ವಾಣಿಜ್ಯ ಬೆಳೆಯಾದ ತೆಂಗು ಬೆಳೆಯನ್ನು ಬೆಳೆಯಲು ರೈತರು ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು.
ಪಿರಿಯಾಪಟ್ಟಣ : ವಾಣಿಜ್ಯ ಬೆಳೆಯಾದ ತೆಂಗು ಬೆಳೆಯನ್ನು ಬೆಳೆಯಲು ರೈತರು ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು.
ತಾಲೂಕಿನ ಮೇಲೂರು ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿರಿಗೆ ತೆಂಗಿನ ಸಸಿಗಳನ್ನು ವಿತರಿಸಿ ಅವರು ಮಾತನಾಡಿದರು.
ರೈತರು ಆರ್ಥಿಕವಾಗಿ ಸದೃಢರಾಗಬೇಕಾದರೆ ತೆಂಗಿನ ಬೆಳೆ ಬೆಳೆಯಬೇಕು, ತೆಂಗು ಕಲ್ಪವೃಕ್ಷವೆಂದು ಪ್ರಖ್ಯಾತವಾಗಿದ್ದು, ಇದನ್ನು ನಂಬಿದವರನ್ನು ಕೈ ಬಿಟ್ಟಿಲ್ಲ ತೆಂಗಿಗೆ ಉತ್ತಮವಾದ ಬೆಲೆಯಿದ್ದು, ಎಳನೀರಿಗೂ ಕೂಡ ಹೆಚ್ಚಿನ ಬೇಡಿಕೆ ಇದೆ. ಬೇರೆ ರಾಜ್ಯಗಳಿಗೆ ಕೂಡ ಮಾರಾಟವಾಗುತ್ತಿದೆ, ಆ ಮೂಲಕ ರೈತರು ಹೆಚ್ಚಿನ ಲಾಭ ಪಡೆಯಬಹುದಾಗಿದೆ.
ಸರ್ಕಾರದ ವತಿಯಿಂದ ಈ ಯೋಜನೆ ಜಾರಿ ಮಾಡಲಾಗಿದ್ದು, ಪಿರಿಯಾಪಟ್ಟಣ ತಾಲೂಕಿನಲ್ಲಿ 70 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 8,500 ಸಸಿಗಳನ್ನು ವಿತರಿಸಲಾಗುತ್ತಿದ್ದು, ಒಟ್ಟು 175 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ ಅವಕಾಶವನ್ನು ನೀರಾವರಿ ಇರುವ ರೈತರು ಸದುಪಯೋಗ ಪಡಿಸಿಕೊಳ್ಳಬೇಕು, ತೆಂಗಿನ ಜೊತೆಗೆ ರೈತರು ರೇಷ್ಮೆಯನ್ನು ಕೂಡ ಬೆಳೆಯಬೇಕು, ರೇಷ್ಮೆಗೆ ಪ್ರಪಂಚದಾದ್ಯಂತ ಉತ್ತಮ ಬೇಡಿಕೆ ಇದೆ. ತಂಬಾಕಿಗೆ ಪರ್ಯಾಯವಾಗಿ ಈ ಬೆಳೆಯನ್ನು ಬೆಳೆಯಬಹುದಾಗಿದೆ ಎಂದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎನ್. ಪ್ರಸನ್ನಕುಮಾರ್ ರೈತರಿಗೆ ಮಾಹಿತಿ ನೀಡಿದರು.
ಸಿ.ಎಸ್. ಶಿವಕುಮಾರ್, ಲೋಕೇಶ್, ಎಂ.ಸಿ. ಪ್ರಸಾದ್, ರವಿ, ಕರಿಗೌಡ, ಶಂಕರಲಿಂಗಪ್ಪ, ಮಲ್ಲಿಕಾರ್ಜುನ. ಮುಕ್ ಬುಲ್, ಶಂಸುದ್ದೀನ್, ಅಸ್ಲಾಂ ಇದ್ದರು.