ಬೆಂಗ್ಳೂರು ಪೊಲೀಸರಿಗೆ ಕೊರೋನಾ ಭೀತಿ: ಠಾಣೆಯಲ್ಲಿ ವಿಶೇಷ ಪೂಜೆ

Kannadaprabha News   | Asianet News
Published : Jul 12, 2020, 09:11 AM IST
ಬೆಂಗ್ಳೂರು ಪೊಲೀಸರಿಗೆ ಕೊರೋನಾ ಭೀತಿ: ಠಾಣೆಯಲ್ಲಿ ವಿಶೇಷ ಪೂಜೆ

ಸಾರಾಂಶ

ಮಹಾಮಾರಿ ಕೊರೋನಾ ಕಾಟದಿಂದ ಆತಂಕಗೊಂಡಿರುವ ರಾಜಧಾನಿ ಪೊಲೀಸರು ಈಗ ದೇವರ ಮೊರೆ ಹೋಗಿದ್ದು, ಮೈಕೋ ಲೇಔಟ್‌ ಸಿಬ್ಬಂದಿ ಠಾಣೆಯಲ್ಲೇ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಠಾಣೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಣಗಳಲ್ಲಿ ವೈರಲ್‌ ಆಗಿವೆ.

ಬೆಂಗಳೂರು(ಜು.12): ಮಹಾಮಾರಿ ಕೊರೋನಾ ಕಾಟದಿಂದ ಆತಂಕಗೊಂಡಿರುವ ರಾಜಧಾನಿ ಪೊಲೀಸರು ಈಗ ದೇವರ ಮೊರೆ ಹೋಗಿದ್ದು, ಮೈಕೋ ಲೇಔಟ್‌ ಸಿಬ್ಬಂದಿ ಠಾಣೆಯಲ್ಲೇ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಠಾಣೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಣಗಳಲ್ಲಿ ವೈರಲ್‌ ಆಗಿವೆ.

ಎಲ್ಲೆಡೆ ಕೊರೋನಾ ಆತಂಕ ತಂದಿದೆ. ಇದರಿಂದ ಪೊಲೀಸರು ಹೊರತಾಗಿಲ್ಲ. ನಮ್ಮ ಠಾಣಾ ಸಿಬ್ಬಂದಿಗೆ ಸೋಂಕು ಹರಡದಂತೆ ದೇವರಿಗೆ ಪೂಜೆ ಸಲ್ಲಿಸಿದ್ದು, ಒಳ್ಳೆಯದನ್ನು ಮಾಡು ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಮೈಕೋ ಲೇಔಟ್‌ ಠಾಣೆ ಇನ್ಸ್‌ಪೆಕ್ಟರ್‌ ಘೋರ್ಪಡೆ ಯಲ್ಲಪ್ಪ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಬೆಂಗಳೂರಲ್ಲಿ ಮೊದಲ ಬಾರಿ 1500+ ಕೇಸ್‌, ಸೋಂಕಿತರ ಸಂಖ್ಯೆ 17000 ಗಡಿಗೆ

ಹೋಮ-ಹವನ ಮಾಡಿಲ್ಲ. ಠಾಣೆಯಲ್ಲೇ ಇದ್ದ ಗಣಪತಿ ಪೋಟೋಗೆ ಅರ್ಚಕರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಪೂಜೆ ಬಳಿಕ ಠಾಣೆಗೆ ಯಾವುದೇ ತೊಂದರೆ ಉಂಟಾಗಬಾರದು ಎಂದು ಕುಂಬಳ ಕಾಯಿ ನಿವಾಳಿಸಿ ಹೊಡೆಯಲಾಯಿತು. ನಂತರ ಸಿಬ್ಬಂದಿಗೆ ಆರ್ಯುವೇದಿಕ ಕಷಾಯ ವಿತರಿಸಲಾಯಿತು ಎಂದು ವಿವರಿಸಿದರು.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!