* ಮೂಲಕ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಬೇಕು
* ಕೋರ್ಟ್ ತೀರ್ಪು ಬರುವವರೆಗೂ ಕೇಸರಿ ಶಾಲು, ಹಿಜಾಬ್ ಧರಿಸಬಾರದು
* ಪಿಯುಸಿ ಹಾಗೂ ಕಾಲೇಜ್‌ಗಳಲ್ಲಿ ಸಮವಸ್ತ್ರಗಳ ಬಗ್ಗೆ ಆಯಾ ಕಾಲೇಜ್‌ಗಳು ನಿರ್ಧರಿಸುತ್ತವೆ
ಹುಬ್ಬಳ್ಳಿ(ಫೆ.12): ಹಿಜಾಬ್(Hijab) ಮತ್ತು ಕೇಸರಿ(Saffron) ಶಾಲು ವಿವಾದಕ್ಕೆ(Controversy) ಸಂಬಂಧಪಟ್ಟಂತೆ ಸರ್ಕಾರ ಕೂಡಲೇ ವಿವಿಧ ಪಕ್ಷಗಳ ಮುಖಂಡರು, ಪಾಲಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆ ಕರೆಯಬೇಕು. ಈ ಮೂಲಕ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿSSLC) ವರೆಗೂ ಸಮವಸ್ತ್ರವಿದೆ. ಅದಕ್ಕೆ ಸಮಸ್ಯೆಯಿಲ್ಲ. ಪಿಯುಸಿ(PUC)ಹಾಗೂ ಕಾಲೇಜ್‌ಗಳಲ್ಲಿ(Colleges) ಸಮವಸ್ತ್ರಗಳ(Uniform) ಬಗ್ಗೆ ಆಯಾ ಕಾಲೇಜ್‌ಗಳು ನಿರ್ಧರಿಸುತ್ತವೆ. ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಕೂಡಲೇ ಸಭೆ ಕರೆಯಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
Namaz In School: ಹಿಜಾಬ್ ವಿವಾದದ ನಡುವೆ ಮಂಗಳೂರಿನ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಮಾಜ್
ನ್ಯಾಯಾಲಯದಲ್ಲಿ(Cpurt) ಪ್ರಕರಣವಿದೆ. ಅದು ತನ್ನ ತೀರ್ಪು ನೀಡುತ್ತದೆ. ಅದನ್ನು ಸರ್ಕಾರ ಅನುಷ್ಠಾನಗೊಳಿಸುತ್ತದೆ. ಆ ವಿಚಾರ ಬೇರೆ. ಕೋರ್ಟ್ ತೀರ್ಪು ಬರುವವರೆಗೂ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಜಕ್ಕೆ ಧಕ್ಕೆ ತರುವಂತಹ ಕೇಸರಿ ಶಾಲು, ಹಿಜಾಬ್ ಧರಿಸಬಾರದು ಎಂದರು. ಇದರಲ್ಲಿ ರಾಜಕೀಯವೂ(Politics) ನುಸುಳಿದೆ ಎಂಬ ಪ್ರಶ್ನೆಗೆ, ಇದು ಸಹಜ. ರಾಜಕೀಯ ನಡೆಯುತ್ತದೆ. ರಾಜಕೀಯವಾಗಿ ಬಳಸುವುದರಿಂದ ಏನೇನು ಅನಾಹುತಗಳಾಗುತ್ತವೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ ಎಂದರು.
