ನೇಜಾರು ಕಗ್ಗೊಲೆ ಆರೋಪಿಗೆ ಗಲ್ಲುಶಿಕ್ಷೆಯೇ ಆಗಬೇಕು: ಅಬ್ದುಲ್ ಅಜೀಂ

By Govindaraj S  |  First Published Nov 29, 2023, 12:57 PM IST

ಇಡೀ ಕುಟುಂಬ ಸದಸ್ಯರನ್ನೇ ಕಳೆದುಕೊಂಡು ಜರ್ಝರಿತಗೊಂಡಿರುವ ನೇಜಾರು ನಾಲ್ವರ ಕೊಲೆ ನಡೆದ ಮನೆ ಯಜಮಾನ ನೂರ್ ಮುಹಮ್ಮದ್ ಮನೆಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಭೇಟಿ ನೀಡಿದರು. 


ಉಡುಪಿ (ನ.29): ಇಡೀ ಕುಟುಂಬ ಸದಸ್ಯರನ್ನೇ ಕಳೆದುಕೊಂಡು ಜರ್ಝರಿತಗೊಂಡಿರುವ ನೇಜಾರು ನಾಲ್ವರ ಕೊಲೆ ನಡೆದ ಮನೆ ಯಜಮಾನ ನೂರ್ ಮುಹಮ್ಮದ್ ಮನೆಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಭೇಟಿ ನೀಡಿದರು. ಅಬ್ದುಲ್ ಅಝೀಮ್ ಕೆಲಹೊತ್ತು ನೂರ್ ಮುಹಮ್ಮದ್ ಜೊತೆ ಮಾತನಾಡಿ ಸಾಂತ್ವಾನ ಹೇಳಿದರು. ಅಗಲಿದ ತಮ್ಮ ಪತ್ನಿ ಮಕ್ಕಳನ್ನು  ನೆನೆದು  ನೂರ್ ಮುಹಮ್ಮದ್ ಕುಸಿದು ಬಿದ್ದ ಪ್ರಸಂಗ ನಡೆಯಿತು.ಈ ವೇಳೆ ಸ್ಥಳದಲ್ಲಿದ್ದವರು ಅವರನ್ನು ಉಪಚರಿಸಿ ಸಮಾಧಾನಪಡಿಸರು.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ,ಪ್ರಕರಣದಿಂದ ನೂರ್ ಮುಹಮ್ಮದ್ ಬಹಳಷ್ಟು ನೊಂದಿದ್ದಾರೆ. ಅವರಿಗೆ ಶೀಘ್ರ ನ್ಯಾಯ ಸಿಗುವಂತಾಗಲು ಈ ಕೊಲೆ  ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯದ  ಸ್ಥಾಪನೆಗೆ ಸರಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ.  ನೂರ್ ಮುಹಮ್ಮದ್ ರ ಮಗನಿಗೆ ಪೊಲೀಸ್ ಹುದ್ದೆ ನೀಡುವಂತೆ ಸಿಎಂಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು. ಈ ತಿಂಗಳ ಪ್ರಾರಂಭದಲ್ಲಿ ಉಡುಪಿ ಸಮೀಪದ ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ನಡೆದಿತ್ತು.ಸದ್ಯ ಸಂತ್ರಸ್ಥ ಮನೆಯಲ್ಲಿ ಯಜಮಾನ ನೂರ್ ಮುಹಮ್ಮದ್ ಮತ್ತು ಓರ್ವ ಪುತ್ರ ಮಾತ್ರ ಇದ್ದು ನಿತ್ಯ ಕಣ್ಣೀರು ಹಾಕುತ್ತಾ ದಿನ ದೂಡುತ್ತಿದ್ದಾರೆ.

