ಯಶವಂತಪುರ-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ಹೆಚ್ಚುವರಿ ಸೇವೆ, ಇಲ್ಲಿದೆ ವೇಳಾಪಟ್ಟಿ

Published : Jul 29, 2025, 05:13 PM ISTUpdated : Jul 29, 2025, 05:18 PM IST
Train

ಸಾರಾಂಶ

ಪ್ರಯಾಣಿಕರ ಬೇಡಿಕೆ ಪೂರೈಸಲು ಯಶವಂತಪುರ-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿನ ಹೆಚ್ಚುವರಿ ಸೇವೆ ಆರಂಭ. ಆಗಸ್ಟ್ 1 ಮತ್ತು 8 ರಂದು ಯಶವಂತಪುರದಿಂದ ಹಾಗೂ ಆಗಸ್ಟ್ 2 ಮತ್ತು 9 ರಂದು ತಾಳಗುಪ್ಪದಿಂದ ಹೆಚ್ಚುವರಿ ರೈಲುಗಳು ಸಂಚರಿಸಲಿವೆ.

ಶಿವಮೊಗ್ಗ: ಪ್ರಯಾಣಿಕರ ಹೆಚ್ಚಿದ ಬೇಡಿಕೆಯನ್ನು ಪೂರೈಸುವ ಸಲುವಾಗಿ ರೈಲು ಗಾಡಿ ಸಂಖ್ಯೆ 06584 / 06588 ಯಶವಂತಪುರ-ತಾಳಗುಪ್ಪ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪ್ರತಿ ದಿಕ್ಕಿನಲ್ಲಿ ತಲಾ ಎರಡು ಹೆಚ್ಚುವರಿ ಟ್ರಿಪ್‌ಗಳಿಗೆ ನೈಋತ್ಯ ರೈಲ್ವೆಯು ವಿಸ್ತರಿಸಿದೆ.

ರೈಲು ಗಾಡಿ ಸಂಖ್ಯೆ 06587 ಯಶವಂತಪುರ-ತಾಳಗುಪ್ಪ ವಿಶೇಷ ಎಕ್ಸ್‌ಪ್ರೆಸ್ ರೈಲು ಆಗಸ್ಟ್ 1 ಮತ್ತು 8 ರಂದು(ಶುಕ್ರವಾರ) ಯಶವಂತಪುರದಿಂದ ರಾತ್ರಿ 10.30 ಗಂಟೆಗೆ ಹೊರಟು ಮರುದಿನ (ಶನಿವಾರ) ಬೆಳಗಿನ ಜಾವ 4.15 ಗಂಟೆಗೆ ತಾಳಗುಪ್ಪ ತಲುಪಲಿದೆ.

ಅದೇ ರೀತಿ ರೈಲು ಗಾಡಿ ಸಂಖ್ಯೆ 06588 ತಾಳಗುಪ್ಪ-ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಆಗಸ್ಟ್ 2 ಮತ್ತು 9, 2025 (ಶನಿವಾರ) ತಾಳಗುಪ್ಪದಿಂದ ಬೆಳಗ್ಗೆ 8.15 ಗಂಟೆಗೆ ಹೊರಟು, ಅದೇ ದಿನ ಸಂಜೆ 4.50 ಗಂಟೆಗೆ ಯಶವಂತಪುರ ತಲುಪಲಿದೆ.

ಈ ರೈಲು ಎರಡೂ ಮಾರ್ಗದಲ್ಲಿ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರಂ ಮತ್ತು ಸಾಗರ ಜಂಬಗಾರು ರೈಲು ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿವೆ. ಈ ಸೌಲಭ್ಯವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಕೆಎಚ್‌ಬಿ ಬಡಾವಣೆ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರ, ದಾಖಲೆಗಳಲ್ಲಿ ಒಂದು, ವಾಸ್ತವದಲ್ಲಿ ಇನ್ನೊಂದು!
ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಕಾರಿದ್ದರೇನು? ಆರ್‌ಟಿಒ ಅಧಿಕಾರಿಗಳ ಮುಂದೆ ಮಂಡಿಯೂರಿದ ಮಾಲೀಕ!