ರಾಜ್ಯಾದ್ಯಂತ ಸಾಕ್ಷರತಾ ಅಭಿಯಾನಕ್ಕೆ ಚಾಲನೆ

By Kannadaprabha News  |  First Published Mar 11, 2024, 11:11 AM IST

ಬೆಂಗಳೂರು ರೀರೈಟ್ ಲೈಫ್ ಸಂಸ್ಥೆ ಮತ್ತು ಬ್ಲಿಸ್ ಇಂಡಿಯಾ ಸೊಸೈಟಿಯ ಜೊತೆಗೂಡಿ ಪ್ರಸಕ್ತ ಸಾಲಿಗೆ ಕರ್ನಾಟಕದಾದ್ಯಂತ ಸಾಕ್ಷರತಾ ಅಭಿಯಾನ ಆರಂಭಿಸಿರುವುದಾಗಿ ಸಾಕ್ಷರತಾ ಅಭಿಯಾನದ ಮುಖ್ಯಸ್ಥ, ಪಾವಗಡದ ಜೋಸೆಫ್‌ ತಿಳಿಸಿದ್ದಾರೆ.

Statewide literacy drive launched snr

ಪಾವಗಡ: ಬೆಂಗಳೂರು ರೀರೈಟ್ ಲೈಫ್ ಸಂಸ್ಥೆ ಮತ್ತು ಬ್ಲಿಸ್ ಇಂಡಿಯಾ ಸೊಸೈಟಿಯ ಜೊತೆಗೂಡಿ ಪ್ರಸಕ್ತ ಸಾಲಿಗೆ ಕರ್ನಾಟಕದಾದ್ಯಂತ ಸಾಕ್ಷರತಾ ಅಭಿಯಾನ ಆರಂಭಿಸಿರುವುದಾಗಿ ದ ಮುಖ್ಯಸ್ಥ, ಪಾವಗಡದ ಜೋಸೆಫ್‌ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಜೋಸೆಫ್, ರಾಜ್ಯಾದ್ಯಂತ ಪ್ರಮಾಣ ಹೆಚ್ಚುಸಲು ಇತ್ತೀಚೆಗೆ ಬೆಂಗಳೂರಿನ ಸೆಂಟ್ ಥಾಮಸ್ ಕೇಂದ್ರದಲ್ಲಿ ಅಧ್ಯಾಪಕರ ತರಬೇತಿಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದರು.

Tap to resize

Latest Videos

ಅಧ್ಯಕ್ಷ ಪ್ರಸನ್ನ ಉದ್ಘಾಟನೆ ನಿರ್ವಹಿಸಿ, ಪ್ರಪಂಚದ ಶ್ರೀಮಂತರ ಹೆಸರನ್ನು ನಾವು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಆದರೆ ನಮಗೆ ಅಕ್ಷರ ಕಲಿಸಿದ ಗುರುಗಳನ್ನು ನಾವೆಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು. ಮುಖ್ಯ ತರಬೇತಿ ಸಿಬ್ಬಂದಿ ಜಯಪಾಲ್ ರೆಡ್ಡಿ, ಮುಖಂಡರಾದ ಸಜೀವ್, ಅಂಜಿನಪ್ಪ, ಶಂಕರಪ್ಪ, ಸುರೇಶ್ ರೋಷನ್, ಎಲಿಜಬತ್, ಅನ್ನಮ್ಮ ಮೊದಲಾದವರು ಭಾಗವಹಿಸಿದ್ದರು.

ಸಾಕ್ಷರತಾ ಅಭಿಯಾನ

ಕಲಬುರಗಿ (ಮಾ.09): ಪ್ರಸಕ್ತ 2024-25ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದಾದ್ಯಂತ 500 ಕರ್ನಾಟಕ ಪಬ್ಲಿಕ್ ಆರಂಭಿಸಲು ಘೋಷಿಸಿದ್ದು, ಇದರಲ್ಲಿ 137 ಶಾಲೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರಂಭವಾಗಲಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು. ಇಲ್ಲಿನ ಕೆ.ಕೆ.ಆರ್.ಟಿ.ಬಿ. ಸಭಾಂಗಣದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿ 297 ಕೆಪಿಎಸ್ ಶಾಲೆ ಇದ್ದು, ಇದರ ಜೊತೆಗೆ ಈ ವರ್ಷ 500 ಶಾಲೆ ಆರಂಭಿಸಲಾಗುವುದು ಎಂದರು.

