ಮಾಡಲಾಗಿದ್ದು,ಮೂರು ದಿನಗಳ ಕಾಲ‌ 144 ಸೆಕ್ಷನ್ ಜಾರಿ ಮಾಡಲಾಗಿದೆ. ಶ್ರೀರಾಮನವಮಿ ಹಬ್ಬದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ಮಧ್ಯರಾತ್ರಿ 1.30 ರಿಂದ ಕೋಲಾರದಲ್ಲೇ ಐಜಿಪಿ ಚಂದ್ರಶೇಖರ್ ಮೊಕ್ಕಾಂ ಹೂಡಿ ಕ್ಷಣ ಕ್ಷಣದ ಮಾಹಿತಿ ಪಡೆದುಕೊಳ್ತಿದ್ದಾರೆ.

ಒಟ್ಟಾರೆ ಶ್ರೀರಾಮ ನವಮಿ ಅಂಗವಾಗಿ ಅದ್ದೂರಿಯಾಗಿ ನಡೆಯಬೇಕಿದ್ದ ಶೋಭಾಯಾತ್ರೆ ಸಂಘರ್ಷದ ಯಾತ್ರೆಯಾಗಿ ಪರಿಣಮಿಸಿದ್ದು,ಸದ್ಯ ಮುಳಬಾಗಿಲು ಪಟ್ಟಣದಲ್ಲಿ ಹಾಗೂ ಕೋಲಾರ ಜಿಲ್ಲೆಯಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ, ಇಲ್ಲಿ ಶುರುವಾದ ಸಂಘರ್ಷ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದೆ ಸದ್ಯದ ಕುತೂಹಲವಾಗಿದೆ.

click me!