ಬೆಂಗಳೂರಲ್ಲಿ ಮೊದಲ ಬಾರಿ 1500+ ಕೇಸ್‌, ಸೋಂಕಿತರ ಸಂಖ್ಯೆ 17000 ಗಡಿಗೆ

By Kannadaprabha News  |  First Published Jul 12, 2020, 9:04 AM IST

ಬೆಂಗಳೂರಲ್ಲಿ ನಗರದಲ್ಲಿ ಕೊರೋನಾ ಸೋಂಕಿನ ಆಟ್ಟಹಾಸ ಮುಂದುವರೆದಿದ್ದು, ಶನಿವಾರ ಒಂದೇ ದಿನ ಒಂದೂವರೆ ಸಾವಿರಕ್ಕೂ ಅಧಿಕ ಸಂಖ್ಯೆಯ ಹೊಸ ಸೋಂಕು ಪ್ರಕರಣ ಪತ್ತೆಯಾಗಿವೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಸಂಖ್ಯೆಯ ಸೋಂಕು ಪ್ರಕರಣ ಕಾಣಿಸಿಕೊಂಡಿದ್ದು, ನಗರದ ಜನರನ್ನು ಇನ್ನಷ್ಟುಆತಂಕಕ್ಕೆ ದೂಡಿದೆ.


ಬೆಂಗಳೂರು(ಜು.12): ನಗರದಲ್ಲಿ ಕೊರೋನಾ ಸೋಂಕಿನ ಆಟ್ಟಹಾಸ ಮುಂದುವರೆದಿದ್ದು, ಶನಿವಾರ ಒಂದೇ ದಿನ ಒಂದೂವರೆ ಸಾವಿರಕ್ಕೂ ಅಧಿಕ ಸಂಖ್ಯೆಯ ಹೊಸ ಸೋಂಕು ಪ್ರಕರಣ ಪತ್ತೆಯಾಗಿವೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಸಂಖ್ಯೆಯ ಸೋಂಕು ಪ್ರಕರಣ ಕಾಣಿಸಿಕೊಂಡಿದ್ದು, ನಗರದ ಜನರನ್ನು ಇನ್ನಷ್ಟುಆತಂಕಕ್ಕೆ ದೂಡಿದೆ.

ಶನಿವಾರ 1,533 ಪ್ರಕರಣ ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 16,862ಕ್ಕೆ ಏರಿಕೆಯಾಗಿದೆ. 404 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಗುಣಮುಖರಾದವರ ಸಂಖ್ಯೆ 3,839ಕ್ಕೆ ಏರಿಕೆಯಾಗಿದೆ. ಇನ್ನು 12,793 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Latest Videos

undefined

23 ಮಂದಿ ಬಲಿ:

ಶನಿವಾರ ಒಟ್ಟು 23 ಮಂದಿ ಮೃತಪಟ್ಟವರದಿಯಾಗಿದೆ. ಮೃತಪಟ್ಟ22 ಮಂದಿ 50 ವರ್ಷ ಮೇಲ್ಪಟ್ಟವರಾಗಿದ್ದಾರೆ. ಇನ್ನುಳಿದ ಒಬ್ಬರು 49 ಮಹಿಳೆಯಾಗಿದ್ದಾರೆ. ಈ ಮೂಲಕ ನಗರದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 229ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

5 ದಿನದಲ್ಲಿ 2,294 ಮಂದಿ ಡಿಸ್ಚಾಜ್‌ರ್‍:

ನಗರದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರ ಜತೆಗೆ ಗುಣಮುಖವಾಗುತ್ತಿರುವ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳದೆ ಐದು ದಿನದಲ್ಲಿ ನಗರದಲ್ಲಿ ಬರೋಬ್ಬರಿ 2,294 ಮಂದಿ ಗುಣಮುಖರಾಗಿದ್ದಾರೆ. ಇನ್ನು ಐದು ದಿನದಲ್ಲಿ 6,301 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. 74 ಮಂದಿ ಮೃತಪಟ್ಟಿದ್ದಾರೆ.

21 ಮಂದಿ ಐಸಿಯುಗೆ

ಇನ್ನು ಶನಿವಾರ ಒಂದೇ ದಿನ ನಗರದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಪೈಕಿ 21 ಮಂದಿಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕಕ್ಕೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 322ಕ್ಕೆ ಏರಿಕೆಯಾಗಿದೆ.

click me!