ಉಡುಪಿಯಲ್ಲಿ ಇಂದು ಕೃಷ್ಣ ಜನ್ಮಾಷ್ಟಮಿ ಇಲ್ಲ

By Suvarna News  |  First Published Aug 11, 2020, 9:36 AM IST

ನಾಡಿನಾದ್ಯಂತ ಆ.11ರಂದು ಕೃಷ್ಣಜನ್ಮಾಷ್ಟಮಿ ಆಚರಣೆ ನಡೆಯಲಿದೆ. ಆದರೆ ಬಾಲಕೃಷ್ಣನ ಉಡುಪಿಯಲ್ಲಿ ಮಾತ್ರ ಯಾವುದೇ ಆಚರಣೆಗಳಿಲ್ಲ.


ಉಡುಪಿ(ಆ.11): ನಾಡಿನಾದ್ಯಂತ ಆ.11ರಂದು ಕೃಷ್ಣಜನ್ಮಾಷ್ಟಮಿ ಆಚರಣೆ ನಡೆಯಲಿದೆ. ಆದರೆ ಬಾಲಕೃಷ್ಣನ ಉಡುಪಿಯಲ್ಲಿ ಮಾತ್ರ ಯಾವುದೇ ಆಚರಣೆಗಳಿಲ್ಲ. ಚಾಂದ್ರಮಾನ ಪಂಚಾಂಗದ ಪ್ರಕಾರ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನ ಜನ್ಮದಿನವನ್ನು ಆಚರಿಸಲಾಗುತ್ತದೆ. ಅದರಂತೆ ಕೆಲವು ಕಡೆಗಳಲ್ಲಿ ಆ.11ರಂದು ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯುತ್ತದೆ.

ಆದರೆ ಉಡುಪಿ ಕೃಷ್ಣಮಠದಲ್ಲಿ ಸೌರಮಾನ ಪಂಚಾಂಗವನ್ನು ಅನುಸರಿಸಲಾಗುತ್ತದೆ. ಅದರ ಪ್ರಕಾರ ಸಿಂಹ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣಾಷ್ಟಮಿ ನಡೆಯುತ್ತದೆ.

Latest Videos

undefined

ಕೃಷ್ಣನ ಅವತಾರಕ್ಕೆ ಕೃತಜ್ಞತೆ ಸಲ್ಲಿಸುವ ಅಷ್ಟಮಿ!

ಅಂದರೆ ಇಂದಿಗೆ ಒಂದು ತಿಂಗಳ ನಂತರ, ಸೆ.10ರಂದು ಉಡುಪಿಯಲ್ಲಿ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಸೆ.10ರಂದು ರಾತ್ರಿ ಕೃಷ್ಣನ ಹುಟ್ಟಿದ ಗಳಿಗೆಯಲ್ಲಿ ಕೃಷ್ಣನಿಗೆ ಅಘ್ರ್ಯ ಪ್ರದಾನ, ಮರುದಿನ ಕೃಷ್ಣನಿಗೆ ರಥೋತ್ಸವ, ಬಾಲಕ ಕೃಷ್ಣನ ಲೀಲೋತ್ಸವ, ಮೊಸರಕುಡಿಕೆ ಹಬ್ಬ ವೈಭವದಿಂದ ನಡೆಯುತ್ತವೆ. ಈ ಬಾರಿ ಇನ್ನೂ ಕೊರೋನಾ ಸೋಂಕಿನ ಭೀತಿ ಇರುವುದರಿಂದ, ಲಕ್ಷಾಂತರ ಮಂದಿ ಸೇರುವ ಸೆ.11ರ ಉತ್ಸವವಾದಿಗಳು ನಡೆಯುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.

click me!