ದ್ವಿಭಾಷಾ ಬೋಧನೆ, ವಿಷಯ ಶಿಕ್ಷಕರ ಜೊತೆಗೆ ದೈಹಿಕ, ಸಂಗೀತ ಶಿಕ್ಷಕರು, ಉತ್ತಮ ಮೂಲಸೌಕರ್ಯ, ಶಾಲಾ ಮೈದಾನ ಪರಿಕಲ್ಪನೆ ಒಳಗೊಂಡಿರುವ ಕೆ.ಪಿ.ಎಸ್. ಶಾಲೆಗೆ ಬೇಡಿಕೆ ಹೆಚ್ಚಿರುವ ಕಾರಣ ಮುಂದಿನ 3 ವರ್ಷದಲ್ಲಿ ಎರಡು ಗ್ರಾಮ ಪಂಚಾಯತಿಗಳಿಗೆ ತಲಾ ಒಂದರಂತೆ 3,000 ಕೆಪಿಎಸ್ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ. ದ್ವಿಭಾಷಾ ಬೋಧನೆಯಲ್ಲಿ ಮಕ್ಕಳು, ಪಾಲಕರಿಗೆ ಅವರ ಆಯ್ಕೆಯ ಭಾಷೆಯಲ್ಲಿಯೆ ಶಿಕ್ಷಣ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ಲೋಕಸಭೆ ಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲ್ಲ: ಎಂಟಿಬಿ ನಾಗರಾಜ್ ಸ್ಪಷ್ಟನೆ

ರಾಜ್ಯದ್ಯಾಂತ ಇರುವ ಆದರ್ಶ ವಿದ್ಯಾಲಯದಲ್ಲಿ 11 ಮತ್ತು 12ನೇ ತರಗತಿ ಬೋಧನೆಗೆ ಈಗಾಗಲೆ ಆದೇಶ ಹೊರಡಿಸಿದೆ. ಗೃಹ ಜ್ಯೋತಿ ಯೋಜನೆಯಡಿ ಕಳೆದ ನವೆಂಬರ್ 1 ರಿಂದ ಶಾಲೆಗಳಿಗೆ ಉಚಿತ ವಿದ್ಯುತ್ ಘೋಷಣೆ ಪರಿಣಾಮ ಸ್ಮಾರ್ಟ್ ಕ್ಲಾಸ್ ನಡೆಯುತ್ತಿದ್ದು, ಗಣಕಯಂತ್ರಗಳು ಮಕ್ಕಳ ಉಪಯೋಗಕ್ಕೆ ಬಂದಿವೆ. ಇದಲ್ಲದೆ ಶಾಲೆಗಳಲ್ಲಿ ನಿರ್ವಹಣಾ ವೆಚ್ಚ 20 ರಿಂದ 40 ಸಾವಿರ ರೂ. ಗಳಿಗೆ ಅನುದಾನ ಹೆಚ್ಚಿಸಿದೆ ಎಂದರು.

20 ಸಾವಿರ ಶಿಕ್ಷಕರಿಗೆ ತರಬೇತಿ: ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಸುಧಾರಣೆ, ಮಕ್ಕಳು ಸರ್ವಾಂಗೀಣ ವಿಕಸನ ಹೊಂದಬೇಕೆಂಬುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಅಜೀಂ ಪ್ರೇಮಜಿ ಫೌಂಡೇಷನ್ ಮತ್ತು ಟೋಯೋಟಾ ಸಂಸ್ಥೆಗಳು ತಮ್ಮ ಸಿಎಸ್ಆರ್‌ ನಿಧಿಯಡಿ ಬರುವ ಮೇ ಮಾಹೆಯಿಂದ ಮುಂದಿನ ಮಾರ್ಚ್ ವರೆಗೆ ರಾಜ್ಯದ 20 ಸಾವಿರ ಶಿಕ್ಷಕರಿಗೆ ವೃತ್ತಿ, ಬೋಧನ ಕೌಶಲ್ಯ ಹೆಚ್ಚಿಸುವ ತರಬೇತಿ ನೀಡಲಿದೆ ಎಂದರು.

vuukle one pixel image
click me!
vuukle one pixel image vuukle one pixel image