ಬಿಜೆಪಿ ಸೇರುವ ಪ್ರಶ್ನೆ ಇಲ್ಲ:
ಸದ್ಯಕ್ಕೆ ಬಿಜೆಪಿ(BJP) ಸೇರುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸೇರುವ ಬಗ್ಗೆ ನಾನು ಎಲ್ಲೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ ಹೊರಟ್ಟಿ, ಶಿಕ್ಷಕರ ಕ್ಷೇತ್ರಕ್ಕೆ ಆಯಾ ಪಕ್ಷ ಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಿವೆ. ಮೇ ತಿಂಗಳಲ್ಲಿ ಚುನಾವಣೆ ಇದೆ. ನನ್ನ ಚುನಾವಣೆ ವಿಚಾರದಲ್ಲಿ ಜಾತಿ ಪ್ರಶ್ನೆಯೇ ಬರುವುದಿಲ್ಲ. ಶಿಕ್ಷಕರ ಬೆಂಬಲ ನನಗಿದೆ. ಯಾವ ಪಕ್ಷಕ್ಕೂ ಹೋಗಬೇಕೆಂಬುದಿಲ್ಲ. ಕೆಲವರು ಸ್ನೇಹಿತರು ಬಿಜೆಪಿಗೆ ಸೇರುವಂತೆ ಆಹ್ವಾನ ನೀಡಿದ್ದರು. ಮತ್ತೆ ಕೆಲವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಸಲಹೆ ನೀಡಿದ್ದಾರೆ. ಇನ್ನೂ ಸಾಕಷ್ಟುಸಮಯಾವಕಾಶವಿದೆ. ಬಜೆಟ್ ಅಧಿವೇಶನದ ನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಬಜೆಟ್ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಪರಿಷತ್‌ನಲ್ಲಿ ಮಂಡನೆಯಾಗಲಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವ ಮಸೂದೆಗಳು ಮಂಡನೆಯಾಗುತ್ತವೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಪರಿಷತ್‌ನಲ್ಲಿ ಮಂಡನೆ ಆದರೂ ನೆಕ್ ಟು ನೆಕ್ ಫೈಟ್ ಇದೆ ಎಂದರು.
ಹಿಜಾಬ್-ಕೇಸರಿ ಶಾಲು ಗಲಾಟೆ ಮೂರ್ಖತನದ್ದು: ಹೊರಟ್ಟಿ
ಪ್ರಸ್ತುತ ರಾಜ್ಯದಲ್ಲಿ(Karnataka) ನಡೆಯುತ್ತಿರುವ ಹಿಜಾಬ್-ಕೇಸರಿ ಶಾಲು ಗಲಾಟೆಯಿಂದ ಯಾವುದೇ ಪ್ರಯೋಜನವಿಲ್ಲ. ಇದು ಷಡ್ಯಂತ್ರವಲ್ಲ, ಮೂರ್ಖತನ. ಇದರಿಂದ ಹೆಣಗಳು ಬೀಳುತ್ತವೆ, ಬೆಂಕಿ ಹತ್ತುತ್ತದೆ ಅಷ್ಟೇ. ಕೂಡಲೇ ರಾಜ್ಯ ಸರ್ಕಾರ ಪರಿಣಿತರ ಸಭೆ ಕರೆದು ಮನವೊಲಿಸುವ ಮೂಲಕ ಶಾಂತಿಯುತ ವಾತಾವರಣ ಸೃಷ್ಟಿಬೇಕೆಂದು ಕಿವಿಮಾತು ಹೇಳಿದ್ದಾರೆ.
ಮಕ್ಕಳ ಮನಸ್ಸು ಮೃದು ಇರುತ್ತದೆ. ಈಗ ನಡೆಯುತ್ತಿರುವ ಪ್ರಕರಣದಿಂದ ಅವರ ಭವಿಷ್ಯಕ್ಕೆ ಅಪಾಯಕಾರಿಯಾಗಿದೆ. ಈ ಬಗ್ಗೆ ಅವರವರ ಪಾಲಕರು ಯೋಚನೆ ಮಾಡಬೇಕು ಎಂದರು.