Latest Videos

undefined

ರಿಪೇರಿ ಮಾಡದಷ್ಟು ಹದಗೆಟ್ಟಿರುವ ಬಿಜೆಪಿ ಪಕ್ಷ: ಜಗದೀಶ್‌ ಶೆಟ್ಟರ್‌

ನೇಜಾರು ಕಗ್ಗೊಲೆ ಆರೋಪಿಗೆ ಗಲ್ಲುಶಿಕ್ಷೆಯೇ ಆಗಬೇಕು: ಇಲ್ಲಿನ ನೇಜಾರು ಗ್ರಾಮದಲ್ಲಿ ನಡೆದ ತಾಯಿ ಮತ್ತು ಮೂವರ ಮಕ್ಕಳ ಕಗ್ಗೊಲೆ ಅಪರೂಪದಲ್ಲಿಯೇ ಅಪರೂಪದ ಪ್ರಕರಣವಾಗಿದ್ದು, ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಜಿ ಪೊಲೀಸ್ ಅಧಿಕಾರಿಯೂ ಆಗಿರುವ ಅವರು ಬುಧವಾರ ಕಗ್ಗೊಲೆ ನಡೆದ ನೇಜಾರಿನ ನೂರ್ ಮಹಮ್ಮದ್ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು.

ಸಾಧಾರಣವಾಗಿ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಅಂದರೆ 14 ವರ್ಷಗಳ ಜೈಲು ಶಿಕ್ಷೆಯಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಆರೋಪಿಯು ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ್ದಾನೆ, 10 - 15 ಬಾರಿ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ, ಇದರಿಂದ ಆತನಲ್ಲಿ ಮಾನವೀಯತೆ. ಕರುಣೆ ಎಂಬುದೇ ಇರಲಿಲ್ಲ ಎಂದು ತಿಳಿಯುತ್ತಿದೆ. ಆದ್ದರಿಂದ ಇದು ಅಪರೂಪದಲ್ಲಿಯೇ ಅಪರೂಪದ ಪ್ರಕರಣ ಎಂದು ಪೊಲೀಸರು ಸಾಬೀತು ಮಾಡಿ, ಆತನಿಗೆ ಗಲ್ಲು ಶಿಕ್ಷೆಯಾಗುವಂತೆ ಮಾಡಬೇಕು, ಆಗ ಮಾತ್ರ ಕೊಲೆಯಾದವರ ಆತ್ಮಗಳಿಗೆ ಶಾಂತಿ ಸಿಗುತ್ತದೆ ಎಂದರು.

ಡಿಕೆಶಿಯಿಂದ ಲೀಲಾವತಿ ಪಶು ಆಸ್ಪತ್ರೆ ಉದ್ಘಾಟನೆ: ಹಿರಿಯ ನಟಿಯ ಆರೋಗ್ಯ ವಿಚಾರಿಸಿದ ಡಿಸಿಎಂ!

ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವ ಅಗತ್ಯ ಇಲ್ಲ, ಉಡುಪಿ ಪೊಲೀಸರು ಬಹಳ ದಕ್ಷರಿದ್ದು ಸರಿಯಾಗಿ ತನಿಖೆ ಮಾಡುತ್ತಿದ್ದಾರೆ. ಆದರೆ ಈ ತನಿಖೆಯ ಮೇಲುಸ್ತುವಾರಿಯನ್ನು ಸ್ವತಃ ಪಶ್ಚಿಮ ವಲಯ ಐಜಿಪಿ ಅವರೇ ನೋಡಿಕೊಳ್ಳಬೇಕು. ಹೊರಗೆ ಏನೇನು ಮಾತುಗಳು ಕೇಳಿಬರುತ್ತಿವೆ. ಅವುಗಳ ಬಗ್ಗೆ ಗಮನ ಕೊಡದೆ ಪೊಲೀಸರು ತಮ್ಮ ಥಿಯರಿಗೆ ಬದ್ಧವಾಗಿ ಕೆಲಸ ಮಾಡಬೇಕು ಎಂದವರು ಸಲಹೆ ಮಾಡಿದರು. ಒಂದು ವರ್ಷದೊಳಗೆ ತನಿಖೆ ನಡೆಸಿ, ಆರೋಪ ಪಟ್ಟಿಯನ್ನು ಸಲ್ಲಿಸಿ, ವಿಚಾರಣೆ ಮುಗಿದು ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ಆದ್ದರಿಂದ ಪ್ರಕರಣವನ್ನು ಶೀಘ್ರವಾಗಿ ಮುಗಿಸಲು ವಿಶೇಷ ತ್ವರಿತ ನ್ಯಾಯಾಲಯದಲ್ಲಿ ತನಿಖೆ ಮಾಡಬೇಕು ಎಂದರು.

click me!