Karnataka Hijab Row : 'ವಿಳಾಸ, ಪೋನ್ ನಂಬರ್ ಕಾಲೇಜಿನಿಂದಲೇ ಲೀಕ್ ಆಗಿದೆ.. SPಗೆ ವಿದ್ಯಾರ್ಥಿನಿಯರ ದೂರು
ಒಂದು ಕಡೆ ಪಾಕ್ ಜಿಂದಾಬಾದ್, ಅಲ್ಲಾಹೋ ಅಕ್ಬರ್ ಎಂಬ ಘೋಷಣೆ ಕೂಗುತ್ತಾರೆ, ಮತ್ತೊಂದು ಕಡೆಯವರು ಜೈ ಶ್ರೀರಾಮ್ ಎಂಬ ಘೋಷಣೆಗಳು ಮೊಳಗುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಹೆಣಗಳು ಬೀಳುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ವಿಷಯದಲ್ಲಿ ನ್ಯಾಯಾಲಯ(Court) ಏನೇ ತೀರ್ಪು ನೀಡಿದರೂ ಸರ್ಕಾರ ಕೂಡಲೇ ಅದನ್ನು ಜಾರಿ ಮಾಡಿ ಶಾಂತಿ ವಾತಾವರಣ ಸೃಷ್ಟಿಸಬೇಕು. ಜತೆಗೆ ರಾಜ್ಯ ಸರ್ಕಾರ(Government of Karnataka) ಕೂಡಲೇ ರಾಜಕೀಯ ಬಿಟ್ಟು ಪರಿಣಿತರ ಸಭೆ ಕರೆಯಬೇಕು. ಈ ಗಲಾಟೆ ಬರುವ ದಿನಗಳಲ್ಲಿ ರಾಷ್ಟ್ರವ್ಯಾಪಿ ವಿಸ್ತಾರವಾಗುತ್ತದೆ. ಆದ್ದರಿಂದ ವಿಧಾನಸಭೆ ಅಧಿವೇಶನಕ್ಕೂ ಮುಂಚೆ ಇದನ್ನು ನಿಲ್ಲಿಸಬೇಕೆಂದು ಹೊರಟ್ಟಿ ಆಗ್ರಹಿಸಿದರು.
ಬಿಕಿನಿ ಧರಿಸಿದರೂ ತಪ್ಪಲ್ಲ ಎಂದು ಪ್ರಿಯಾಂಕಾ ಗಾಂಧಿ(Priyanka Gandhi) ಟ್ವೀಟ್‌ಗೆ, ಇಂತಹ ಹೇಳಿಕೆಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೇಳುತ್ತಾರೆ. ಯಾರೇ ಇದ್ದರೂ ಎಂತಹ ಬಟ್ಟೆ ಧರಿಸಬೇಕೆಂದು ಅವರವರ ತಂದೆ-ತಾಯಿ ಕಲಿಸಬೇಕು. ಪ್ರಿಯಾಂಕಾ ಅವರು ತಾಯಿ ಸ್ಥಾನದಲ್ಲಿದ್ದಾರೆ. ಬಿಕಿನಿ ಹಾಕಿಕೊಂಡು ಹೋಗಿ ಎನ್ನುವುದು ತಪ್ಪಾಗುತ್ತದೆ. ಹಕ್ಕಿದೆ ಎಂದ ಮಾತ್ರಕ್ಕೆ ಕಾಲೇಜಿಗೆ ಬಿಕಿನಿ ಹಾಕಿಕೊಂಡು ಹೋಗು ಎನ್ನುವುದಲ್ಲ. ಯಾವ ಸ್ಥಳದಲ್ಲಿ ಏನು ಧರಿಸಬೇಕು ಎನ್ನುವುದು ಮುಖ್ಯವಾಗುತ್ತದೆ. ಸಮುದ್ರ ತೀರದಲ್ಲಿ ಬಿಕಿನಿ ಹಾಕಿಕೊಂಡರೆ ಯಾರಾದರೂ ಪ್ರಶ್ನಿತ್ತಾರೆಯೇ? ಎಂದು ಹೊರಟ್ಟಿ ಪ್ರಶ್ನಿಸಿದರು.